Monkeypox: ಮಂಕಿಪಾಕ್ಸ್ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು? ಮಂಕಿಪಾಕ್ಸ್ ಕಾಯಿಲೆ ಹೇಗೆ ಹರಡುತ್ತದೆ?

Monkeypox: ಮಂಕಿಪಾಕ್ಸ್ (Monkeypox) ಒಂದು ವೈರಲ್ ಸೋಂಕು (Viral infection) ರೋಗ ಆಗಿದ್ದು, ಅದು ರೋಡಂಟ್ಸ್ ಮತ್ತು ಪ್ರೈಮೆಟ್‍ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ. ಇದು ಆರ್ಥೋಪಾಕ್ಸ್ ವೈರಸ್ ಕುಲಕ್ಕೆ…

monkeypox

Monkeypox: ಮಂಕಿಪಾಕ್ಸ್ (Monkeypox) ಒಂದು ವೈರಲ್ ಸೋಂಕು (Viral infection) ರೋಗ ಆಗಿದ್ದು, ಅದು ರೋಡಂಟ್ಸ್ ಮತ್ತು ಪ್ರೈಮೆಟ್‍ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ.

ಇದು ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದೆ ಮತ್ತು ಸಿಡುಬು ರೋಗವನ್ನು ಉಂಟುಮಾಡುವ ವೈರಸ್‌ನಂತೆಯೇ ಇದೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಹರಡುವ ಈ ರೋಗವು ಇತ್ತೀಚೆಗೆ ಕರ್ನಾಟಕದಲ್ಲೂ ಕೆಲವು ಪ್ರಕರಣಗಳನ್ನು ದಾಖಲಿಸಿದ್ದು ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಂಕಿಪಾಕ್ಸ್ ಕಾಯಿಲೆ ಹೇಗೆ ಹರಡುತ್ತದೆ? How is monkeypox spread

monkeypox
How is monkeypox spread

ಮಂಕಿಪಾಕ್ಸ್ ಅಥವಾ Mpox ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ರೋಗವು ಸೋಂಕು ಇರುವ ಪ್ರಾಣಿಯ ದೇಹದ ದ್ರವಗಳು, ರಕ್ತ, ಗಾಯಗಳು ಇತ್ಯಾದಿಗಳೊಂದಿಗೆ ನೇರ ಸಂಪರ್ಕವಿರುವ ಮನುಷ್ಯರಿಗೆ ಮೊದಲು ಹರಡುತ್ತದೆ.

Vijayaprabha Mobile App free

ಒಬ್ಬ ವ್ಯಕ್ತಿಯು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ಮನುಷ್ಯರ ಮೂಲಕವೂ ಹರಡುತ್ತದೆ. ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣವಾಗಬಹುದು ಈ ರೀತಿಯಾಗಿ ಮಂಕಿಪಾಕ್ಸ್ ವೈರಸ್ ಹರಡುತ್ತದೆ?

ಯಾವ ರೀತಿಯಲ್ಲಿ ಮಂಕಿಪಾಕ್ಸ್ ರೋಗಕ್ಕೆ ಚಿಕಿತ್ಸೆ ಕೊಡಲಾಗುತ್ತದೆ? Treatment for viral infections

ಮಂಕಿಪಾಕ್ಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಈ ಹಿಂದೆ, ಸಿಡುಬು ವಿರೋಧಿ ಲಸಿಕೆ ಮಂಕಿಪಾಕ್ಸ್ ತಡೆಗಟ್ಟುವಲ್ಲಿ 85% ಪರಿಣಾಮಕಾರಿ ಎಂದು ತೋರಿಸಲಾಗಿದೆ.

ಆದರೆ ಸಿಡುಬು ನಿರ್ಮೂಲನೆಯಾದ್ದರಿಂದ ಲಸಿಕೆ ವ್ಯಾಪಕವಾಗಿ ಲಭ್ಯವಿಲ್ಲ. ಆದರೆ ಸೂಕ್ತ ಆರೈಕೆಯಿಂದ ಈ ರೋಗದ ಲಕ್ಷಣಗಳನ್ನು ನಿವಾರಿಸಬಹುದು. ಹೆಚ್ಚಿನ ರೋಗ ಪ್ರಕರಣಗಳು ಸೌಮ್ಯವಾಗಿರುತ್ತವೆ. ಸೋಂಕುಗಳನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳ ಮೂಲಕ ಪ್ರಾಣಿಗಳಿಂದ ಹರಡುವ ಅಪಾಯವನ್ನು ಕಡಿಮೆ ಮಾಡಬಹುದು.

ವಿಜ್ಞಾನಿಗಳು ಈ ಕಾಯಿಲೆಗೆ ಮಂಕಿಪಾಕ್ಸ್ ಎಂದು ಹೆಸರಿಡಲು ಕಾರಣವೇನು ಗೊತ್ತಾ? What is the reason for the name monkeypox

1958ರಲ್ಲಿ ಮೊದಲ ಬಾರಿಗೆ ಸಂಶೋಧನಾ ಮಂಗಗಳಲ್ಲಿ ಪಾಕ್ಸ್ ತರಹ ಕಾಯಿಲೆಯ ಎರಡು ಪ್ರಕರಣಗಳು ಕಾಣಿಸಿಕೊಂಡವು. ಇದನ್ನು ಗುರುತಿಸಿದ ವಿಜ್ಞಾನಿಗಳು ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಟ್ಟರು.

ಇದು ಸಾಮಾನ್ಯವಾಗಿ ಇಲಿ, ಮೊಲ, ಅಳಿಲು ಮತ್ತು ಇತರ ಕಾಡು ಪ್ರಾಣಿಗಳಲ್ಲಿ ಕಂಡುಬರುತ್ತದೆ. ಈ ಕಾಯಿಲೆ ಮೊದಲ ಬಾರಿಗೆ ಮನುಷ್ಯರಿಗೆ ಹರಡಿದ್ದು 1970ರಲ್ಲಿ. ಕಾಂಗೋದ ಪ್ರದೇಶವೊಂದರಲ್ಲಿ ಒಂಬತ್ತು ವರ್ಷದ ಬಾಲಕನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು.

ಯಾರಲ್ಲಿ ಮಂಕಿಪಾಕ್ಸ್ ಸೋಂಕಿನ ಅಪಾಯ ಹೆಚ್ಚಾಗಿ ಕಂಡುಬರಲಿದೆ?

ವೈರಸ್ ಗಳು ದೇಹ ಪ್ರವೇಶಿಸಿದ ನಂತರ ಜೀವಕೋಶಗಳಲ್ಲಿ ಬೆಳೆದು ರೋಗಲಕ್ಷಣಗಳನ್ನು ಹೊರಹಾಕಲು 5ರಿಂದ 21 ದಿನಗಳ ಕಾಲ ಬೇಕಾಗುತ್ತದೆ. ಸೋಂಕಿತ ವಯಸ್ಕರ ನಡುವಿನ ಲೈಂಗಿಕ ಸಂಪರ್ಕವು ಪ್ರಕರಣಗಳು ಹೆಚ್ಚಾಗಲು ಒಂದು ಕಾರಣವಾಗಿದೆ.

ರೋಗಲಕ್ಷಣಗಳನ್ನು ಹೊಂದಿರುವ ಯಾರೊಂದಿಗಾದರೂ ನಿಕಟ ಸಂಪರ್ಕ ಹೊಂದಿರುವವರು ಮತ್ತು ಗರ್ಭಿಣಿಯರು, ಚಿಕ್ಕ ಮಕ್ಕಳು ವಿಶೇಷವಾಗಿ ದುರ್ಬಲರಾಗಿರುವ ಹಾಗೂ ರೋಗನಿರೋಧಕ ಕಡಿಮೆ ಇರುವ ಕಿರಿಯ ಮಕ್ಕಳಲ್ಲಿ ಈ ರೋಗದ ಅಪಾಯ ಹೆಚ್ಚಾಗಿದೆ ಎನ್ನಲಾಗುತ್ತದೆ.

ರಾಜ್ಯದಲ್ಲಿ ಹೆಚ್ಚಾದ ಮಂಕಿಪಾಕ್ಸ್ ಆತಂಕ: 21 ದಿನಗಳ ಕ್ವಾರಂಟೈನ್?!

ರಾಜ್ಯದಲ್ಲಿ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಕರ್ನಾಟಕ ಸರ್ಕಾರ ಶಂಕಿತ ಪ್ರಕರಣಗಳನ್ನು ನಿರ್ವಹಿಸಲು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆಗಳನ್ನು ಗುರುತಿಸಿದೆ.

ಮಂಕಿಪಾಕ್ಸ್ ಶಂಕಿತರನ್ನ ಗುರುತಿಸಿ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಹೇಳಿದೆ. ಮಂಕಿಪಾಕ್ಸ್ ಶಂಕಿತರನ್ನು ಮತ್ತೊಬ್ಬರ ಸಂಪರ್ಕಕ್ಕೆ ಬಾರದಂತೆ 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಬೇಕು ಎಂದು ಸೂಚನೆ ನೀಡಲಾಗಿದೆ.

https://vijayaprabha.com/today-gold-silver-petrol-diesel-price/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.