Eating Food : ಆಯುರ್ವೇದದ ಪ್ರಕಾರ ಸುಖಾಸನದಲ್ಲಿ ಕುಳಿತು ಊಟ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಕಾಣಬಹುದು. ಸುಖ ಎ೦ದರೆ ಆರಾಮವಾಗಿ ಅಥವಾ ಸಮಾಧಾನವಾಗಿ, ಆಸನ ಎಂದರೆ ಭಂಗಿ ಎ೦ದರ್ಥವಾಗಿದ್ದು, ಈ ಆಸನದಿಂದ ಮನಸ್ಸು ಮತ್ತು ದೇಹ ಎರಡೂ ಸಮಾಧಾನವಾಗಿ ಸುಖವಾಗಿರುತ್ತದೆ.
Eating Food : ನೆಲದ ಮೇಲೆ ಕುಳಿತು ಆಹಾರ ಸೇವಿಸುವ ಪ್ರಯೋಜನಗಳು
- ಜೀರ್ಣ ವ್ಯವಸ್ಥೆ
- ಹೃದಯಕ್ಕೂ ಸಹಕಾರಿ
- ಪಚನ ಶಕ್ತಿ ವೃದ್ಧಿ
- ಕೀಲು ನೋವು ದೂರ
- ತೂಕ ಇಳಿಸಿಕೊಳ್ಳಲು ಸಹಕಾರಿ
ಇದನ್ನೂ ಓದಿ: Bad breath | ಬಾಯಿಯ ದುರ್ವಾಸನೆ ಕಾರಣಗಳು ಮತ್ತು ಪರಿಹಾರಗಳು
1. ಜೀರ್ಣ ವ್ಯವಸ್ಥೆ
ನೆಲದ ಮೇಲೆ ಕುಳಿತು ತಿನ್ನುವಾಗ, ತಿನ್ನಲು ತಟ್ಟೆಯ ಕಡೆಗೆ ವಾಲಬೇಕಾಗುತ್ತದೆ. ಹೀಗೆ ಮು೦ದಕ್ಕೆ ಬಾಗುವುದು ಹಿಂದಕ್ಕೆ ಬರುವುದರ ಮರುಕಳಿಕೆಯ ಕ್ರಮದಿಂದ ಕಿಬ್ಬೊಟ್ಟೆಯ ಸ್ನಾಯುಗಳು ನಿರ೦ತರವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಜೀರ್ಣ ವ್ಯವಸ್ಥೆಯು ಸುಸ್ಥಿತಿಯಲ್ಲಿದ್ದು ಮಲಬದ್ಧತೆ ನಿವಾರಣೆಯಾಗುತ್ತದೆ.
2. ಹೃದಯಕ್ಕೂ ಸಹಕಾರಿ
ನೆಲದ ಮೇಲೆ ಕುಳಿತು ತಿನ್ನುವಾಗ ದೇಹದ ಕೆಳಗಿನ ಭಾಗಕ್ಕೆ ವಿರಾಮದ ಸ್ಥಿತಿ ದೊರಕುವುದರಿಂದ ಆ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳುವುದಿಲ್ಲ ಹೀಗಾಗಿ, ದೇಹದಲ್ಲಿ ರಕ್ತದ ಪರಿಚಲನೆಯು ಹೆಚ್ಚಾಗುತ್ತದೆ.
3. ಪಚನ ಶಕ್ತಿ ವೃದ್ಧಿ
ಕೆಳಗೆ ಕುಳಿತು ಊಟ ಮಾಡುವಾಗ ಕಿಬ್ಬೊಟ್ಟೆಯ ಕಡೆಗೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಪಚನ ಶಕ್ತಿಯಲ್ಲಿ ಸಾಮರ್ಥ್ಯತೆ ಹೆಚ್ಚಾಗುತ್ತದೆ. ಇದು ಪೋಷಕಾಂಶಗಳನ್ನು ದೇಹಕ್ಕೆ ವಿಲೀನಗೊಳಿಸಿಕೊಳ್ಳಲು ಸಹಾಯವಾಗುತ್ತದೆ. ವಿಟಮಿನ್ ಬಿ12, ವಿಟಮಿನ್ ಡಿ, ಹಿಮೋಗ್ಲೋಬಿನ್ ಮುಂತಾದವುಗಳನ್ನು ರಕ್ತಗತಗೊಳಿಸಿಕೊಳ್ಳಲು ಈ ಭಂಗಿ ಪೂರಕವಾಗಿರುತ್ತದೆ.
ಇದನ್ನೂ ಓದಿ: White Acacia Flower | ಬಿಳಿ ಎಕ್ಕದ ಹೂವಿನ ಆರೋಗ್ಯ ಪ್ರಯೋಜನಗಳು
4. ಕೀಲು ನೋವು ದೂರ
ಈ ಭಂಗಿ ಮೊಣಕಾಲುಗಳಿಗೆ ಉತ್ತಮ ವ್ಯಾಯಾಮವಾಗುತ್ತದೆ ಮತ್ತು ಕೀಲು ನೋವಿನಿಂದ ಉಪಶಮನ ನೀಡುತ್ತದೆ. ಅಷ್ಟೇ ಅಲ್ಲದೆ, ನಮ್ಮ ದೇಹದ ಚಲನೆ, ಹೊಂದಿಕೊಳ್ಳುವ ಕ್ಷಮತೆ ಮತ್ತು ದೃಢತೆಯನ್ನು ಹೆಚ್ಚಿಸುವ ಸಾಮರ್ಥ್ಯಈ ಆಸನಕ್ಕೆ ಇದೆ.
5. ತೂಕ ಇಳಿಸಿಕೊಳ್ಳಲು ಸಹಕಾರಿ
ಈ ಭಂಗಿ ಪಚನ ಶಕ್ತಿಯನ್ನು ಹೆಚ್ಚಿಸುವುದರಿಂದ, ಹಸಿವು ಎಂದು ಸುಮ್ಮನೆ ಮನಬ೦ದ೦ತೆ ತಿನ್ನುವ ದುರಭ್ಯಾಸದಿ೦ದ ಪಾರು ಮಾಡುವುದಲ್ಲದೆ ಅತಿ ಹೆಚ್ಚು ಪ್ರಮಾಣದ ಆಹಾರ ತೆಗೆದುಕೊಳ್ಳುವುದನ್ನು ತಪ್ಪಿಸುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವಲ್ಲಿ ಇದು ಸಹಾಕಾರಿಯಾಗಿದೆ.
ಇದನ್ನೂ ಓದಿ: Diabetes | ಇಂದು ಮಧುಮೇಹ ದಿನ; ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ, ಮಧುಮೇಹಿಗಳ ಆಹಾರ ಕ್ರಮ ಹೀಗಿರಲಿ