Antarjatiya vivah yojana: ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಡಾ.ಅಂಬೇಡ್ಕರ್ ಪ್ರತಿಷ್ಠಾನದ ವತಿಯಿಂದ ಅಂತರ್ಜಾತಿ ವಿವಾಹ ಯೋಜನೆಯಯಡಿ ( inter-caste marriage scheme) ಅಂತರ್ಜಾತಿ ಮದುವೆಯಾಗುವವರಿಗೆ 2.50 ಲಕ್ಷ ರೂಪಾಯಿ ನೀಡುತ್ತದೆ
ದಲಿತರನ್ನೂ ಒಳಗೊಂಡಂತೆ ಅಂತರ್ಜಾತಿ ವಿವಾಹವಾದ್ರೆ ಈ ಪ್ರೋತ್ಸಾಹ ಧನ ಸಿಗಲಿದೆ. ಈ ಯೋಜನೆಯ ಮೂಲಕ ಮೊದಲ ಬಾರಿಗೆ ಮದುವೆಯಾಗುವ ದಂಪತಿಗಳಿಗೆ 2.5 ಲಕ್ಷ ರೂ. ನೀಡಲಾಗುತ್ತದೆ. ಆದರೆ ದಂಪತಿಗಳಲ್ಲಿ ಒಬ್ಬರು ಎಸ್‌ಸಿ ಮತ್ತು ಇನ್ನೊಬ್ಬರು ಇತರ ಜಾತಿಯಾಗಿರಬೇಕು. ವಾರ್ಷಿಕ ಆದಾಯ ರೂ.5 ಲಕ್ಷ ಮೀರಬಾರದು.
ಮೊದಲ ಮದುವೆಯಾಗಿ ಅಂತರ್ಜಾತಿ ವಿವಾಹ ಮಾಡಿಕೊಂಡವರು ಮಾತ್ರ ಈ ಯೋಜನೆಗೆ ಅರ್ಹರು. ಪರಿಶಿಷ್ಟ ಜಾತಿ ಯುವಕರು ಇತರೆ ಜಾತಿಯ ಯುವತಿಯರನ್ನು ವಿವಾಹವಾದಲ್ಲಿ 2.50 ಲಕ್ಷ ರೂ. ಪರಿಶಿಷ್ಟ ಜಾತಿ ಯುವತಿಯರು ಇತರೆ ಜಾತಿಯ ಯುವಕರನ್ನು ವಿವಾಹವಾದಲ್ಲಿ, ಅಂತಹ ದಂಪತಿಗಳಿಗೆ 3 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ
ನಾನ್ ಜ್ಯುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಪ್ರೀ ಸ್ಟ್ಯಾಂಪ್ ರಶೀದಿಯನ್ನು ಪಡೆದ ಮೇಲೆ 1.50 ಲಕ್ಷ ರೂಪಾಯಿಯನ್ನು ಅರ್ಹ ದಂಪತಿಗಳಿಗೆ ನೆಫ್ಟ್ ಮೂಲಕ ದಂಪತಿಗಳ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಉಳಿದ ಹಣವನ್ನು ಮೂರು ವರ್ಷಗಳ ಅವಧಿಗೆ ಫಿಕ್ಸಡ್ ಡೆಪಾಸಿಟ್ ಮಾಡಲಾಗುತ್ತದೆ. ಸಂಪೂರ್ಣ ವಿವರಗಳಿಗಾಗಿ ವೆಬ್‌ಸೈಟ್ https://ambedkarfoundation.nic.in/icms.html ಗೆ ಭೇಟಿ ನೀಡಿ.
https://vijayaprabha.com/foreign-women-come-to-pregnancy-tourism-in-india/