One Nation One Election : ಒಂದು ರಾಷ್ಟ್ರ, ಒಂದು ಚುನಾವಣೆ ಮಹತ್ವದ ಮಸೂದೆಯನ್ನು ಗುರುವಾರ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದಿಸಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಮಹತ್ವದ ಈ ಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಮಂತ್ರಿಮಂಡಲ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಲೋಕಸಭೆಗೆ ಹಾಗೂ ಎಲ್ಲಾ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಪ್ರಮುಖ ಉದ್ದೇಶ.
One Nation One Election : ಪ್ರಧಾನಿ ಮೋದಿ ಕಲ್ಪನೆ.. ಒಂದು ದೇಶ, ಒಂದು ಚುನಾವಣೆ
ಸಂಸತ್ತಿನ ಚಳಿಗಾಲದ ಅಧಿವೇಶನದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಿತು.ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗೆ ಅನುಮೋದನೆ ನೀಡಿದೆ. ಈಗ ಕೇಂದ್ರ ಸರ್ಕಾರವು ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಮಂಡಿಸಬಹುದು ಎಂದು ತಿಳಿದುಬಂದಿದೆ. ಇನ್ನು ಒಂದು ದೇಶ, ಒಂದು ಚುನಾವಣೆ ಯೋಜನೆ ಜಾರಿಗೆ ತರುವುದು ಪ್ರಧಾನಿ ಮೋದಿ ಕಲ್ಪನೆಯಾಗಿದೆ.
One Nation One Election : ‘ಒಂದು ದೇಶ, ಒಂದು ಚುನಾವಣೆ’ ಎಂಬ ಚರ್ಚೆ ಏನಿದು?
ಪ್ರಧಾನಿ ಮೋದಿ ಅವರು 2019ರ ಸ್ವಾತಂತ್ರ್ಯ ದಿನದಂದು ಒಂದು ದೇಶ ಒಂದು ಚುನಾವಣೆಯನ್ನು ಉಲ್ಲೇಖಿಸಿದ್ದರು. ಅಂದಿನಿಂದ ಹಲವು ಸಂದರ್ಭಗಳಲ್ಲಿ ಬಿಜೆಪಿ ‘ಒಂದು ದೇಶ, ಒಂದು ಚುನಾವಣೆ’ ಎಂದು ಹೇಳುತ್ತಲೇ ಬಂದಿದೆ. ದೇಶದ ಎಲ್ಲಾ ರಾಜ್ಯಗಳ ಲೋಕಸಭೆ & ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ಅಂಶವನ್ನು ಆಧರಿಸಿ ಈ ಆಲೋಚನೆ ಇದೆ. ಪ್ರಸ್ತುತ, ಲೋಕಸಭೆ ಅಂದರೆ ಸಾರ್ವತ್ರಿಕ ಚುನಾವಣೆಗಳು ಮತ್ತು ವಿಧಾನಸಭೆ ಚುನಾವಣೆಗಳು 5 ವರ್ಷಗಳ ಮಧ್ಯಂತರದಲ್ಲಿ ನಡೆಯುತ್ತವೆ.
One Nation One Election; ಲಾಭವೇನು?
ಲೋಕಸಭಾ ಚುನಾವಣೆಯು 5 ವರ್ಷಕ್ಕೊಮ್ಮೆ ನಡೆಯುತ್ತದೆ. ಇನ್ನು, ಆಯಾ ರಾಜ್ಯಗಳ ವಿಧಾನಸಭಾ ಚುನಾವಣೆಯು 5 ವರ್ಷದ ಅವಧಿ ಯಾವಾಗ ಮುಗಿಯುತ್ತೋ, ಆ ವೇಳೆ ನಡೆಯುತ್ತದೆ. ಇಂತಹ ಚುನಾವಣಾ ಪದ್ಧತಿಯಿಂದಾಗಿ 2 ಬಾರಿ ಪ್ರತ್ಯೇಕವಾಗಿ ಆರ್ಥಿಕ ಸಂಪನ್ಮೂಲದ ಆಯೋಜನೆ, ಸಿಬ್ಬಂದಿಗಳು ಸೇರಿದಂತೆ ಆಡಳಿತಾತ್ಮಕವಾದ ಕೆಲಸ ಕಾರ್ಯಗಳನ್ನು ಆಯೋಜಿಸಬೇಕಾಗುತ್ತದೆ. ಇದನ್ನು ಉಳಿಸಲು, ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿಯೇ ಉತ್ತಮ ಎನ್ನುವುದು ಕೇಂದ್ರದ ವಾದ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.