Typhoid fever | ಟೈಫಾಯ್ಡ್ ಜ್ವರದಿಂದ ಶೀಘ್ರ ಗುಣಮುಖರಾಗಲು ಮನೆಮದ್ದುಗಳು

Typhoid fever : ಟೈಫಾಯಿಡ್ ಜ್ವರವು (Typhoid fever) ಬ್ಯಾಕ್ಟೀರಿಯಂ ಸಾಲ್ಮೊನೆಲ್ಲಾ ಟೈಫಿ (ಎಸ್. ಟೈಫಿ) ನಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ನಿಮ್ಮ ಸಣ್ಣ ಕರುಳಿಗೆ (ಕರುಳಿನ) ಸೋಂಕು ತರುತ್ತದೆ ಮತ್ತು ಅಧಿಕ ಜ್ವರ,…

Typhoid fever

Typhoid fever : ಟೈಫಾಯಿಡ್ ಜ್ವರವು (Typhoid fever) ಬ್ಯಾಕ್ಟೀರಿಯಂ ಸಾಲ್ಮೊನೆಲ್ಲಾ ಟೈಫಿ (ಎಸ್. ಟೈಫಿ) ನಿಂದ ಉಂಟಾಗುವ ಕಾಯಿಲೆಯಾಗಿದೆ.

ಇದು ನಿಮ್ಮ ಸಣ್ಣ ಕರುಳಿಗೆ (ಕರುಳಿನ) ಸೋಂಕು ತರುತ್ತದೆ ಮತ್ತು ಅಧಿಕ ಜ್ವರ, ಹೊಟ್ಟೆ ನೋವು ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಟೈಫಾಯಿಡ್ ಜ್ವರವನ್ನು ಎಂಟರ್ಟಿಕ್ ಜ್ವರ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: HIV-AIDS | ಎಚ್‌ಐವಿ-ಏಡ್ಸ್ ನಡುವಿನ ವ್ಯತ್ಯಾಸವೇನು? ಸೋಂಕು ತಗುಲಿದರೆ ಬದುಕಬಹುದ..?

Vijayaprabha Mobile App free

ಟೈಫಾಯಿಡ್ ಜೊತೆಗೆ ಪ್ಯಾರಾಟಿಫಾಯಿಡ್ ಜ್ವರವನ್ನು ನೀವು ಸಾಮಾನ್ಯವಾಗಿ ಕೇಳುತ್ತೀರಿ. ಪ್ಯಾರಾಟಿಫಾಯಿಡ್ ಜ್ವರವು ಹೆಚ್ಚು ಸೌಮ್ಯವಾದ ರೋಗಲಕ್ಷಣಗಳೊಂದಿಗೆ ಟೈಫಾಯಿಡ್ ಅನ್ನು ಹೋಲುತ್ತದೆ. ಇದು ಸಾಲ್ಮೊನೆಲ್ಲಾ ಪ್ಯಾರಾಟಿಫಿ (ಎಸ್. ಪ್ಯಾರಾಟಿಫಿ) ನಿಂದ ಉಂಟಾಗುತ್ತದೆ.

Typhoid fever : ಟೈಫಾಯ್ಡ್ ಜ್ವರದಿಂದ ಶೀಘ್ರ ಗುಣಮುಖರಾಗಲು ಮನೆಮದ್ದುಗಳು

Typhoid fever

  1. ಬೆಳ್ಳುಳ್ಳಿ
  2. ತುಳಸಿ
  3. ಲಘು ಆಹಾರ ಸೇವನೆ
  4. ಆಪಲ್ ಸೈಡರ್ ವಿನೆಗ‌ರ್
  5. ಪುದೀನ & ಲವಂಗ

1.ಬೆಳ್ಳುಳ್ಳಿ

ಟೈಫಾಯಿಡ್ ಜ್ವರಕ್ಕೆ ಬೆಳ್ಳುಳ್ಳಿ ತುಂಬಾ ಉಪಯುಕ್ತವಾಗಿದ್ದು, ಇದು ನೈಸರ್ಗಿಕ ಪ್ರತಿಜೀವಕವಾಗಿದೆ. 5 ರಿಂದ 7 ಬೆಳ್ಳುಳ್ಳಿಯ ಎಸಳುಗಳನ್ನು ಅರೆದು ಎಳ್ಳೆಣ್ಣೆ ಅಥವಾ ತುಪ್ಪದಲ್ಲಿ ಹುರಿದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
ಅಲ್ಲದೆ ಆಗಾಗ ಈರುಳ್ಳಿ ರಸ ಕುಡಿದರೂ ಜ್ವರ ಕಡಿಮೆಯಾಗುತ್ತದೆ.

2. ತುಳಸಿ

15 ರಿಂದ 20 ತುಳಸಿಯ ಎಲೆಗಳ ಜೊತೆಗೆ 5 ಗ್ರಾಂ ಬೇವಿನ ರಸ, 10 ಸಣ್ಣ ಮೆಣಸು, 10 ಗ್ರಾಂ ಶುಂಠಿ ಸೇರಿಸಿ ಅರೆದುಕೊಳ್ಳಿ. ಈ ಮಿಶ್ರಣವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ತಣ್ಣಗಾದ ಬಳಿಕ ಕುಡಿಯಿರಿ. ಇದನ್ನು ಸೇವಿಸುವ ಅರ್ಧ ಗಂಟೆಯ ಮುನ್ನ ಯಾವುದೇ ಆಹಾರವನ್ನು ಸೇವಿಸಬೇಡಿ.

Read Also: World AIDS Day | HIV ಹರಡುವಿಕೆಯಲ್ಲಿ ಮಿಜೋರಾಂ ಫಸ್ಟ್‌.. ಕಾಶ್ಮೀರ ಲಾಸ್ಟ್‌

3.ಲಘು ಆಹಾರ ಸೇವನೆ

ಟೈಫಾಯಿಡ್ ಜ್ವರ ಹೊಂದಿರುವವರು ಗಂಜಿ ಮತ್ತು ಅನ್ನದಂತಹ ಲಘು ಆಹಾರವನ್ನು ಸೇವಿಸುವುದಲ್ಲದೆ ಟೈಫಾಯಿಡ್ ತಡೆಗಟ್ಟಲು, ಬಿಸಿ, ಬಿಸಿ ಆಹಾರ ಸೇವಿಸಿ. ಸಲಾಡ್, ಚಟ್ಟಿ ಇತ್ಯಾದಿ ತಂಪಾದ ಆಹಾರಗಳನ್ನು ತಿನ್ನಬೇಡಿ. ಜೊತೆಗೆ ಬೀದಿ ಬಿದಿಯ ಅಂಗಡಿಗಳಿಂದ ತಿ೦ಡಿ ತಿನ್ನುವುದನ್ನು ತಪ್ಪಿಸಬೇಕು.

4.ಆಪಲ್ ಸೈಡರ್ ವಿನೆಗ‌ರ್

ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿಗೆ ಬೆರೆಸಿ ಊಟಕ್ಕೆ ಮೊದಲು ಕುಡಿಯಿರಿ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

Read Also: Avocado fruit | ಆವಕಾಡೊ ಹಣ್ಣಿನ ಆರೋಗ್ಯಕರ ಪ್ರಯೋಜನಗಳು

5.ಪುದೀನ & ಲವಂಗ

ಸಣ್ಣ ತುಂಡು ಶುಂಠಿ ಮತ್ತು ಕೆಲವು ಪುದೀನ ಎಲೆಗಳನ್ನು ಅರೆದು ಒಂದು ಲೋಟ ನೀರಿನಲ್ಲಿ ಬೆರೆಸಿ. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ. ಜೊತೆಗೆ ಲವಂಗವನ್ನು ನೀರಿನಲ್ಲಿ ಕುದಿಸಿ. ಈ ಕಷಾಯವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲಿನ ಕಿರಿಕಿರಿ ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.