ಬೆಂಗಳೂರು: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಅವರು ಏಪ್ರಿಲ್ 1ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.
ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂದು ಹೇಳಲಾಗಿದ್ದು, ಈಗಾಗಲೇ ಚಂದನ್ & ಕವಿತಾ ಜೊತೆ ಟ್ರೆಕ್ಕಿಂಗ್ & ಲಾಂಗ್ ಡ್ರೈವ್, ಟ್ರಿಪ್ ಹೋಗುವುದು ಮತ್ತಿತರ ಕಾರಣದಿಂದ ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಕೂಡ ಚಂದನ್ ಹಾಗೂ ಕವಿತಾ ನಾವಿಬ್ಬರೂ ಸ್ನೇಹಿತರು ಎಂದೆಲ್ಲಾ ಹೇಳಿದ್ದರು.
ಈಗ ಚಂದನ್ ಕುಮಾರ್ ಅವರು ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂಬ ಬರಹವಿರುವ ಕವಿತಾ ಗೌಡ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈಗ ಹರಿದಾಡುತ್ತಿರುವ ಫೋಟೋ ವದಂತಿಗೆ ಪುಷ್ಟಿ ನೀಡಿದೆ. ಕಿರುತೆರೆಯಲ್ಲಿ ಆದರ್ಶ ದಂಪತಿಗಳಾಗಿ ಬಣ್ಣ ಹಚ್ಚಿದ್ದ ಈ ಜೋಡಿ ನಿಜ ಜೀವನದಲ್ಲೂ ಒಂದಾಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ.