Bigg Boss Kannada Season 11 winner Hanumantha : ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಅದ್ದೂರಿಯಾಗಿ ಮುಕ್ತಾಯವಾಗಿದೆ. ಫೈನಲ್ ರೌಂಡ್‌ನಲ್ಲಿ ಆರು ಮಂದಿ ಇದ್ದರು. ಈ ಪೈಕಿ ಮೊದಲು ಭವ್ಯಾ, ಮಂಜು, ನಂತರ ಮೋಕ್ಷಿತಾ ಔಟ್ ಆದರು. ನಂತರ ಟಾಪ್ ಮೂವರ ಪೈಕಿ ರಜತ್ ಅವರು ದೊಡ್ಮನೆಯಿಂದ ಔಟ್ ಆದರು.
ಕೊನೆಯ ಸುತ್ತಿನಲ್ಲಿ ಉಳಿದುಕೊಂಡಿದ್ದ ಹನುಮಂತು ಹಾಗೂ ತ್ರಿವಿಕ್ರಮ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಸುದೀಪ್ ಹನುಮಂತು ಈ ಬಾರಿಯ ವಿನ್ನರ್ ಎಂದು ಘೋಷಿಸಿದರು. ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಸ್ಪರ್ಧಿ ಗೆದ್ದಿದ್ದು ಇದೇ ಮೊದಲು.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆದ ಕುರಿಗಾಹಿ ಹನುಮಂತು
ಬಿಗ್ ಬಾಸ್ ಗೆದ್ದ ಹನುಮಂತನಿಗೆ ಅಸಲಿಗೆ ಸಿಗುವ ಹಣ ಎಷ್ಟು ಗೊತ್ತಾ..?
ಕನ್ನಡ ಬಿಗ್ ಬಾಸ್ ಸೀಸನ್ ಅನ್ನು ಹನುಮಂತ ಗೆದ್ದಿದ್ದಾರೆ. ಬಹುಮಾನ ಮೊತ್ತವಾಗಿ 50 ಲಕ್ಷ ರೂಪಾಯಿಯನ್ನು ಹಳ್ಳಿ ಹೈದನಿಗೆ ನೀಡಲಾಗಿದೆ. ಒಟ್ಟು ಈ ಹಣದಲ್ಲಿ ಕೈಗೆ ಸೇರುವ ಮೊತ್ತವೆಷ್ಟು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಮಾಹಿತಿಗಳ ಪ್ರಕಾರ ಲಾಟರಿ, ಟಿವಿ ಶೋ, ಆನ್‌ಲೈನ್ ಗೇಮ್‌ನಲ್ಲಿ ಗೆಲ್ಲಲಾಗುವ ಹಣಕ್ಕೆ ನಿಯಮದ ಪ್ರಕಾರ 30% ತೆರಿಗೆ ಪಾವತಿಸಬೇಕು. ಅದರಂತೆ 50 ಲಕ್ಷದಲ್ಲಿ ತೆರಿಗೆ ಕಟ್ ಆಗಿ 35 ಲಕ್ಷ ರೂ. ಕೈ ಸೇರುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ.
ಹಳ್ಳಿ ಹೈದ ಹನುಮಂತ ಬಿಗ್ ಬಾಸ್‌ನಲ್ಲಿ ಸಿಂಪತಿ ಗಿಟ್ಟಿಸಿಕೊಂಡ್ರಾ..?
ಕನ್ನಡದ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ ಹನುಮಂತು ಹೊರಹೊಮ್ಮಿದ್ದಾರೆ. ಸದ್ಯ 5 ಕೋಟಿಗೂ ಅಧಿಕ ವೋಟ್ ಪಡೆದು ಬಿಗ್ ಬಾಸ್ ಇತಿಹಾಸದಲ್ಲಿ ದಾಖಲೆ ಬರೆದ ಹೈದ ಕೆಲ ಅಪವಾದಕ್ಕೆ ಗುರಿಯಾಗಿದ್ದಾನೆ.
ʼʼಸಿಂಪತಿ ಕಾರ್ಡ್ʼʼನಿಂದ ಈ ಗೆಲುವು ದಕ್ಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಗಾಯನದಿಂದ ಗುರುತಿಸಿಕೊಂಡಿರುವ ಹನುಮಂತನ ಪ್ರತಿಭೆ ಹಾಗೂ ಸರಳತೆಗೆ ದಕ್ಕಿದ ಗೌರವ ಎಂದು ಕೆಲವರು ಕಾಮೆಂಟ್ ಮಾಡಿದರೆ, ಕೆಲವರು ಇದು ಸಿಂಪತಿ ಗಿಮಿಕ್ ಎಂದಿದ್ದಾರೆ. ಏನೇ ಆಗಲಿ 5 ಕೋಟಿ ವೋಟ್ ತಮಾಷೆಯ ಸಂಗತಿಯಲ್ಲ ಎಂದು ಕೆಲವರು ಹೇಳಿದ್ದಾರೆ.