Devara movie collection : ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡಿರುವ ತೆಲುಗಿನ ಜೂನಿಯರ್ ಎನ್ ಟಿಆರ್ ಅವರ ಅಭಿನಯದ ‘ದೇವರ’ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆಯಂತೆ.
ಹೌದು, ಚಿತ್ರರಂಗದ ಪ್ರಕಾರ ನಿನ್ನೆ ತೆರೆಖಂಡ ದೇವರ ಸಿನಿಮಾ ವಿಶ್ವಾದ್ಯಂತ 140 ಕೋಟಿ ರೂ. ಆಂಧ್ರ ಮತ್ತು ತೆಲಂಗಾಣದಲ್ಲಿ ರೂ.60-70 ಕೋಟಿ ಬಾಚಿದೆ ಎಂದು ವರದಿಯಾಗಿದೆ. ಹಿಂದಿಯಲ್ಲಿ ರೂ.7 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಇನ್ನು, ಕನ್ನಡ ಆವೃತ್ತಿಯಿಂದ ₹0.3 ಕೋಟಿ, ತಮಿಳು ಆವೃತ್ತಿಯಿಂದ ₹0.8 ಕೋಟಿ ಮತ್ತು ಮಲಯಾಳಂ ಆವೃತ್ತಿಯಿಂದ ₹0.3 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಇತರ ಭಾಷೆಗಳು ಮತ್ತು ಸಾಗರೋತ್ತರ ಸೇರಿದಂತೆ ರೂ.140 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಆದರೆ ನಿರ್ಮಾಪಕರಿಂದ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.
ಇನ್ನು, ದೇವರ ಚಿತ್ರವನ್ನು ನಿರ್ದೇಶಕ ಕೊರಟಲಾ ಶಿವಾ ನಿರ್ದೇಶನ ಮಾಡಿದ್ದೂ, ಯುವಸುಧಾ ಆರ್ಟ್ಸ್, ಎನ್ಟಿಆರ್ ಆರ್ಟ್ಸ್ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಜ್ಯುನಿಯರ್ ಏನ್ ಟಿ ಆರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಶ್ರುತಿ ಮರಾಠೆ, ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೋ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.