ಕಿರುತೆರೆಯ ಖ್ಯಾತ ಕಲಾವಿದ ರಾಕೇಶ್ ಪೂಜಾರಿ ನಿಧನ; ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು?

Rakesh Poojary : ಕಾಮಿಡಿ ಕಿಲಾಡಿಗಳು ಸೀಸನ್-3ರ ವಿಜೇತ ರಾಕೇಶ್ ಪೂಜಾರಿ(Rakesh Poojary) (34) ಅವರು ಹೃದಯಾಘಾತದಿಂದ ದಿಢೀರ್ ನಿಧನರಾಗಿದ್ದಾರೆ. ಅವರ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿಯಲ್ಲಿ ಆಘಾತ ಮೂಡಿದೆ. ನಿನ್ನೆ ಸ್ನೇಹಿತನೊಬ್ಬನ ಮದುವೆಯ…

Rakesh Poojary passes away

Rakesh Poojary : ಕಾಮಿಡಿ ಕಿಲಾಡಿಗಳು ಸೀಸನ್-3ರ ವಿಜೇತ ರಾಕೇಶ್ ಪೂಜಾರಿ(Rakesh Poojary) (34) ಅವರು ಹೃದಯಾಘಾತದಿಂದ ದಿಢೀರ್ ನಿಧನರಾಗಿದ್ದಾರೆ. ಅವರ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿಯಲ್ಲಿ ಆಘಾತ ಮೂಡಿದೆ. ನಿನ್ನೆ ಸ್ನೇಹಿತನೊಬ್ಬನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ರಾಕೇಶ್ ಅವರಿಗೆ ದಿಢೀರ್ ಬಿಪಿ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರಾಕೇಶ್ ಪೂಜಾರಿ ಅವರ ನಿಧನಕ್ಕೆ ನಟಿ ರಕ್ಷಿತಾ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಂಗಿಯ ಮದುವೆಯ ಕನಸು: ರಾಕೇಶ್ ಪೂಜಾರಿಯ ದುರಂತ ಸಾವು

Rakesh Poojary

ರಾಕೇಶ್ ಪೂಜಾರಿ ಅವರು ತಮ್ಮ ತಂಗಿಯ ಮದುವೆಯ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದರು. ಅದ್ಧೂರಿಯಾಗಿ ಮದುವೆ ನೆರವೇರಿಸಲು ತಯಾರಿ ನಡೆಸಿದ್ದರು. ತಂಗಿಯ ಮದುವೆಯ ನಂತರ ತಾವು ಮದುವೆಯಾಗುವ ಯೋಚನೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಆದರೆ, ಕುಟುಂಬದ ಆಧಾರಸ್ತಂಭವಾಗಿದ್ದ ರಾಕೇಶ್, ತಾಯಿ ಮತ್ತು ತಂಗಿಯನ್ನು ಶಾಶ್ವತವಾಗಿ ಅಗಲಿದ್ದಾರೆ.

Vijayaprabha Mobile App free

ರಾಕೇಶ್‌ಗೆ ತಮ್ಮ ಸಾವಿನ ಮುನ್ಸೂಚನೆ ಗೊತ್ತಿತ್ತೇ?

Rakesh Poojary Kantara Chapter 1

ರಾಕೇಶ್ ಪೂಜಾರಿ ಅವರ ಸಾವಿನ ಬಗ್ಗೆ ಮೊದಲೇ ಗೊತ್ತಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಅವರ ಇನ್‌ಸ್ಟಾಗ್ರಾಂ ಬಯೋದಲ್ಲಿ ಬರೆದಿರುವ ಸಾಲು ಮತ್ತು ಅವರ ಹಠಾತ್ ಸಾವಿನ ನಡುವೆ ಸಾಮ್ಯತೆ ಕಂಡುಬಂದಿದೆ. ಅವರ ಸೋಷಿಯಲ್ ಮೀಡಿಯಾ ಬಯೋದಲ್ಲಿ ಕೇವಲ ನಾಲ್ಕು ಅಕ್ಷರಗಳ ಸಾಲು ಇದೆ: ‘Life is short me 2’. ಈ ಬರಹ ಕಾಕತಾಳೀಯವೋ ಅಥವಾ ಅವರಿಗೆ ತಮ್ಮ ಸಾವಿನ ಬಗ್ಗೆ ಮುನ್ಸೂಚನೆಯೋ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.

ತಂದೆಯ ಸಾವಿನ ನಂತರ ಕುಟುಂಬದ ಆಧಾರವಾಗಿದ್ದ ರಾಕೇಶ್

ರಾಕೇಶ್ ಪೂಜಾರಿ ಮೂಲತಃ ಉಡುಪಿಯವರು. ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಯ ಪುತ್ರರಾಗಿದ್ದ ಅವರಿಗೆ ಒಬ್ಬ ಸಹೋದರಿ ಇದ್ದಾಳೆ. ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ಮೂರು ವರ್ಷಗಳ ಹಿಂದೆ ರಾಕೇಶ್ ಅವರ ತಂದೆಯೂ ಹೃದಯಾಘಾತದಿಂದ ನಿಧನರಾಗಿದ್ದರು. ಅಂದಿನಿಂದ ಕುಟುಂಬಕ್ಕೆ ರಾಕೇಶ್ ಆಧಾರವಾಗಿದ್ದರು. ಇತ್ತೀಚೆಗೆ ಅವರಿಗೆ ಅಪಘಾತವಾಗಿತ್ತಾದರೂ, ತ್ವರಿತವಾಗಿ ಚೇತರಿಸಿಕೊಂಡಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.