ನೀರಿನ ಅದ್ಬುತ ಉಪಯೋಗಗಳು:-
1) ಜ್ವರದ ತಾಪ ಹೆಚ್ಚಾದಾಗ ಹಣೆಯ ಮೇಲೆ ತಣ್ಣೀರಿನಿಂದ ನೆನೆಸಿದಬಟ್ಟೆಯನ್ನು ಆಗಾಗ್ಗೆ ಇಡುವುದರಿಂದ ತಲೆನೋವು ಮಾಯವಾಗಿ ಜ್ವರ ಸ್ವಲ್ಪಮಟ್ಟಿಗೆ ಕಡಿಮೆಯಾಗುವುದು.
2) ಉಳುಕಿರುವ ಮತ್ತು ಪೆಟ್ಟು ಬಿದ್ದು ಊದಿಕೊಂಡಿರುವ ಸ್ಥಾನಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ಉಪಶಮನವಾಗುವುದು.
3) ತಲೆಗೆ ತಣ್ಣೀರು ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಏಳುವುದಿಲ್ಲ ಹಾಗೂ ಕೂದಲು ಸೊಂಪಾಗಿ ಬೆಳೆಯುವುದು.
4) ಹೊಟ್ಟೆಯ ಮೇಲೆ ತಣ್ಣೀರಿನಲ್ಲಿ ನೆನೆಸಿ ಬಟ್ಟೆಯನ್ನು ಆಗಾಗ್ಗೆ ಇಡುವುದರಿಂದ ಹೊಟ್ಟೆ ತೊಳಸುವಿಕೆ ಉಪಶಮನವಾಗುವುದು.
5) ಬೆಳಿಗ್ಗೆ ಎದ್ದ ತಕ್ಷಣ ಬರೀ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಉರಿಮೂತ್ರ ಸ್ವಲ್ಪಮಟ್ಟಿಗೆ ನಿವಾರಣೆಯಾಗುವುದು.
7) ಅಗಲವಾದ ಬಾಯಿ ಯುಳ್ಳ ಪಾತ್ರೆಯಲ್ಲಿ ಶುದ್ಧವಾದ ತಣ್ಣೀರು ಭರ್ತಿ ಮಾಡಿ ಆ ನೀರಿನಲ್ಲಿ ಮುಖವಿಟ್ಟು ಚೆನ್ನಾಗಿ ರೆಪ್ಪೆ ಹೊಡೆಯುತ್ತಿದ್ದಾರೆ ಕಣ್ಣಿನಲ್ಲಿ ಅನ್ಯ ಪದಾರ್ಥ ಸೇರಿದರೆ ಹೊರಬರುವುದು.
8) ಚಳಿಗಾಲದಲ್ಲಿ ಪ್ರತಿದಿನ ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ತುಟಿಗಳನ್ನು ನೀರಿನಿಂದ ಒದ್ದೆ ಮಾಡುವ ಅಭ್ಯಾಸವಿಟ್ಟುಕೊಂಡರೆ ತುಟಿಗಳು ಒಡೆಯುವುದಿಲ್ಲ,
9) ಅಗಲವಾದ ಬಾಯಿಯುಳ್ಳ ಪಾತ್ರೆಗೆ ಪಾದ ಮುಳುಗುವಷ್ಟು ಬಿಸಿ ನೀರು ಸುರಿಯಿರಿ. ಆ ನೀರಿಗೆ ಊಟದ ಚಮಚದಷ್ಟು ಅಡಿಗೆ ಸೋಡಾ ಹಾಕಿ ಚೆನ್ನಾಗಿ ಕದಡಿ ಅದರಲ್ಲಿ ಪಾದಗಳನ್ನಿಟ್ಟು ಹತ್ತು ನಿಮಿಷಗಳ ಕಾಲ ನಿಲ್ಲಬೇಕು. ಅದೇ ಕ್ರಮವನ್ನು ಮೂರು ದಿನಗಳ ಕಾಲ ಅನುಸರಿಸಿದರೆ ಪಾದಗಳಲ್ಲಿ ಬಿರುಕು ಮುಚ್ಚಿ ಹೋಗಿ ಪಾದ ಸ್ವಚ್ಛವಾಗಿ ಕಂಡುಬರುತ್ತದೆ.
10) ಸೆಕೆ ಗುಳ್ಳೆ ಉಂಟಾಗಿರುವ ಭಾಗವನ್ನು ಅಕ್ಕಿ ತೊಳೆದ ನೀರಿನಿಂದ ಪ್ರತಿದಿನ ತೊಳೆಯುತ್ತಿದ್ದರೆ ಗುಣ ಕಂಡು ಬರುವುದು.
11) ಅಭ್ಯಂಜನ ಸ್ನಾನ ಮಾಡಿ ಸಾಕಷ್ಟು ವಿಶ್ರಾಂತಿ ಪಡೆದರೆ ಅಂಗೈ ಅಂಗಾಲು ಉರಿ ಉಪಶಮನವಾಗುವುದು.
ಇದನ್ನು ಓದಿ: ಪ್ರತಿದಿನ ಬೆಣ್ಣೆ ಮತ್ತು ತುಪ್ಪ ತಿನ್ನಿ; ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆಯನ್ನ ನೀವೇ ನೋಡಿ