ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ವಕೀಲರ ನೇಮಕಾತಿ ವೇಳೆ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ (Scheduled Caste Lawyers) ಬಂಪರ್ ಮೀಸಲು ಕಲ್ಪಿಸಲಾಗಿದೆ.
ಹೌದು, ಸರ್ಕಾರಿ ವಕೀಲರನ್ನು ನೇಮಿಸಿಕೊಳ್ಳುವಾಗ ಪರಿಶಿಷ್ಟರಿಗೆ ಕನಿಷ್ಠ ಶೇ.24ರಷ್ಟು ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರ ಕಾನೂನು ಇಲಾಖೆಗೆ ಆದೇಶ ಹೊರಡಿಸಿದೆ. ಶೇ.17ರಷ್ಟು ಪರಿಶಿಷ್ಟ ಜಾತಿ ವಕೀಲರಿಗೆ ಹಾಗೂ ಶೇ.7ರಷ್ಟು ಪರಿಶಿಷ್ಟ ಪಂಗಡ ವಕೀಲರನ್ನು ನೇಮಿಸಿಕೊಳ್ಳುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ: December 1 New rules | ಡಿಸೆಂಬರ್ 1 ರಿಂದ ಈ ಹೊಸ ನಿಯಮಗಳು; ಇಂದು ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ
ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ನಿಗಮ ಮಂಡಳಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪರಿಶಿಷ್ಟ ವಕೀಲರ ನೇಮಕಾತಿ ಬಗ್ಗೆ ಚರ್ಚಿಸಿ ಸರ್ಜರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಗೆ ತ್ವರಿತವಾಗಿ ಸ್ಪಂದಿಸಿದ ರಾಜ್ಯ ಸರ್ಕಾರ ಅಕ್ಟೋಬರ್ 10 ರಂದೇ ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿದೆ.
ಇನ್ನು, ಸರ್ಕಾರದ ಈ ಆದೇಶದಿಂದ ಎಸ್ಸಿ, ಎಸ್ಟಿ ಕಾನೂನು ಪದವೀಧರರು ಮತ್ತು ಖಾಸಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಲಿ ವಕೀಲರಿಗೆ ಒಂದು ಸದವಕಾಶ ಸಿಕ್ಕಂತಾಗಿದೆ.
ಇದನ್ನೂ ಓದಿ: Cyclone Fengal | ಬೆಂಗಳೂರಿಗೂ ತಟ್ಟಿದ ʻಫೆಂಗಲ್ʼ ಚಂಡಮಾರುತದ ಎಫೆಕ್ಟ್; ಇಂದು ಭಾರೀ ಮಳೆ?