Drinking alcohol: ಮದ್ಯಪಾನ ಆರೋಗ್ಯಕ್ಕೆ ಹಾನಿಕರ (Alcohol is harmful to health) ಎಂದು ಎಲ್ಲರಿಗೂ ತಿಳಿದಿದ್ದರೂ ಸಹ ಬಹಳ ಚಿಕ್ಕವಯಸ್ಸಿಗೆ ಯುವಜನತೆ ಇಂದು ಮಧ್ಯ ವ್ಯಸನಿಗಳಾಗುತ್ತಿದ್ದು, ದೀರ್ಘಕಾಲದ ಮದ್ಯಸೇವನೆಯಿಂದ (Drinking alcohol) ಹಲವಾರು ಅರೋಗ್ಯ ಸಮಸ್ಯೆಗಳು (Health problems) ಉಂಟಾಗುತ್ತವೆ.
ಹೌದು, ಪುರಾಣಗಳಲ್ಲಿ ಕೇಳಿರುವಂತೆ ಮದ್ಯವನ್ನು ಔಷಧಿಯಾಗಿ ಬಳಸಲಾಗುತ್ತಿತ್ತು. ಆದರೆ ದಿನ ಕಳೆದಂತೆ ಇದು ಒಂದು ಕೆಟ್ಟ ಅಭ್ಯಾಸವಾಗಿ ಬದಲಾಗಿದೆ. ಎಷ್ಟರಮಟ್ಟಿಗೆ ಎಂದರೆ ಕಂಠ ಪೂರ್ತಿ ಕುಡಿದು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಗಾಡಿ ಚಲಾಯಿಸುತ್ತಾರೆ. ಬೀದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಸಾರ್ವಜನಿಕರಿಗೆ ತೊಂದರೆಯುಂಟುಮಾಡುತ್ತಾರೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.
Drinking alcohol: ದೀರ್ಘಕಾಲದ ಮದ್ಯಸೇವನೆಯಿಂದ ಈ ಸಮಸ್ಯೆಗಳು ಉಂಟಾಗುತ್ತದೆ
- ಮದ್ಯಪಾನ ವ್ಯಸನವು ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ನೆಲೆಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.
- ಮದ್ಯಪಾನೀಯಗಳು ಈಥೈಲ್ ಆಲ್ಕೊಹಾಲ್ ಗುಣ ಹೊಂದಿದ್ದು, ಅವುಗಳಲ್ಲಿರುವ ಮೂಡ್ ಬದಲಾಯಿಸುವ ಅಂಶವು ದೇಹದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ.
- ಬುದ್ದಿಮಾಂದ್ಯತೆ ಸಂಭವಿಸಬಹುದು, ಖಿನ್ನತೆ, ಲೈಂಗಿಕ ದೌರ್ಬಲ್ಯ, ಅಜೀರ್ಣದ ತೊಂದರೆಗಳು, ಜ್ಞಾಪಕ ಶಕ್ತಿಯ ನಷ್ಟ ಹೀಗೆ ಶಾರೀರಿಕ ಬದಲಾವಣೆಗಳೊಂದಿಗೆ ವ್ಯಕ್ತಿಗಳ ಪರಸ್ಪರ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment