ಬೇಸಿಗೆಯ ಸುಡುವ ಬಿಸಿಲು ಮತ್ತೆ ಬಂದಿದ್ದು, ಈ ಸುಡುವ ಶಾಖವು ದೈನಂದಿನ ದಿನಚರಿಯ ಬಗ್ಗೆ ಅನಾನುಕೂಲತೆಯನ್ನು ಉಂಟುಮಾಡುವುದಲ್ಲದೆ, ಹೊರಗೆ ಹೆಜ್ಜೆ ಹಾಕುವುದು ಅಸಾಧ್ಯವಾಗುತ್ತದೆ. ಹವಾನಿಯಂತ್ರಣಗಳು ಮತ್ತು ವಾಟರ್ ಕೂಲರ್‌ಗಳ ಸೌಕರ್ಯವು ನಾವು ಒಳಗೆ ಇರುವಂತೆ ಮಾಡುತ್ತವೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಕೆಲಸದ ಒತ್ತಡ ಹಿನ್ನಲೆ ನಾವು ಹೊರಗೆ ಹೋಗಬೇಕಾಗುತ್ತದೆ. ನೀವು ಹೊರಗೆ ಕಾಲಿಡುವ ಕ್ಷಣದಲ್ಲಿ ಶಾಖವು ಅತಿಯಾಗಿದ್ದರೆ ತಡೆದುಕೊಳ್ಳುವುದು ಕಷ್ಟ.
ಇದನ್ನು ಓದಿ: ಜೀರ್ಣಕ್ರಿಯೆಯ, ಮಲಬದ್ಧತೆ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಭಾರತದ ಹಳೆಯ ಮನೆ ಮದ್ದುಗಳು
ಇನ್ನು, ಬೇಸಿಗೆಯ ಶಾಖಕ್ಕೆ ಸಂಬಂಧಿಸಿದ ಅತ್ಯಂತ ತೀವ್ರವಾದ ಕಾಯಿಲೆಗಳಲ್ಲಿ ಒಂದು ಶಾಖದ ಹೊಡೆತ(heat stroke.). ಇದರಿಂದ ನೀವು ಆರೋಗ್ಯವಂತ ವ್ಯಕ್ತಿಯಾಗಿದ್ದೀರಾ ಅಥವಾ ಇಲ್ಲವೇ ಎಂಬುದು ಅಪ್ರಸ್ತುತವಾಗುತ್ತದೆ. ಶಾಖದ ಹೊಡೆತದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನು ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆನೆ ಕಾವಾಡಿಗ ಹುದ್ದೆಗಳಿಗೆ ಅರ್ಜಿ ಅಹ್ವಾನ; ವಿದ್ಯಾರ್ಹತೆ ಬೇಕಿಲ್ಲ, ಇಂದೇ ಅರ್ಜಿ ಸಲ್ಲಿಸಿ
ಹೀಟ್‌ಸ್ಟ್ರೋಕ್ ಕಾಯಿಲೆ ಲಕ್ಷಣಗಳೇನು?
ಸಾಮಾನ್ಯವಾಗಿ ಹೀಟ್‌ಸ್ಟ್ರೋಕ್ (heat stroke) ಸಮಸ್ಯೆ ಕಾಣಿಸಿದಾಗ ಸ್ನಾಯು ಸೆಳೆತ, ಸುಸ್ತು, ದೇಹದಲ್ಲಿ ಬೆವರು ಬರದಿರುವುದು, ಅಧಿಕ ಜ್ವರ,ವಾಕರಿಕೆ-ವಾಂತಿ, ಪ್ರಜ್ಞೆ ಕಳೆದುಕೊಳ್ಳುವುದು, ಆಗಾಗ ತಲೆನೋವು, ತಲೆ ತಿರುಗುವಿಕೆ, ಚರ್ಮ ಒಣಗುವುದು, ಚರ್ಮ ಕೆಂಪಾಗುವುದು, ಹೃದಯ ಬಡಿತ ಹೆಚ್ಚಳ, ಚರ್ಮ ಶುಷ್ಕತೆ, ನಿರ್ಜಲೀಕರಣ, ಮಾನಸಿಕ ಸಾಮರ್ಥ್ಯ ಕಡಿಮೆ, ಮೂತ್ರ ವಿಸರ್ಜನೆಗೆ ಸಮಸ್ಯೆಯಾಗುವುದು ಇದರ ಪ್ರಮುಖ ರೋಗ ಲಕ್ಷಣಗಳಾಗಿವೆ. ಈ ಬಗ್ಗೆ ಮಕ್ಕಳು & 60ವರ್ಷ ದಾಟಿದವರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳಿದ್ದಾರೆ.
ಇದನ್ನು ಓದಿ: ಪ್ರಿಯಾಂಕಾ ಚೋಪ್ರಾಗೆ ಕಿರುಕುಳ ನೀಡಿ ಓಡಿಸಿದ ಕರಣ್..ಶಾರುಖ್ ಜೊತೆಗಿನ ಸ್ನೇಹವೇ ಕಾರಣ: ಕಂಗನಾ ರಣಾವತ್
ಹೀಟ್‌ಸ್ಟ್ರೋಕ್‌ಗೆ ರಕ್ಷಣೆ ಪಡೆಯುವುದು ಹೇಗೆ?
ಹೀಟ್‌ಸ್ಟ್ರೋಕ್‌ಗೆ ರಕ್ಷಣೆ ಪಡೆಯಲು ದಿನಕ್ಕೆ ಕನಿಷ್ಠವಾದರೂ 2-3 ಲೀಟರ್‌ನಷ್ಟು ನೀರು ಕುಡಿಯಿರಿ
ಸಾಧ್ಯವಾದಷ್ಟು ಕಲ್ಲಂಗಡಿ, ಸೌತೆಕಾಯಿ, ಎಳೆನೀರು, ಮಜ್ಜಿಗೆ, ನಿಂಬೆ ಜ್ಯೂಸ್, ಹಣ್ಣು ಹಾಗೂ ತರಕಾರಿಗಳನ್ನು ಜಾಸ್ತಿಯಾಗಿ ಸೇವಿಸಿ
ಒದ್ದೆ ಬಟ್ಟೆಯಿಂದ ಆಗಾಗ ಮುಖ, ಮೈ ಒರೆಸಿಕೊಳ್ಳಿ, ತೀವ್ರ ತಲೆನೋವು, ತಲೆಸುತ್ತು ಬಂದರೆ ಹಣೆಗೆ ಒದ್ದೆ ಬಟ್ಟೆ ಹಾಕಿ
ಸಾಧ್ಯವಾದಷ್ಟು ಸುಡು ಬಿಸಿಲಿನಲ್ಲಿ ಓಡಾಟ ಮಾಡುವುದನ್ನು ತಪ್ಪಿಸಿ, ತಣ್ಣೀರು-ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ
ಬೇಸಿಗೆಯ ದಗೆ ಕಡಿಮೆಯಾಗುವವರೆಗೂ ಮಾಂಸ, ಮಸಾಲೆ ಪದಾರ್ಥ, ಹೊರಗಿನ ತಿಂಡಿ ಅತಿ ಸೇವಿಸಬೇಡಿ
ಇದನ್ನು ಓದಿ: ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್.. ಮೋದಿ ಸರ್ಕಾರ್ ಮಹತ್ವದ ನಿರ್ಧಾರ!