Rainy season : ಮಳೆಗಾಲದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..

Health practices during rainy season Health practices during rainy season

Rainy season : ಮಳೆಗಾಲದಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ.

ಮಳೆಯು ಹೆಚ್ಚಿನವರಿಗೆ ಬೇಸಿಗೆಯ ಬಿಸಿಲಿನಿಂದ ವಿಶ್ರಾಂತಿಯನ್ನು ತರುವುದಲ್ಲದೆ ಉಲ್ಲಾಸವನ್ನು ನೀಡುತ್ತದೆ. ಆದರೆ, ಇದು ವೈರಸ್‌ಗಳು ಮತ್ತು ವಿವಿಧ ರೀತಿಯ ಸೋಂಕುಗಳಂತಹ ವ್ಯಾಪಕವಾದ ಸಣ್ಣ ಮತ್ತು ಪ್ರಮುಖ ಕಾಯಿಲೆಗಳನ್ನು ಸಹ ಹರಡಬಹುದು. ನಿಮ್ಮ ಪ್ರದೇಶದಲ್ಲಿ ಸಣ್ಣ ಕೊಚ್ಚೆಗುಂಡಿಗಳ ರೂಪದಲ್ಲಿ ನಿಂತ ನೀರು ವಿವಿಧ ಸೋಂಕುಗಳನ್ನು ಹರಡುವ ಅಪಾಯಕಾರಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಮಳೆಗಾಲದಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ.

ಇದನ್ನೂ ಓದಿ : Cauliflower : ಈ ಸಮಸ್ಯೆ ಇರುವವರು ಹೂಕೋಸು ತಿನ್ನಬಾರದು

Advertisement

Vijayaprabha Mobile App free

ಇನ್ನು, ಆರೋಗ್ಯ ತಜ್ಞರು ಮಳೆಗಾಲದ ಸಮಯದಲ್ಲಿ ಅನುಸರಿಸಬಹುದಾದ ಮಳೆಗಾಲದ ಮುನ್ನೆಚ್ಚರಿಕೆಗಳನ್ನು ಶಿಫಾರಸು ಮಾಡುತ್ತಾರೆ, ಇದರಿಂದ ಆರೋಗ್ಯವಾಗಿರಲು ಮತ್ತು ಮಳೆಯಿಂದ ಸೋಂಕುಗಳನ್ನು ಹರಡದಂತೆ ದೂರವಿಡಬಹುದು.

Rainy season : ಮಳೆಗಾಲದಲ್ಲಿ ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು

  • ಬಿಸಿ ನೀರು ಸೇವಿಸಿ
  • ಹಣ್ಣು-ತರಕಾರಿ ಸೇವಿಸಿ
  • ಉತ್ತಮ ನಿದ್ದೆ
  • ಪೋಷಕಾಂಶಯುಕ್ತ ಆಹಾರ
  • ಯೋಗ

1. ಬಿಸಿ ನೀರು ಸೇವಿಸಿ

ಮಳೆಗಾಲದಲ್ಲಿ ಬೆಳಗ್ಗೆ ಎದ್ದು ಬಿಸಿ ನೀರು ಸೇವಿಸುವ ಮೂಲಕ ನಿಮ್ಮ ದಿನಚರಿ ಆರ೦ಭಿಸುವುದರಿಂದ ನಿಮ್ಮ ದೇಹದ ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Arthritis : ಸಂಧಿವಾತ ಎಂದರೇನು? ಸಂಧಿವಾತ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?

2. ಹಣ್ಣು-ತರಕಾರಿ ಸೇವಿಸಿ

ಕಬ್ಬಿಣದ ಅಂಶ ಹೆಚ್ಚಾಗಿರುವ ಹಣ್ಣು ಮತ್ತು ತರಕಾರಿಗಳು ಮಳೆಗಾಲದಲ್ಲಿ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯಿರಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಸುಸ್ತು ಹಾಗು ಬಳಲಿಕೆ ಹೆಚ್ಚಾಗುತ್ತದೆ.

3. ಉತ್ತಮ ನಿದ್ದೆ

ನ್ಯಾಶನಲ್ ಸ್ಟೀಪ್ ಫೌಂಡೇಶನ್ ಅಧ್ಯಯನ ಪ್ರಕಾರ, ನಿತ್ಯ ನಿದ್ದೆ ಮಾಡುವ ಸಮಯ ನಿಗದಿತವಾಗಿರಬೇಕು, ಅದನ್ನು ದಿನನಿತ್ಯ ರೂಢಿಸಿಕೊ೦ಡರೆ ನಿಮ್ಮ ದೇಹ ಅದಕ್ಕೆ ಒಗ್ಗಿಕೊ೦ಡು ಗುಣಮಟ್ಟದ ನಿದ್ದೆ ಸಿಕ್ಕಿ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಇದನ್ನೂ ಓದಿ: Cancer : ಮಕ್ಕಳಿಗೆ ಕ್ಯಾನ್ಸ‌ರ್ ಬರದಂತೆ ತಡೆಯಲು ಪೋಷಕರು ಏನು ಮಾಡಬೇಕು?

4. ಪೋಷಕಾಂಶಯುಕ್ತ ಆಹಾರ

ಮಳೆಗಾಲದಲ್ಲಿ ಓಟ್ಸ್ ಕೆಂಪು ಅಕ್ಕಿ,  ಗೋಧಿ ಸೇವನೆ ದೇಹಕ್ಕೆ ಬಹಳ ಉತ್ತಮವಾಗಿದ್ದು, ತಾಜಾ ಹಣ್ಣು, ತರಕಾರಿಗಳು, ವಿಟಮಿನ್, ಖನಿಜಭರಿತ ಆಹಾರಗಳು ಆಯಾಸವನ್ನು ಕಡಿಮೆ ಮಾಡುತ್ತದೆ.

5. ಯೋಗ

ಮಳೆಗಾಲದಲ್ಲಿ ಮೂಡ್ ಸ್ಟಿಂಗ್ ಆಗುವುದು, ಆಗಾಗ ಬೇಸರ, ಉದಾಸೀನವಾಗುವುದು ಸಹಜವಾಗಿದ್ದು, ಇಂತಹ ಸಂದರ್ಭದಲ್ಲಿ ಯೋಗ, ಸಂಗೀತ ಕೇಳುವುದು, ದೀರ್ಘ ಉಸಿರಾಟ, ಧ್ಯಾನ ಮಾಡುವುದು, ನೃತ್ಯ ಮಾಡುವುದು ಇತ್ಯಾದಿ ಅಭ್ಯಾಸಗಳನ್ನು ಮಾಡಿದರೆ ನಿಮ್ಮಲ್ಲಿ ಸಹಜವಾಗಿ ಉತ್ಸಾಹ ಹೆಚ್ಚುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!