Colon Cancer | ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಉತ್ತಮ ಆಹಾರ ಪದ್ಧತಿ ಸಹಾಯ ಮಾಡುತ್ತದೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಕರುಳಿನ ಕ್ಯಾನ್ಸರ್ (Colon Cancer) ಅನ್ನು ತಡೆಗಟ್ಟಲು ಸಹಾಯ ಮಾಡಲು, ಅನೇಕ ತಜ್ಞರು ಈ ಸಮೃದ್ಧವಾಗಿರುವ ಆಹಾರವನ್ನು ಶಿಫಾರಸು ಮಾಡುತ್ತಾರೆ
ಇದನ್ನೂ ಓದಿ: Green chilies | ಹಸಿಮೆಣಸಿನ ಕಾಯಿಯ ಅದ್ಭುತ ಅರೋಗ್ಯ ಪ್ರಯೋಜನಗಳು
Colon Cancer : ಕರುಳಿನ ಕ್ಯಾನ್ಸರ್ ತಡೆಯಲು ಸಹಾಯ ಮಾಡುವ ಆಹಾರಗಳು ಯಾವುವು?
- ಹಾಲಿನ ಉತ್ಪನ್ನಗಳು
- ಸೇಬು
- ಸಿಟ್ರಸ್ ಹಣ್ಣುಗಳು
- ಆವಕಾಡೊ
- ಬೀನ್ಸ್
- ದ್ವಿದಳ ಧಾನ್ಯಗಳು
- ಸಾಲ್ಮನ್ ಮೀನು
1. ಹಾಲಿನ ಉತ್ಪನ್ನಗಳು
ಹಾಲು ಹಾಗೂ ಹಾಲಿನ ಉತ್ಪನ್ನಗಳು ಕರುಳು ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀರ್ಯಾಡಿಕಲ್ಸ್ ಕಣಗಳ ವಿರುದ್ಧ ಹೋರಾಡಿ, ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಹಾಗಾಗಿ ಆಹಾರ ಕ್ರಮದಲ್ಲಿ ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಇನ್ನಿತರ ಹಾಲಿನ ಉತ್ಪನ್ನಗಳನ್ನು ಸೇರಿಸಿಕೊ೦ಡರೆ ಒಳ್ಳೆಯದು.
2. ಸೇಬು
ಸೇಬುವಿನಲ್ಲಿರುವ ಜೀವಸತ್ವಗಳು ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ವಿರುದ್ಧ ಹೋರಾಡುತ್ತದೆ. ಸೇಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಕರುಳಿನ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ದಿನಕ್ಕೆ ಒಂದು ಸೇಬನ್ನು ಸೇವಿಸುವುದು ಉತ್ತಮ
ಇದನ್ನೂ ಓದಿ: walnuts Health Benefits | ಪೌಷ್ಟಿಕಾಂಶಗಳ ಆಗರವಾಗಿರುವ ವಾಲ್‌ನಟ್ಸ್ ಅರೋಗ್ಯ ಪ್ರಯೋಜನಗಳು
3. ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ಕಿವಿ, ದ್ರಾಕ್ಷಿಯಲ್ಲಿ ವಿಟಮಿನ್ ‘ಸಿ’ ಹೇರಳವಾಗಿದೆ. ಹದಗೊಳಿಸದ ತಾಜಾ ಸಿಟ್ರಸ್ ಹಣ್ಣುಗಳನ್ನು ದಿನಕ್ಕೆ 75-90 ಮಿ.ಗ್ರಾಂ ಸೇವಿಸಿ ಅಥವಾ ಯಾವುದೇ ಸಿಟ್ರಸ್ ಹಣ್ಣಿನ ರಸವನ್ನು ಕುಡಿಯುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.
4. ಆವಕಾಡೊ
ಆವಕಾಡೊದಲ್ಲಿ ವಿಟಮಿನ್ ‘ಇ’ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಆವಕಾಡೊ ಕ್ಯಾನ್ಸರ್ ವಿರೋಧಿ ಆಹಾರ ಎ೦ದು ವಿಜ್ಞಾನಿಗಳು ಸಹ ಸಾಬೀತುಪಡಿಸಿದ್ದಾರೆ. ಇದು ಡಿಎನ್‌ಎ ರೂಪಾಂತರವನ್ನು ತಡೆಯುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ (ಮೂತ್ರಕೋಶದ ಕ್ಯಾನ್ಸರ್) ತಡೆಯುತ್ತದೆ.
5. ಬೀನ್ಸ್
ಬೀನ್ಸ್‌ಗಳಲ್ಲಿ ಶಕ್ತಿಯುತವಾದ ವಿಟಮಿನ್ ಎ, ವಿಟಮಿನ್ ಸಿ ಹಾಗು ವಿಟಮಿನ್ ಕೆ ಅಂಶ ಕಂಡು ಬರುವುದರ ಜೊತೆಗೆ, ಅಪಾರ ಪ್ರಮಾಣದ ನಾರಿನಾಂಶ ಮತ್ತು ಫೋಲಿಕ್ ಆಮ್ಲ ಕೂಡ ಇರುತ್ತದೆ. ಹೀಗಾಗಿ ಇದರಿಂದ ಪಲ್ಯ, ಸಾಂಬಾರ್ ಅನ್ನು ತಯಾರಿಸಿ ಸೇವನೆ ಮಾಡುವುದರಿಂದ, ಕರುಳಿನ ಕ್ಯಾನ್ಸರ್ ನಿಂದ ದೂರವಿರಬಹುದಾಗಿದೆ.
ಇದನ್ನೂ ಓದಿ: Mosquito bites | ಸೊಳ್ಳೆ ಕಡಿತದಿಂದ ಪಾರಾಗಲು ಇಲ್ಲಿದೆ ಮನೆಮದ್ದು
6. ದ್ವಿದಳ ಧಾನ್ಯಗಳು
ಯಥೇಚ್ಛವಾಗಿ ಪ್ರೋಟೀನ್ ಅಂಶ ಕಂಡು ಬರುವ ದ್ವಿದಳ ಧಾನ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿದ್ದು, ಮೊಳಕೆ ಯೊಡೆದ ಧಾನ್ಯಗಳು, ಸೋಯಾ ಅವರೆ, ಹುರುಳಿ ಕಾಳು, ಬಟಾಣಿ ಸೇರಿದಂತೆ ಇನ್ನಿತರ ಕಾಳುಗಳನ್ನು ಸೇವಿಸಬಹುದು. ಪ್ರಮುಖವಾಗಿ ಇವುಗಳಲ್ಲಿ ನಾರಿನಾಂಶದ ಜೊತೆಗೆ ಪ್ರೋಟೀನ್, ವಿಟಮಿನ್ ಬಿ ಹಾಗೂ ವಿಟಮಿನ್ ಇ ಸೇರಿದಂತೆ ಇನ್ನಿತರ ಪೋಷಕಾಂಶಗಳಿವೆ.
7. ಸಾಲ್ಮನ್ ಮೀನು
ವಾರದಲ್ಲಿ ಒ೦ದೆರಡು ಬಾರಿ ಮೀನು ಸೇವನೆ ಮಾಡುವುದು ಒಳ್ಳೆಯದು. ಪ್ರಮುಖವಾಗಿ ಸಾಲ್ಮನ್ ಮೀನು. ಈ ಮೀನು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ದೇಹದೊಳಗೆ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ಆಗದಂತೆ ತಡೆಯುತ್ತದೆ.