ಎಲ್ಲಾ ಪಡಿತರ ಚೀಟಿದಾರರು ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವದು ಕಡ್ಡಾಯವಾಗಿದೆ. ಆ.31 ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಬೆ.7.00 ರಿಂದ ರಾ. 9.00 ರವರೆಗೆ ಉಚಿತವಾಗಿ ಮಾಡಿಸಿಕೊಳ್ಳುವುದು.
ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಈ ದಾಖಲೆಗಳು ಕಡ್ಡಾಯ
ಪಡಿತರ ಚೀಟಿಯ ಒರಿಜಿನಲ್ ಪ್ರತಿ
ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ
ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ
ಬ್ಯಾಂಕ್ ಪಾಸ್‌ಬುಕ್‌ನ ಫೋಟೋಕಾಪಿ
ಕುಟುಂಬದ ಯಜಮಾನನ ಎರಡು ಪಾಸ್‌ಪೋರ್ಟ್ ಅಳತೆಯ ಪೋಟೋ
ಪಡಿತರ ಚೀಟಿ ಮತ್ತು ಆಧಾರ್ ಅನ್ನು ಆನ್ ಲೈನ್ ನಲ್ಲಿ ಈ ರೀತಿ ಲಿಂಕ್ ಮಾಡಿ
ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್ಗೆ ಭೇಟಿ ನೀಡಿ.
ಸಕ್ರಿಯ ಕಾರ್ಡ್ನೊಂದಿಗೆ ಆಧಾರ್ ಲಿಂಕ್ ಆಯ್ಕೆ ಮಾಡಿ.
ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಮುಂದುವರಿಯಿರಿ / ಸಲ್ಲಿಸಿ ಬಟನ್ ಆಯ್ಕೆ ಮಾಡಿ.