Bananas | ಬಾಳೆಹಣ್ಣು ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

Bananas : ಬಾಳೆಹಣ್ಣುಗಳು ತಾಜಾ, ಬಹುಮುಖ ಮತ್ತು ತುಲನಾತ್ಮಕವಾಗಿ ಅಗ್ಗದ ಹಣ್ಣುಗಳಾಗಿದ್ದು, ಅವುಗಳು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತವೆ ಮತ್ತು ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನವಾಗಬಹುದು. Bananas : ಬಾಳೆಹಣ್ಣು ಸೇವನೆಯಿಂದಾಗುವ…

Bananas

Bananas : ಬಾಳೆಹಣ್ಣುಗಳು ತಾಜಾ, ಬಹುಮುಖ ಮತ್ತು ತುಲನಾತ್ಮಕವಾಗಿ ಅಗ್ಗದ ಹಣ್ಣುಗಳಾಗಿದ್ದು, ಅವುಗಳು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತವೆ ಮತ್ತು ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನವಾಗಬಹುದು.

Bananas : ಬಾಳೆಹಣ್ಣು ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

  1. ಬಿಳಿ ರಕ್ತ ಕಣ ಹೆಚ್ಚಳ
  2. ಕರುಳಿನ ಆರೋಗ್ಯ
  3. ಉತ್ತಮ ನಿದ್ರೆ
  4. ಹೃದಯಕ್ಕೆ ಒಳ್ಳೆಯದು
  5. ಜೀರ್ಣಕ್ರಿಯೆ ಸರಾಗ
  6. ಹಾರ್ಮೋನ್ ಸಮತೋಲನ

banana vijayaprabha news

1. ಬಾಳೆಹಣ್ಣು ಸೇವನೆಯಿಂದ ಬಿಳಿ ರಕ್ತ ಕಣ ಹೆಚ್ಚಳ (Eating bananas increases white blood cells)

ತಜ್ಞರ ಪ್ರಕಾರ, ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ ಪೋಷಕಾಂಶಗಳ ಮಟ್ಟವು ಹೆಚ್ಚಾಗುತ್ತದೆ. ಬಿಳಿ ರಕ್ತ ಕಣಗಳಿಗೆ ಹಸಿರು ಬಾಳೆ ಹಣ್ಣುಗಳಿಗಿಂತ ಕಪ್ಪು ಬಾಳೆಹಣ್ಣುಗಳು 8 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದ್ದು, ಲಂಡನ್ ಸಂಶೋಧಕರ ಪ್ರಕಾರ ಕೇವಲ 1 ಬಾಳೆಹಣ್ಣು ತಿನ್ನುವ ಮಕ್ಕಳಲ್ಲಿ ಅಸ್ತಮಾ ಬರುವ ಸಾಧ್ಯತೆ 34 ಪ್ರತಿಶತ ಕಡಿಮೆಯಿದೆ.

Vijayaprabha Mobile App free

ಇದನ್ನೂ ಓದಿ: Typhoid fever | ಟೈಫಾಯ್ಡ್ ಜ್ವರದಿಂದ ಶೀಘ್ರ ಗುಣಮುಖರಾಗಲು ಮನೆಮದ್ದುಗಳು

2. ಕರುಳಿನ ಆರೋಗ್ಯ

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆನ್ನೀಸಿಯಮ್, ವಿಟಮಿನ್-ಎ, ಬಿ, ಸಿ, ಬಿ6 ನಾರಿನಂಶ ಇದ್ದು, ನೀವು ಅಧಿಕ ತೂಕ ಹೊಂದಿದ್ದರೆ, ಬಾಳೆಹಣ್ಣುಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ ನರಮಂಡಲವನ್ನು ಬಲಪಡಿಸುತ್ತದೆ.

3. ಉತ್ತಮ ನಿದ್ರೆ

ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮಜ್ಞಾಪಕಶಕ್ತಿ ಬಲವಾಗಿ, ನಿಮ್ಮನ್ನು ಉತ್ತಮ ಮನಸ್ಥಿತಿಯಲ್ಲಿ ಇರಿಸುತ್ತದೆ. ವಿಟಮಿನ್ ಬಿ 6 ಮತ್ತು ಮೆನ್ನೀಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಉತ್ತಮ ನಿದ್ರೆ ಬರಲು ಸಹಾಯ ಮಾಡುತ್ತದೆ.

4. ಹೃದಯಕ್ಕೆ ಒಳ್ಳೆಯದು

ಬಾಳೆಹಣ್ಣಿನಲ್ಲಿ ನೈಸರ್ಗಿಕವಾದ ಆಂಟಿ ಆಕ್ಸಿಡೆಂಟ್ ಪ್ರಮಾಣ, ಪೊಟ್ಯಾಸಿಯಂ, ಮೆನ್ನೀಸಿಯಂ ಹೆಚ್ಚಾಗಿದೆ. ಈ ಆಂಟಿ ಆಕ್ಸಿಡೆಂಟ್ ಅಂಶಗಳು ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಮಾಡಿ ಹೃದಯದ ಅಪಧಮನಿಗಳು ಕಟ್ಟಿಕೊಳ್ಳದಂತೆ ನೋಡಿಕೊಂಡು ಸರಾಗವಾದ ರಕ್ತ ಸಂಚಾರ ಉಂಟುಮಾಡುತ್ತವೆ.

ಇದನ್ನೂ ಓದಿ: HIV-AIDS | ಎಚ್‌ಐವಿ-ಏಡ್ಸ್ ನಡುವಿನ ವ್ಯತ್ಯಾಸವೇನು? ಸೋಂಕು ತಗುಲಿದರೆ ಬದುಕಬಹುದ..?

5. ಜೀರ್ಣಕ್ರಿಯೆ ಸರಾಗ

ಬಾಳೆಹಣ್ಣು ಜೀರ್ಣಕ್ರಿಯೆಯನ್ನು ಬಲಪಡಿಸಿ, ಹೊಟ್ಟೆಯಲ್ಲಿ ಹೈಡ್ರಾಲಿಕ್ ಆಮ್ಲದಿಂದಾಗುವ ಹಾನಿಯನ್ನು ತಡೆಯುತ್ತದೆ. ಇದರಲ್ಲಿರುವ ಪ್ರೋಟೀಸ್ ಇನ್ಸಿಬಿಟರ್ಗಳು ಹೊಟ್ಟೆಯ ಹುಣ್ಣಿಗೆ ಕಾರಣವಾಗುವ ಬ್ಯಾಕ್ಟಿರಿಯಾವನ್ನು ನಾಶಮಾಡುತ್ತದೆ. ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಿ, ನೋವನ್ನು ಕಡಿಮೆ ಮಾಡುತ್ತದೆ.

6. ಹಾರ್ಮೋನ್ ಸಮತೋಲನ

ಬಾಳೆಹಣ್ಣುಗಳು ಬೋಮೆಲಿನ್ & ಬಿ ಜೀವಸತ್ವಗಳಿದ್ದು, ಟೆಸ್ಟೋಸ್ಟೆರಾನ್ ಹಾರ್ಮೋನ್‌ನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನ್ ಪುರುಷರಲ್ಲಿ ಲೈಂಗಿಕ ಬಯಕೆ ಹೆಚ್ಚಿಸುತ್ತದೆ. ಟ್ರಿಪ್ರೊಫಾನ್‌ ಸಿರೊಟೋನಿನ್ ಸ್ರವಿಸುವಿಕೆ ಹೆಚ್ಚಿಸುವುದು. ಮ್ಯಾಂಗನೀಸ್ & ಮೆನ್ನೀಸಿಯಮ್ ಪ್ರಾಸ್ಟೇಟ್ ಆರೋಗ್ಯವನ್ನು ಸುಧಾರಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.