ಬೆಂಗಳೂರು: ಗೋವಾದಲ್ಲಿ ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ನಟ ದಿಗಂತ್ ಅವರು ದೈಹಿಕ ಕಸರತ್ತು ಮಾಡುವಾಗ ಆಯತಪ್ಪಿ ಬಿದ್ದು ಕತ್ತಿನ ಭಾಗಕ್ಕೆ ದೊಡ್ಡ ಪ್ರಮಾಣ ಪೆಟ್ಟು ಮಾಡಿಕೊಂಡಿದ್ದರು. ಮಂಗಳವಾರ ಸಂಜೆ ಏರ್ಲಿಫ್ಟ್ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ 3 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದ್ದು, ಸರ್ಜರಿ ಬಳಿಕ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಇನ್ನೂ 3-4 ದಿನ ಆಸ್ಪತ್ರೆಯಲ್ಲೇ ಉಳಿಯುವ ಸಾಧ್ಯತೆ ಇದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದು, ಸದ್ಯ ದಿಗಂತ್ ಅವರ ಹೊಸ ಫೋಟೋವೊಂದು ಹೊರಬಿದ್ದಿದೆ. ಫೋಟೋದಲ್ಲಿ ದಿಗಂತ್ ನಾನು ಚೆನ್ನಾಗಿದ್ದು, ಶೀಘ್ರ ಗುಣಮುಖನಾಗಲಿದ್ದೇನೆ ಎಂಬರ್ಥದಲ್ಲಿ ಕೈಬೆರಳು ತೋರಿಸಿದ್ದು, ಸದ್ಯ ಈ ಫೋಟೋ ವೈರಲ್ ಆಗಿದೆ.





