Virat Kohli retirement: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ತಮ್ಮ ಟೆಸ್ಟ್ ಕ್ರಿಕೆಟ್ ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ರೋಹಿತ್ ಶರ್ಮ ವಿದಾಯದ ಬೆನ್ನಲ್ಲೇ ಕಿಂಗ್ ಕೊಹ್ಲಿ ಕೂಡ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ.
ಹೌದು, ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ, ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪ್ರಯಾಣವು ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಎಂದು ಊಹಿಸಿರಲಿಲ್ಲ. ಅದು ನನ್ನನ್ನು ರೂಪಿಸಿತು ಮತ್ತು ನನಗೆ ಪಾಠಗಳನ್ನು ಕಲಿಸಿತು. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಸಂತೋಷದಿಂದ ನೋಡುತ್ತೇನೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನ ಅಂಕಿ ಅಂಶ ಇಲ್ಲಿದೆ..!
ಭಾರತದ ಮಾಜಿ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಇಂದು ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಓರ್ವ ನಾಯಕನಾಗಿ ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ನಾಯಕನೂ ಕೊಂಡೊಯ್ಯದಂತಹ ಘಟ್ಟವನ್ನು ತಲುಪಿಸಿದ ನಾಯಕ. ಆಟಗಾರನಾಗಿ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನಾಡಿ 210 ಇನ್ನಿಂಗ್ಸ್ ಆಡಿದ್ದು, 9230 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಅಜೇಯ 254 ರನ್ ಗರಿಷ್ಟ ರನ್ ಬಾರಿಸಿರುವ ಕೊಹ್ಲಿ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ ನಿವೃತ್ತಿ.. 1 ವರ್ಷದಲ್ಲಿ ಅಲ್ಲೋಲ ಕಲ್ಲೋಲ
ವಿರಾಟ್ ಕೊಹ್ಲಿ ಕೇವಲ 1 ವರ್ಷ ಅಂತರದಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸಚಿನ್ ಅವರ ಶತಕದ ದಾಖಲೆ ಆಗಿರುವ 100 ಸೆಂಚ್ಯುರಿ ಮೀರಿಸಲು ಇನ್ನೇನು ಕೆಲವೇ, ಕೆಲವು ಅಂಕಿ ದೂರದಲ್ಲಿ ಇರುವ ವಿರಾಟ್ ಕೊಹ್ಲಿ ಸಾಕಷ್ಟು ಬೇಸರದಲ್ಲಿ ಇರುವಂತೆ ಕಾಣುತ್ತಿದೆ. ಇದೀಗ ಟೆಸ್ಟ್ & 1 ವರ್ಷದ ಹಿಂದೆ T20 ಆಟಕ್ಕೆ ನಿವೃತ್ತಿ ಘೋಷಿಸಿದ್ದರು. ಹೀಗಿದ್ದಾಗಲೇ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಕೂಡ ನಿವೃತ್ತಿ ಘೋಷಿಸುತ್ತಾರೆ ಅಂತಾ ದೊಡ್ಡ ಚರ್ಚೆ ಇದೀಗ ಶುರು ಆಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
View this post on Instagram