ಸ್ತನ ಕ್ಯಾನ್ಸರ್ : ಸ್ತನ ಕ್ಯಾನ್ಸರ್ (breast cancer) ಎನ್ನುವುದು ಸ್ತನದಲ್ಲಿ ಪ್ರಾರ೦ಭವಾಗುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದು ಒಂದು ಅಥವಾ ಎರಡೂ ಸ್ತನಗಳಲ್ಲಿ ಪ್ರಾರಂಭವಾಗಬಹುದು. ಜೀವಕೋಶಗಳು ನಿಯಂತ್ರಣದಿಂದ ಹೊರಬರಲು ಪ್ರಾರಂಭಿಸಿದಾಗ ಕ್ಯಾನ್ಸರ್ ಪ್ರಾರಂಭವಾಗುತ್ತದೆ.
ಸ್ತನ ಕ್ಯಾನ್ಸರ್ ಲಕ್ಷಣಗಳೇನು..?
ಸ್ತನದ ಅಂಗಾಂಶಗಳಲ್ಲಿ ವ್ಯತ್ಯಾಸ ಕಾಣುವುದು, ನೋವು ಸಹಿತ ಅಥವಾ ನೋವಿಲ್ಲದಂಥ ಗಡ್ಡೆಗಳು ಕಂಡುಬರಬಹುದು, ಅಸ್ವಾಭಾವಿಕವಾಗಿ ಗಾತ್ರ ಹಿಗ್ಗಬಹುದು, ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಾಣಬಹುದು, ಸ್ತನದ ತೊಟ್ಟುಗಳು ಒಳ ಸರಿಯಬಹುದು, ತೊಟ್ಟುಗಳಿಂದ ದ್ರವ ಒಸರಬಹುದು, ತೋಳಿನ ಅಡಿಗಿನ ಸ್ಟೇದ ಗ್ರಂಥಿಗಳು ಹಿಗ್ಗಬಹುದು, ಕಂಕುಳಿನಲ್ಲಿ ಗಡ್ಡೆಗಳು ಕಾಣಬಹುದು.
ಇದನ್ನೂ ಓದಿ : Pumpkin : ಕುಂಬಳಕಾಯಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಸ್ತನ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ಯಾವುದೇ ಕಾಯಿಲೆ ನಿವಾರಣೆಗೆ ಆರೋಗ್ಯಕರ ಜೀವನ ಶೈಲಿ ಅನುಸರಣೆ ಮಾಡುವುದು ಉತ್ತಮ. ಆರಂಭದಲೇ ಕ್ಯಾನ್ಸರ್ ಬಗ್ಗೆ ತಿಳಿದರೆ ವ್ಯಕ್ತಿಯ ಜೀವ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದ್ದು, ಅಂಗದಲ್ಲಾಗಿರುವ ಬದಲಾವಣೆ ಯಥೇಚ್ಛವಾಗಿದೆಯಾ ಅಥವಾ ಸಾಮಾನ್ಯವಾಗಿದೆಯಾ ಎ೦ಬುದನ್ನು ತಿಳಿದುಕೊಳ್ಳಬೇಕು.
1. ದಾಳಿಂಬೆ
ದಾಳಿಂಬೆಯಲ್ಲಿ ಎಲ್ಲಾಗಿಟಾನಿನ್ ಗಳು ಎ೦ಬ ಸಂಯುಕ್ತಗಳಿವೆ. ಇದು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಯುತ್ತದೆ ಎ೦ದು ಕ್ಯಾನ್ಸರ್ ತಡೆಗಟ್ಟುವಿಕೆ ಸಂಶೋಧನೆಯಲ್ಲಿ ಪ್ರಕಟವಾದ 2010 ರ ಅಧ್ಯಯನ ಹೇಳಿದೆ.
2. ಮೀನಿನ ಕೊಬ್ಬು
3. ಮೀನಿನಲ್ಲಿ ಕೆಲವು ಮೀನುಗಳು ತುಂಬಾ ಆರೋಗ್ಯಕರ. ಮೀನಿನ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಸ್ತನ ಕ್ಯಾನ್ಸರ್ ಗೆ ಸಂಬ೦ಧಿಸಿದ ಉರಿಯೂತವನ್ನು ಕಡಿಮೆ ಮಾಡಲು ಮೀನಿನ ಕೊಬ್ಬು ಸಹಾಯ ಮಾಡುತ್ತದೆ.
ಇದನ್ನೂ ಓದಿ: Blood Cancer : ಬ್ಲಡ್ ಕ್ಯಾನ್ಸರ್‌ನಿಂದ ಪಾರಾಗಲು ಈ ರೀತಿ ಜೀವನಶೈಲಿ ಬದಲಿಸಿಕೊಳ್ಳಿ..!
4. ಅಂಜೂರದ ಹಣ್ಣು
ಅಂಜೂರದ ಹಣ್ಣಿನಲ್ಲಿ ಪ್ಲೇವನಾಯ್ಡ್ ಕ್ವೆರ್ಸೆಟಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರ ಜೊತೆಗೆ ಸ್ತನ ಕ್ಯಾನ್ಸರ್ ಗೆ ಪ್ರಮುಖ ಕಾರಣವಾದ ಉರಿಯೂತವನ್ನು ಕಡಿಮೆ ಮಾಡಲು ಅಂಜೂರದ ಹಣ್ಣನ್ನು ಸೇವಿಸುವುದು ಸೂಕ್ತ.
5. ದ್ರಾಕ್ಷಿ ಹಣ್ಣು
ದ್ರಾಕ್ಷಿಗಳು ಆಂಟಿಆಕ್ಸಿಡೆಂಟ್ ರೆಸ್ಪೆರಾಟ್ರೊಲ್ ನ ಮೂಲವಾಗಿದ್ದು, ಇದು ಸ್ತನ ದಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ಅನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎ೦ದು ಸಂಶೋಧನೆಗಳು ಕಂಡುಕೊಂಡಿವೆ.
6. ಬೀನ್ಸ್
ಬೀನ್ಸ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ತಡೆಯುತ್ತದೆ ಮತ್ತು ಹಾನಿಗೊಳಗಾದ ಕೋಶಗಳನ್ನು ಸರಿಪಡಿಸುತ್ತದೆ. ಬೀನ್ಸ್ ನಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.