ಬಾಯ್ ಕಾಟ್ ನಡುವೆಯೂ ಕೋಟಿ ಎಣಿಸಿದ ಲಾಲ್ ಸಿಂಗ್ ಚಡ್ಡಾ; ದೊಬಾರಾ boycott ಮಾಡಿ ಎಂದ ತಾಪ್ಸಿ-ಕಶ್ಯಪ್‌!

ಅಮೀರ್ ಖಾನ್ ನಟನೆಯ ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಅಮೀರ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಈ ಚಿತ್ರವನ್ನ ಬಾಯ್ ಕಾಟ್…

Lal Singh Chadha and Taapsee-Kashyap

ಅಮೀರ್ ಖಾನ್ ನಟನೆಯ ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಅಮೀರ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಈ ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರು ಮಾಡಿದ್ದರು.

ಬಾಯ್ ಕಾಟ್ ನಡೆದರೂ ಕೂಡ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಕೋಟಿ ಕೋಟಿ ಹಣವನ್ನು ಚಿತ್ರವು ಬಾಚುತ್ತಿದೆಯಂತೆ. ಈಗಾಗಲೇ ದಾಖಲೆ ರೀತಿಯಲ್ಲಿ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ ಎಂದು ವರದಿಯಾಗಿದೆ.

Vijayaprabha Mobile App free

ದೊಬಾರಾ’ boycott ಮಾಡಿ ಎಂದ ತಾಪ್ಸಿ-ಕಶ್ಯಪ್‌!

ಇನ್ನು,  ‘ದೊಬಾರಾ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆದರೆ, ತಮ್ಮ ಚಿತ್ರವನ್ನೂ ಬಹಿಷ್ಕರಿಸುವಂತೆ ಸ್ವತಃ ತಾಪ್ಸಿ ಪನ್ನು ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್‌ ತಮಾಷೆಯಾಗಿ ಹೇಳಿದ್ದಾರೆ.

Taapsee-Kashyap1

ಹೌದು, ಟ್ವಿಟರ್‌ನಲ್ಲಿ #BoycottAamirKhan #BoycottRakshaBandhan ಟ್ರೆಂಡ್‌ ಆಗುತ್ತಿದ್ದು, ತಮ್ಮ ಸಿನಿಮಾ ಬಹಿಷ್ಕಾರದ ಭಯವಿದೆಯೇ ಎಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ, ‘ಅಮೀರ್‌ ಖಾನ್‌, ಅಕ್ಷಯ್‌ ಲೀಗ್‌ಗೆ ನಾವೂ ಬರಲು ಇಷ್ಟಪಡುತ್ತೇವೆ. ನಮ್ಮದೂ ಟ್ರೆಂಡಿಂಗ್‌ ಆಗಲಿ; ನಮ್ಮನ್ನು Boycott ಮಾಡಿ’ ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.