walnuts Health Benefits : ಒಣ ಹಣ್ಣುಗಳಲ್ಲಿ ಒಂದಾಗಿರುವ ವಾಲ್‌ನಟ್ಸ್ ದುಬಾರಿಯಾಗಿದ್ದರೂ ಕೂಡ ಆರೋಗ್ಯದ ವಿಷಯದಲ್ಲಿ ಬಹಳ ಒಳ್ಳೆಯದು. ಇದು ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಪೌಷ್ಟಿಕ ಆಹಾರವಾಗಿದೆ.
ನಿಮ್ಮ ಆಹಾರದಲ್ಲಿ ವಾಲ್‌ನಟ್ಸ್ ಸೇರಿಸುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ತಜ್ಞರು ನೆನೆಸಿದ ಒಣ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಿದ್ದು, ಚಳಿಗಾಲದಲ್ಲೂ ಬಾದಾಮಿ, ಒಣದ್ರಾಕ್ಷಿ, ವಾಲ್‌ನಟ್‌ಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬಹುದು.
walnuts Health Benefits : ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ವಾಲ್‌ನಟ್ಸ್
ಇತ್ತೀಚೆಗೆ ಜೀವನಶೈಲಿ ಹಾಗೂ ಆಹಾರ ಪದಾರ್ಥಗಳು ಬದಲಾದಂತೆ ಹೆಚ್ಚಿನ ಜನರು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಲ್‌ನಟ್ಸ್ ಸೇವಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಇದು ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿಯನ್ನು ಹೊಂದಿದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮುಂತಾದ ರೋಗಗಳ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ವಾಲ್‌ನಟ್ಸ್‌ನಲ್ಲಿರುವ ಪಾಲಿಫಿನಾಲ್ ಎಲಾಜಿಟಾನಿನ್‌ಗಳು ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Mosquito bites | ಸೊಳ್ಳೆ ಕಡಿತದಿಂದ ಪಾರಾಗಲು ಇಲ್ಲಿದೆ ಮನೆಮದ್ದು
walnuts Health Benefits : ದಿನಕ್ಕೆ ಎಷ್ಟು ವಾಲ್ನಟ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು?
ವಾಲ್‌ನಟ್ಸ್ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಬೆಳಗ್ಗೆ ಅಥವಾ ಸಂಜೆ ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದೂ ಹೇಳಲಾಗುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಮುಖ್ಯವಾಗಿದ್ದು, ಪ್ರತಿನಿತ್ಯ 2 ರಿಂದ 4 ವಾಲ್ನಟ್ ತಿನ್ನಬೇಕು. ಕನಿಷ್ಠ 5 ರಿಂದ 6 ಗಂಟೆಗಳ ಕಾಲ ನೆನೆಸಿ ಬಳಿಕ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಟೈಪ್ 2 ಡಯಾಬಿಟಿಸ್ ಸಮಸ್ಯೆ ಕಡಿಮೆಯಾಗುತ್ತದೆ.
walnuts Health Benefits : ಕೂದಲು ಉದುರುವ ಸಮಸ್ಯೆಗೆ ರಾಮಬಾಣವಾಗಿದೆ ಈ ವಾಲ್‌ನಟ್ಸ್
ಕೂದಲು ಉದುರುವ ಸಮಸ್ಯೆ ಈಗ ಎಲ್ಲರಲ್ಲೂ ಕಾಮನ್. ಆಹಾರದಲ್ಲಿ ವಾಲ್‌ನಟ್ಸ್ ಸೇರಿಸಿದರೆ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಕೂದಲಿನ ಆರೋಗ್ಯಕ್ಕೆ ವಾಲ್‌ನಟ್ ಉತ್ತಮವಾಗಿದೆ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ವಾಲ್‌ನಟ್ ಕೂದಲಿನ ಕಿರುಚೀಲಗಳನ್ನು ಸಹ ಬಲಪಡಿಸುತ್ತವೆ. ಜೊತೆಗೆ ಕೂದಲು ತೆಳ್ಳಗಾಗುವುದನ್ನು ಕಡಿಮೆ ಮಾಡುತ್ತವೆ. ಆರೋಗ್ಯಕರ ಚರ್ಮಕ್ಕೂ ಸೂಪರ್ ಫುಡ್ ಇದಾಗಿದ್ದು ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿವೆ. ಇವೆರಡೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕೆ ಹೆಸರುವಾಸಿಯಾಗಿವೆ.
ಇದನ್ನೂ ಓದಿ: kamakasthuri seeds | ಕಾಮಕಸ್ತೂರಿ ಬೀಜಗಳ ಆರೋಗ್ಯ ಪ್ರಯೋಜನಗಳು
walnuts Health Benefits : ಗರ್ಭಿಣಿಯರು ವಾಲ್‌ನಟ್ಸ್ ಸೇವಿಸುವುದರಿಂದ ಮಗುವಿನ ಮೇಲೆ ಬೀರುವ ಪ್ರಭಾವವೇನು?
ವಾಲ್‌ನಟ್ಸ್ ಗರ್ಭಾವಸ್ಥೆಯಲ್ಲಿ ಸೇವಿಸಲು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ವಾಲ್ನಟ್ ಮೆದುಳನ್ನು ಹೋಲುವುದಲ್ಲದೆ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಗರ್ಭಿಣಿಯಾಗಿರುವಾಗ ವಾಲ್‌ನಟ್ಸ್ ಗಳನ್ನು ಸೇವಿಸುವುದರಿಂದ ಹಲವಾರು ಸಂಭಾವ್ಯ ಪ್ರಯೋಜನಗಳಿವೆ. ರುಚಿಕರವಾದ ಮತ್ತು ಕುರುಕಲು ವಾಲ್ನಟ್ ಗಳು ಗರ್ಭಿಣಿಯರಿಗೆ ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ.
ಕೃಪೆ: Anitha health tips kannada