ಮುಂಬೈ : ಬಾಲಿವುಡ್ ನಿರ್ಮಾಪಕ, ನಟ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್, ತನ್ನ ಕೆಲವು ಹಾಟ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಎದುರಿಸಿದ ಅಪಮಾನಗಳ ಬಗ್ಗೆ ಮಾತನಾಡಿದ್ದಾರೆ.
ಆಲಿಯಾ ಕಶ್ಯಪ್ ಪೋಸ್ಟ್ ಮಾಡಿದ್ದಕ್ಕಾಗಿ ನಾನು ಭಾರತೀಯಳಾಗಿರುವುದಕ್ಕೆ ನಾಚಿಕೆ ಪಡಬೇಕು ಎಂದು ಜನರು ಹೇಳಿದ್ದರು. ನನ್ನನ್ನು ವೇಶ್ಯೆ ಎಂದು ಕರೆಯುತ್ತಿದ್ದರು. ನನ್ನ ರೇಟ್ ಎಷ್ಟು ಎಂದು ಕೇಳುವ ಮೂಲಕ ಅತ್ಯಾಚಾರದ ಬೆದರಿಕೆಯನ್ನು ಹಾಕಿದ್ದರು ಎಂದು ಹೇಳಿರುವ ಆಲಿಯಾ, ತಮ್ಮ ಫೋನ್‌ಗಳ ಹಿಂದೆ ಅಡಗಿರುವ ಜನರಿಗೆ ಉತ್ತಮವಾಗಿ ಮಾಡಲು ಏನೂ ಇಲ್ಲ ಎಂದಿದ್ದಾರೆ.
ಇತ್ತೀಚಿಗೆ ಆಲಿಯಾ ಕಶ್ಯಪ್ ಅವರ ತಂದೆ ನಿರ್ಮಾಪಕ, ನಟ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಷ್ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ನಟಿ ಪಾಯಲ್ ಘೋಷ್ ಅವರು, ಅನುರಾಗ್ ಕಶ್ಯಪ್ ನನ್ನ ಮೇಲೆ ಬಲವಂತ ಮಾಡಿದ್ದಾರೆ. ನರೇಂದ್ರ ಮೋದಿ ಅವರೇ ಅನುರಾಗ್ ಕಶ್ಯಪ್ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ನಾನು ಅಪಾಯಕ್ಕೆ ಸಿಳುಕಲಿದ್ದೇನೆ ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಆರೋಪ ಮಾಡಿದ್ದರು.
View this post on Instagram