Urmila Matondkar Divorce : ಖ್ಯಾತ ನಟಿ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ!

Urmila Matondkar Divorce: ಬಾಲಿವುಡ್‌ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ (Urmila Matondkar ) ಮತ್ತು ಮೊಹ್ಸಿನ್‌ ಅಖ್ತರ್‌ ಮಿರ್‌ ಅವರು ಪರಸ್ಪರ ಒಪ್ಪಿಗೆ ಮೇರೆಗೆ 8 ವರ್ಷಗಳ ದಾಂಪತ್ಯ ಕೊನೆಗೊಳಿಸಲು ನಿರ್ಧರಿಸಿದ್ದು, ವಿಚ್ಛೇದನಕ್ಕೆ…

Urmila Matondkar Divorce

Urmila Matondkar Divorce: ಬಾಲಿವುಡ್‌ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್‌ (Urmila Matondkar ) ಮತ್ತು ಮೊಹ್ಸಿನ್‌ ಅಖ್ತರ್‌ ಮಿರ್‌ ಅವರು ಪರಸ್ಪರ ಒಪ್ಪಿಗೆ ಮೇರೆಗೆ 8 ವರ್ಷಗಳ ದಾಂಪತ್ಯ ಕೊನೆಗೊಳಿಸಲು ನಿರ್ಧರಿಸಿದ್ದು, ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಹೌದು, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಊರ್ಮಿಲಾ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ ಊರ್ಮಿಳಾ ಹಲವು ವಿಚಾರಗಳ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಅವರ ವಿಚ್ಛೇದನದ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.

ಇದನ್ನೂ ಓದಿ: ಬಿಗ್‌ ಬಾಸ್‌ ಶೋ ಗಿಂತ ಮುಂಚೆಯೇ ಕಂಟೆಸ್ಟೆಂಟ್‌ ಅನೌನ್ಸ್‌!

Vijayaprabha Mobile App free

Urmila Matondkar Divorce : ತನಗಿಂತ 10 ವರ್ಷ ಕಿರಿಯ, ಮುಸ್ಲಿಂ ಯುವಕನೊಂದಿಗೆ ಮದುವೆ!

Urmila Matondkar Divorce
Urmila Matondkar Divorce

2016ರ ಫೆಬ್ರುವರಿ 4 ರಂದು ಊರ್ಮಿಳಾ ಮಾತೋಂಡ್ಕರ್‌ ಅವರು ಕಾಶ್ಮೀರಿ ಉದ್ಯಮಿ ಮತ್ತು ಮಾಡೆಲ್‌ ಮೊಹ್ಸಿನ್‌ ಅವರನ್ನು ಮದುವೆಯಾಗಿದ್ದರು. ಮುಂಬೈನ ನಟಿಯ ನಿವಾಸದಲ್ಲಿ ಮದುವೆ ನಡೆದಿದ್ದು, ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಊರ್ಮಿಳಾ ತನಗಿಂತ 10 ವರ್ಷ ಕಿರಿಯ, ಮುಸ್ಲಿಂ ಯುವಕನೊಂದಿಗೆ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು.

ಇದನ್ನೂ ಓದಿ: ಖ್ಯಾತ ಸ್ವಾಮೀಜಿಯಿಂದ ನಿರಂತರ 6 ತಿಂಗಳು ಅತ್ಯಾಚಾರ

ಊರ್ಮಿಳಾ ಮಾತೋಂಡ್ಕರ್ ಶೇಖರ್ ಕಪೂರ್ ಅವರ 1980 ರ ಎರಿಕ್ ಸೆಗಲ್ ನಾವೆಲ್ ಮ್ಯಾನ್ ನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ತೊಂಬತ್ತರ ದಶಕದಲ್ಲಿ ಅನೇಕ ಹಿಟ್‌ಗಳಲ್ಲಿ ಕಾಣಿಸಿಕೊಂಡ ಊರ್ಮಿಳಾ, ರಂಗೀಲಾ, ಜುದಾಯಿ, ಸತ್ಯ, ಮಸ್ತ್, ಖೂಬ್‌ಸುರತ್, ಪ್ಯಾರ್ ತುನೆ ಕ್ಯಾ ಕಿಯಾ ಭೂತ್ ಮತ್ತು ಏಕ್ ಹಸೀನಾ ಥಿ ಎಂಬ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಊರ್ಮಿಳಾ ಕೊನೆಯದಾಗಿ 2014 ರಲ್ಲಿ ಅಜೋಬಾ ಎಂಬ ಮರಾಠಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 2018 ರಲ್ಲಿ ಬ್ಲ್ಯಾಕ್‌ಮೇಲ್‌ ಸಿನಿಮಾದ ಬೇವಾಫಾ ಬ್ಯೂಟಿ ಹಾಡಿನಲ್ಲಿ ಅವರು ವಿಶೇಷ ಪಾತ್ರದಲ್ಲಿ ಸಹ ಕಾಣಿಸಿಕೊಂಡಿದ್ದರು .

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್; ಶಾಲೆಗಳಿಗೆ 17 ದಿನಗಳ ದಸರಾ ರಜೆ ಘೋಷಣೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.