ಬಿಗ್‌ಬಾಸ್ ಸೀಸನ್ 11 | ಸಿಂಪತಿಯಿಂದ ಗೆದ್ರಾ ಹನುಮಂತು..? ಇಲ್ಲಿದೆ ಸತ್ಯಾಂಶ

Bigg Boss Season 11 winner Hanumanth Lamani : ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಬಗ್ಗೆ ಹಲವರು ಸಿ೦ಪತಿಯಿ೦ದ ಗೆದ್ದರು ಎ೦ದು ಹೇಳಿದ್ದು ಇದೆ. ಆದರೆ, ವೈಲ್ಡ್ ಕಾರ್ಡ್…

Bigg Boss Kannada Season 11 winner Hanumantha Lamani

Bigg Boss Season 11 winner Hanumanth Lamani : ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಬಗ್ಗೆ ಹಲವರು ಸಿ೦ಪತಿಯಿ೦ದ ಗೆದ್ದರು ಎ೦ದು ಹೇಳಿದ್ದು ಇದೆ. ಆದರೆ, ವೈಲ್ಡ್ ಕಾರ್ಡ್ ಎ೦ಟ್ರಿಯಿ೦ದ ಮನೆಯಲ್ಲಿ ತಲ್ಲಣ ಸೃಷ್ಟಿಸಿದ್ದ ಹನುಮಂತ (Hanumanth Lamani), ಬಿಗ್ ಬಾಸ್‌ನಲ್ಲಿ ತಮ್ಮ ಚಾಣಾಕ್ಷತೆಯಿ೦ದ ಆಟವಾಡಿ ಗೆದ್ದಿದ್ದಂತು ಸತ್ಯ ಅನ್ನೋ ಮಾತು ಇದೆ.

ವೈಲ್ಡ್ ಕಾರ್ಡ್

ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಕೆಲವೇ ವಾರಗಳಲ್ಲಿ ಹೊರ ಬಿದ್ದವರು ಇದ್ದಾರೆ. ಆದರೆ, ಹನುಮಂತ ಆ ಚಾಲೆಂಜ್‌ನ ಯಶಸ್ವಿಯಾಗಿ ನಿರ್ವಹಿಸಿದರು. ತಮ್ಮ ಸರಳತೆ, ಹಾಡು, ದೋಸ್ತ ಧನರಾಜ್ ಅವರೊಂದಿಗಿನ ಒಡನಾಡದಿಂದ ದೊಡ್ಕನೆಯಲ್ಲಿ ನಗುವಿನ ಅಲೆ ಎಬ್ಬಿಸಿದರು.

Vijayaprabha Mobile App free

ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಗೆದ್ದು ಬೀಗಿದ ಹಳ್ಳಿ ಹೈದ ಹನುಮಂತನಿಗೆ ಸಿಗುವ ಹಣ ಎಷ್ಟು ಗೊತ್ತಾ..?

ಆಟದಲ್ಲಿ ಮುನ್ನುಗುವಿಕೆ

ಟಾಸ್ಕ್ ವಿಚಾರದಲ್ಲಿ ಹನುಮಂತ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ರಜತ್, ಮಂಜು, ತ್ರಿವಿಕ್ರಮ್‌ನಂತ ಘಟಾನು ಘಟಿಗಳನ್ನು ಹನುಮಂತ ಅವರು ಸೋಲಿಸಿದ್ದಾರೆ. ಫಿನಾಲೆ ಟಿಕೆಟ್ ಸ೦ದರ್ಭದಲ್ಲಿ ತ್ರಿವಿಕ್ರಮ್‌ರನ್ನು ಸೋಲಿಸಿ ಭೇಷ್ ಎನಿಸಿಕೊಂಡರು. ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಆದಾಗೆಲ್ಲ ಅವರ ತಂಡಕ್ಕೆ ಜಯ ಸಿಕ್ಕಿದೆ. ಕೆಲವು ಕಡೆಗಳಲ್ಲಿ ಕ್ಲೀನ್ ಸ್ವೀಪ್ ಕೂಡ

ಸ್ಪಷ್ಟ ನಿರ್ಧಾರ

ಹನುಮಂತ ಅವರು ಎಂದಿಗೂ ಫೇವರಿಸಂ ಮಾಡಿದವರೇ ಅಲ್ಲ. ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಫಿನಾಲೆ ಟಿಕೆಟ್ ಕೊಡಬೇಕು ಎಂದಾಗ ಅವರು ಆಪ್ತ ಎನಿಸಿಕೊಂಡಿದ್ದ, ಧನರಾಜ್ ಬದಲು ಮೋಕ್ಷಿತಾ ಆಟ ನೋಡಿ ಅವರಿಗೆ ನೀಡಿದರು. ಇದು ಕೂಡ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲು

ತಲೆ ಕೆಡಿಸಿಕೊಳ್ಳದ ಹನುಮಂತ

ಹನುಮ೦ತ ಅವರು ಸಾಕಷ್ಟು ಪ್ಲಾನ್ ಮಾಡುತ್ತಾರೆ, ಆಡುವ ಪ್ರತಿ ಆಟದಲ್ಲಿ ತಂತ್ರ ಮಾಡುತ್ತಾರೆ ಎ೦ದು ಕೆಲವರು ಆರೋಪಿಸಿದ್ದು ಇದೆ. ಅದೇ ರೀತಿಯ ತಂತ್ರವನ್ನು ಹನುಮಂತ ಕೂಡ ಹೆಣೆದಿರಬಹುದು. ನಾಮಿನೇಟ್ ಮಾಡಿ ಎಲ್ಲರೂ ಕೂಗಾಡಿದರೆ ಹನುಮಂತ ಮಾತ್ರ ತಲೆ ಕೆಡಿಸಿಕೊಳ್ಳದೆ, ಟೆನ್ನನ್ ಮಾಡಿಕೊಳ್ಳದೆ ಆಡಿದ್ದರು.

ಸಿಂಪತಿಯಿಂದ ಗೆಲುವು?

ಬಡತನ ಹಿನ್ನೆಲೆಯಿ೦ದ ಬ೦ದ ಹನುಮ೦ತ ಅವರು ಹೆಚ್ಚು ಓದಿದವರೂ ಅಲ್ಲ. ಹೀಗಾಗಿ ಸಿ೦ಪತಿಯಿ೦ದಲೂ ಕೆಲವು ವೋಟ್ ಸಿಕ್ಕರಬಹುದು. ಆದರೆ, 5 ಕೋಟಿ ವೋಟ್‌ಗಳು ಕೇವಲ ಸಿಂಪತಿಯಿಂದ ಮಾತ್ರ ಸಿಕ್ಕಿತು ಎಂದು ಹೇಳಲು ಸಾಧ್ಯವೇ ಇಲ್ಲ. ಅದರ ಹಿಂದೆ ಅವರು ಹಾಕಿದ ಶ್ರಮವೂ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.