World AIDS Day : ವಿಶ್ವ ಏಡ್ಸ್ ದಿನವು ಕಳೆದ 33 ವರ್ಷಗಳಿಂದ (1988 ರಿಂದ) ಪ್ರತಿ ವರ್ಷ ಡಿಸೆಂಬರ್ 1 ರಂದು ಇಂದು ಜಾಗತಿಕವಾಗಿ ನಡೆಯುವ ಸ್ಮರಣೀಯ ಆರೋಗ್ಯ ಕಾರ್ಯಕ್ರಮವಾಗಿದೆ.
2024ರ ವಿಶ್ವ ಏಡ್ಸ್ ದಿನದ ಥೀಮ್ “ಟೇಕ್ ದಿ ರೈಟ್ಸ್ ಪಾತ್” ಆಗಿದೆ. HIV/AIDS ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಈ ಥೀಮ್ ಒತ್ತಿಹೇಳುತ್ತದೆ. ಇದು ಜನರ ಹಕ್ಕುಗಳನ್ನು ಉಲ್ಲಂಘಿಸುವ ಕಾನೂನು ಮತ್ತು ಸಾಮಾಜಿಕ ಅಡೆತಡೆಗಳನ್ನು ತೆಗೆದುಹಾಕಲು ಪ್ರತಿಪಾದಿಸುತ್ತದೆ.
ಇದನ್ನೂ ಓದಿ: Avocado fruit | ಆವಕಾಡೊ ಹಣ್ಣಿನ ಆರೋಗ್ಯಕರ ಪ್ರಯೋಜನಗಳು
World AIDS Day : HIV ಹರಡುವಿಕೆಯಲ್ಲಿ ಮಿಜೋರಾಂ ಫಸ್ಟ್.. ಕಾಶ್ಮೀರ ಲಾಸ್ಟ್
ಜನಜಾಗೃತಿ ಹೆಚ್ಚಾಗಿರುವುದರಿಂದ ದೇಶದಲ್ಲಿ ಏಡ್ಸ್ ಕಡಿಮೆಯಾಗುತ್ತಿದೆ. ‘ನಾಕ್ಸ್’ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ದೇಶಾದ್ಯಂತ 25 ಲಕ್ಷ HIV ಪೀಡಿತರಿದ್ದಾರೆ. ಏಡ್ಸ್ ಹರಡುವಿಕೆಯಲ್ಲಿ ಮಿಜೋರಾಂ ಮೊದಲ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಇದರ ಹರಡುವಿಕೆ ಪ್ರತಿಶತ 2.73ರಷ್ಟಿದೆ. ಇನ್ನು, ನಾಗಾಲ್ಯಾಂಡ್ (1.37%), ಮಣಿಪುರ (0.87%), ಕರ್ನಾಟಕ (0.42%) ಆಂಧ್ರ (0.62%), ತೆಲಂಗಾಣ (0.44%) ಇದೆ. ಇದು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಬಹಳ ಕಡಿಮೆ (0.06%) ಪ್ರಮಾಣದಲ್ಲಿ ಇದೆ.
ಇದನ್ನೂ ಓದಿ: Colon Cancer | ಕರುಳಿನ ಕ್ಯಾನ್ಸರ್ ತಡೆಯಲು ಸಹಾಯ ಮಾಡುವ ಅದ್ಬುತ ಆಹಾರಗಳು ಇಲ್ಲಿವೆ..!
ಇವುಗಳಿಂದ ಏಡ್ಸ್ ಬರುವುದಿಲ್ಲ
- ಹಸ್ತಲಾಘವ ಮಾಡುವುದರಿಂದ ಏಡ್ಸ್ ಬರುವುದಿಲ್ಲ
- ಏಡ್ಸ್ ರೋಗಿಯೊಂದಿಗೆ ಊಟ ಮಾಡುವುದರಿಂದ ಬರುವುದಿಲ್ಲ
- ಆಲಿಂಗನ, ಚುಂಬನದಿಂದ ಏಡ್ಸ್ ಹರಡುವುದಿಲ್ಲ
- ಸೊಳ್ಳೆ ಕಡಿತದಿಂದಲೂ ಹರಡುವುದಿಲ್ಲ
- ಉಸಿರಾಡುವ ಗಾಳಿ, ನೀರಿನಿಂದ ಬರುವುದಿಲ್ಲ
- HIV ಸೋಂಕಿತರು ಬಳಸಿದ ಶೌಚಾಲಯದಿಂದ ಬರುವುದಿಲ್ಲ
- HIV ಇರುವವರೊಡನೆ ವಾಸ, ಅವರ ಬಟ್ಟೆ ಬಳಸುವುದರಿಂದ ಸೋಂಕು ಹರಡುವುದಿಲ್ಲ