Mosquito bites : ಉದ್ದ ತೋಳಿನ ಅಂಗಿ, ಪ್ಯಾಂಟ್, ತಲೆಗೆ ಟೋಪಿ & ಕಾಲಿಗೆ ಸಾಕ್ಸ್ ಹಾಕಿಕೊಂಡರೆ ಸೊಳ್ಳೆ ಕಡಿತ ದೂರ ಮಾಡಬಹುದು. ಹೊರಗಡೆ ಹೋಗುವಾಗ ಶೂ ಧರಿಸಿ. ಮುಂಜಾನೆ & ಸಂಜೆ ವೇಳೆ ಸೊಳ್ಳೆ ಕಡಿತ ಹೆಚ್ಚಾಗಿರುವದರಿಂದ ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ. ಅಲ್ಲದೇ ಮಲಗುವಾಗ ಸೊಳ್ಳೆ ಪರದೆ ಹಾಕಿಕೊಳ್ಳಿ.
Mosquito bites : ಸೊಳ್ಳೆ ಕಡಿತಕ್ಕೆ ಸೊಳ್ಳೆ ನಿವಾರಕ ಗಿಡಗಳು
ಕೆಲವೊಂದು ಗಿಡದ ವಾಸನೆಯು ಸೊಳ್ಳೆಗಳು ಬರುವುದನ್ನು ತಡೆಯುತ್ತದೆ. ತುಳಸಿ, ಕಹಿಬೇವು ಇವೆಲ್ಲಾ ಗಾಳಿಯನ್ನು ಶುದ್ಧವಾಗಿಡುವುದರ ಜೊತೆಗೆ ಸೊಳ್ಳೆಕಾಟದಿಂದ ಮುಕ್ತಿ ನೀಡುತ್ತವೆ. ಅದಕ್ಕಾಗಿ ಮನೆಯಲ್ಲಿ ಇಂಥ ಸೊಳ್ಳೆ ನಿವಾರಕ ಗಿಡಗಳನ್ನು ಬೆಳಸಬೇಕು.
ಇದನ್ನೂ ಓದಿ: kamakasthuri seeds | ಕಾಮಕಸ್ತೂರಿ ಬೀಜಗಳ ಆರೋಗ್ಯ ಪ್ರಯೋಜನಗಳು
ಈ ಎಣ್ಣೆಗಳನ್ನು ಬಳಸಿ
ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಒಳ್ಳೆಯ ಸುವಾಸನೆ ನೀಡುವುದು ಮಾತ್ರವಲ್ಲದೆ, ಸೊಳ್ಳೆಗಳು ಬರದಂತೆ ತಡೆಯುತ್ತದೆ. ಲ್ಯಾವೆಂಡರ್ ಎಣ್ಣೆಯನ್ನು ಕೋಣೆಗೆ ಸಿಂಪಡಿಸಿ ಅಥವಾ ಕೆಲವು ಹನಿಯನ್ನು ಕ್ರೀಮ್ ಜತೆಗೆ ದೇಹಕ್ಕೆ ಹಚ್ಚಿಕೊಳ್ಳಬೇಕು.
ಕಾಳುಮೆಣಸಿನ ಕಡ್ಡಿ
ತುಂಬಾ ಘಾಟಿರುವ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಬೇಕು. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ.
ಎಳನೀರು
ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ. ಅಲ್ಲವೇ ಸೊಳ್ಳೆ ಕಚ್ಚಿದರೆ ಕಲೆಯೂ ಬೇಗನೆ ಮಾಯವಾಗುವುದು.
ಇದನ್ನೂ ಓದಿ : Eating Food | ನೆಲದ ಮೇಲೆ ಕುಳಿತು ಊಟ ಮಾಡಿದರೆ ಇವೆ ಇಷ್ಟೆಲ್ಲಾ ಪ್ರಯೋಜನಗಳು
ಅಲೋವೆರಾ
ಅಲೋವೆರಾದಲ್ಲಿ ನಂಜು ನಿರೋಧಕ ಗುಣವಿದ್ದು, ಸೊಳ್ಳೆ ಕಚ್ಚಿ ತುರಿಕೆ ಮತ್ತು ಊತ ಕಾಣಿಸಿಕೊಂಡರೆ ಅಲೋವೆರಾ ಸಿಪ್ಪೆ ತೆಗೆದು ಲೋಳೆಯನ್ನು ತ್ವಚೆಯ ಮೇಲಿಟ್ಟು ಕೆಲ ನಿಮಿಷಗಳ ಉಜ್ಜಿ.
ಇದು ಮಕ್ಕಳ ಮೇಲಿನ ಸೊಳ್ಳೆ ಕಡಿತಕ್ಕೆ ಉತ್ತಮ ಮನೆಮದ್ದು.