ಬಿಗ್‌ ಬಾಸ್‌ ಶೋ ಗಿಂತ ಮುಂಚೆಯೇ ಕಂಟೆಸ್ಟೆಂಟ್‌ ಅನೌನ್ಸ್‌!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಪ್ರೆಸ್‌ ಮೀಟ್‌  ಈಗಾಗಲೇ ಶುರುವಾಗಿದ್ದು, ಸ್ಪರ್ಧಿಗಳ ಬಗ್ಗೆ ಮಾಹಿತಿ ಶೇರ್‌ ಮಾಡಿಕೊಂಡಿದ್ದಾರೆ ಕಿಚ್ಚ. ಮಾತ್ರವಲ್ಲ ಹ್ಯಾಷ್‌ಟ್ಯಾಗ್‌  ಕೂಡ ರಿವೀಲ್‌ ಮಾಡಿದೆ ಟೀಂ. ಈ ಬಾರಿ ಇಲ್ಲೇ ಸ್ವರ್ಗ…

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಪ್ರೆಸ್‌ ಮೀಟ್‌  ಈಗಾಗಲೇ ಶುರುವಾಗಿದ್ದು, ಸ್ಪರ್ಧಿಗಳ ಬಗ್ಗೆ ಮಾಹಿತಿ ಶೇರ್‌ ಮಾಡಿಕೊಂಡಿದ್ದಾರೆ ಕಿಚ್ಚ. ಮಾತ್ರವಲ್ಲ ಹ್ಯಾಷ್‌ಟ್ಯಾಗ್‌  ಕೂಡ ರಿವೀಲ್‌ ಮಾಡಿದೆ ಟೀಂ.

ಈ ಬಾರಿ ಇಲ್ಲೇ ಸ್ವರ್ಗ ಇಲ್ಲೇ ನರಕ ಎಂಬ ಹೊಸ ಅಧ್ಯಾಯ ಇರಲಿದೆ ಕಿಚ್ಚ ಸುದೀಪ್  ಮಾತು ಶುರು ಮಾಡಿದ್ದಾರೆ. ಹಾಗಾದ್ರೆ ಯಾರೆಲ್ಲ ಇರ್ತಾರೆ ಸ್ಪರ್ಧಿಗಳು? ಎಲ್ಲಿ ರಿವೀಲ್‌ ಆಗ್ತಾರೆ?

ರಾಜ ರಾಣಿ ಫಿನಾಲೆಯಲ್ಲಿ ಸ್ಪರ್ಧಿಗಳು ರಿವೀಲ್‌ ಆಗ್ತಾರೆ!

Vijayaprabha Mobile App free

ಬಿಗ್‌ ಬಾಸ್‌ ಇತಿಹಾಸದಲ್ಲೇ ಪ್ರ ಪ್ರಥಮ ಬಾರಿಗೆ ರಾಜ ರಾಣಿ ಫಿನಾಲೆಯಲ್ಲಿ ಸ್ಪರ್ಧಿಗಳು ರಿವೀಲ್‌ ಆಗ್ತಾರೆ. ಅದು ಕೂಡ ಕೆಲವು ಸ್ಪರ್ಧಿಗಳು ಮಾತ್ರ ರಿವೀಲ್‌ ಆಗ್ತಾರೆ ಎಂದು ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರದಂದು ಕೆಲವು ಸ್ಪರ್ಧಿಗಳು ಶೋ ಮುಂಚೆಯೇ ರೀವಿಲ್ ಆಗುತ್ತಾರೆ. ಮೊಟ್ಟ ಮೊದಲನೇ ಬಾರಿಗೆ ವಿಭಿನ್ನ ರೀತಿಯಲ್ಲಿ ಸ್ಪರ್ಧಿಗಳು ಹೆಸರು ರಿವೀಲ್ ಆಗುತ್ತಾರೆ. ಶೋ ಮುಂಚೆಯೇ ವೀಕ್ಷಕರ ವೋಟಿಂಗ್ ಮೂಲಕ ಕೆಲವು ಸ್ಪರ್ಧಿಗಳು ಮನೆಯೊಳಗೆ ಬರುತ್ತಾರೆ ಎಂದು ಹೇಳಿಕೊಂಡಿದೆ.

ಇದೇ ವೇಳೆ ಬಿಗ್‌ ಬಾಸ್‌ ತಂಡದ ಪರಿಶ್ರಮ ಪ್ರತಿ ವರ್ಷದಂತೆ ಈ ವರ್ಷವೂ ಇರುತ್ತದೆ. ಲಿಸ್ಟ್‌ ಕೂಡ ಜನರಿಗೆ ಇಷ್ಟವಾಗಬೋದು ಅಂದುಕೊಳ್ಳುತ್ತೇವೆ. ಶೋ ಡಿಸೈನ್‌ ಮಾಡಬಹದು. ಆದರೆ ಸೂತ್ರಧಾರ ತುಂಬ ಮುಖ್ಯ. ಕಿಚ್ಚ ಸುದೀಪ್‌ ಅವರ ನಿರೂಪಣೆಯಲ್ಲಿ ಸೀಸನ್‌ 11 ಶುರುವಾಗತ್ತೆ ಎಂದು ಹೇಳಿಕೊಂಡಿದ್ದಾರೆ ಆಯೋಜಕರು.

ಹ್ಯಾಷ್‌ ಟ್ಯಾಗ್‌ ರಿವೀಲ್‌!

ಬಿಗ್‌ ಬಾಸ್‌ ಶುರುವಾಗುವ ಮುಂಚೆ ಕಿಚ್ಚ ಸುದೀಪ್‌ ಅವರ ಹೆಸರಿನ ಹ್ಯಾಷ್‌ ಟ್ಯಾಗ್‌ ಪ್ರೋಮೋಗಳಲ್ಲಿ ಇಲ್ಲದ ಕಾರಣ ಸುದೀಪ್‌ ಹೋಸ್ಟ್‌ ಮಾಡರೋದು ಡೌಟ್‌ ಎನ್ನಲಾಗ್ತಿತ್ತು. ಬಳಿಕ ಸುದೀಪ್‌ ಅವರೇ ನಿರೂಪಣೆ ಮಾಡೋದು ಕನ್‌ಫರ್ಮ್‌ ಆಯ್ತು. ಇದೀಗ ತಂಡ ಎರಡು ಹೊಸ ಹ್ಯಾಷ್‌ಟ್ಯಾಗ್‌ವನ್ನು ಬಿಡುಗಡೆಗೊಳಿಸಿದೆ. ಅದುವೇ. ಹ್ಯಾಷ್‌ಟ್ಯಾಗ್‌ BBK11, ಹ್ಯಾಷ್‌ಟ್ಯಾಗ್‌ HOsaAdhaya.

ಬಿಗ್‌ ಬಾಸ್‌ಗೆ ಹೋಗ್ತಾ ಇದ್ದಾರಾ? ಸಂಭಾವ್ಯ ಪಟ್ಟಿ ವೈರಲ್‌

ಕನ್ನಡ ಕಿರುತೆರೆಯ ಹ್ಯಾಂಡಸಮ್ ಬಾಯ್ ಎಂದೇ ಹೆಸರಾದ ತ್ರಿವಿಕ್ರಮ್ ‘ಪದ್ಮಾವತಿ’ ಧಾರಾವಾಹಿ ವೇಳೆ ರಾಜ್ಯದ ಮನೆ ಮಾತಾಗಿದ್ದರು. ತ್ರಿವಿಕ್ರಮ್ ಇಂದು ಎಲ್ಲಿ ಹೋದರೂ ಜನರು ಅವರನ್ನು ಗುರುತಿಸುವುದು ಸಾಮ್ರಾಟ್ ಆಗಿ. ಅಷ್ಟರ ಮಟ್ಟಿಗೆ ಅವರ ಪಾತ್ರ ಜನರನ್ನು ಮೋಡಿ ಮಾಡಿಬಿಟ್ಟಿದೆ. ಇದೀಗ ತ್ರಿವಿಕ್ರಮ್‌ ಬಿಗ್‌ ಬಾಸ್‌ ಮನೆಗೆ ಬರೋದು ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ.

ಯಾವುದೇ ಚಿತ್ರರಂಗದಲ್ಲಿ ನಟರ ಡೂಬ್ಲಿಕೇಟ್‌ ಇದ್ದೇ ಇರುತ್ತಾರೆ. ಅದರಲ್ಲಿ ದರ್ಶನ್‌‌‌‌ ರೀತಿ ಇರುವ ಅವಿನಾಶ್‌ ಕೂಡ. ಸಾಕಷ್ಟು ಬಾರಿ ಹಲವು ವೇದಿಕೆಗಳಲ್ಲಿ ಅತಿಥಿಯಾಗಿ ಬಂದಿದ್ದಾರೆ. ಕಲರ್ಸ್ ಸೂಪರ್‌ನಲ್ಲಿ ಪ್ರಸಾರ ಆಗುತ್ತಿದ್ದ ‘ಮಜಾಭಾರತ’ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಾಗ ಸಾಕಷ್ಟು ಫೇಮಸ್‌ ಆದರು. ಸ್ವತಃ ರಚಿತಾ ರಾಮ್‌ ಅವರೇ ಫಿದಾ ಆಗಿ ಹೊಗಳಿದ್ದರು. ಇದೀಗ ಅವಿನಾಶ್‌ ಬಿಗ್‌ ಬಾಸ್‌ ಮನೆಗೆ ಬರ್ತಿದ್ದಾರೆ ಎನ್ನಲಾಗುತ್ತಿದೆ. ಅಮೃತಧಾರೆ ಸೀರಿಯಲ್ ನಲ್ಲಿ ಗೌತಮ್ ದಿವಾನ್ ತಮ್ಮ ಪಾರ್ಥನ ಪಾತ್ರದಲ್ಲಿ ಮಿಂಚುತ್ತಿರುವ ಕರಣ್‌ ಕೆ ಆರ್‌ ಬಿಗ್‌ ಬಾಸ್‌ಗೆ ಬರ್ತಿದ್ದಾರೆ ಎನ್ನಲಾಗಿದೆ. ಪವಿ ಪಡುಕೋಣೆ ಮೂಲತಃ ಬೆಂಗಳೂರಿನವಾಗಿರುವ ಪವಿ ಹಲವು ಫಿಟ್ನೆಸ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಫಿಟ್ನೆಸ್‌ ಮಾಡೆಲ್‌ ಆಗಿ ಸಾಕಷ್ಟು ಗಮನ ಸೆಳೆದಿದ್ದಾರೆ. ಇವರೂ ಬಿಗ್‌ ಬಾಸ್‌ಗೆ ಬರ್ತಿದ್ದಾರೆ ಎನ್ನಲಾಗಿದೆ. ಜತೆಗೆ ಚೈತ್ರಾ ಕುಂದಾಪುರ್‌ ಕೂಡ ಬರಬಹುದು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.