Bigg Boss Kannada Season 11 : ಪ್ರೇಕ್ಷಕರು ಕಾಯುತ್ತಿದ್ದ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada Season 11) ಅದ್ಧೂರಿಯಾಗಿ ಚಾಲನೆ ಸಿಕ್ಕಾಗಿದ್ದು, 17 ಸ್ಪರ್ಧಿಗಳ ನಡುವೆ ಈಗಾಗಲೇ ಗೆಲುವಿಗಾಗಿ ಪೈಪೋಟಿ ಶುರುವಾಗಿದೆ.
ಹೀಗಿರುವಾಗ ಮೊದಲ ವಾರವೇ ಅರ್ಧಕರ್ಧ ಜನ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಇಡೀ ಮನೆ ಚೈತ್ರಾ ಕುಂದಾಪುರ ಆಟಕ್ಕೆ ಕತ್ತಿ ಮಸೆಯಲು ಶುರು ಮಾಡಿದ್ದಾರೆ. ಯಮುನಾ ಮಾತಿನ ವರಸೆಗೆ ಕಿಡಿಕಾರುತ್ತಿದ್ದಾರೆ. ಇವರಿಬ್ಬರಲ್ಲೇ ಒಬ್ಬರು ಹೊರ ಹೊಗಲಿದ್ದಾರೆ ಎನ್ನಲಾಗುತ್ತಿದೆ. ಯಾವುದಕ್ಕೂ ಕಿಚ್ಚನ ಪಂಚಾಯ್ತಿಗೆ ಕಾಯಬೇಕಿದೆ.
ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ ಶಾಲೆಗಳಿಗೆ ದಸರಾ ರಜೆ; ರಾಜ್ಯ ಹೈಕೋರ್ಟ್‌ಗೂ ದಸರಾ ರಜೆ!
Bigg Boss Kannada Season 11 : ಮೊದಲ ವಾರವೇ ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್ ಪಾಸ್?
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಅಖಾಡಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಅವರಿಗೆ ನರಕದರ್ಶನವಾಗಿದೆ. ಇಷ್ಟು ಮಾತ್ರವಲ್ಲದೆ ಮೊದಲ ವಾರದಲ್ಲೇ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ.
ಹೌದು, ಬಿಗ್ ಬಾಸ್ ಮನೆಯ ಸ್ವರ್ಗ ನಿವಾಸಿಗಳು ವಿವಿಧ ಕಾರಣಗಳನ್ನು ನೀಡಿ ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾಗೆ ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಗೇಟ್‌ಪಾಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಚೈತ್ರಾ ಕುಂದಾಪುರ ಅಭಿಮಾನಿಗಳಿಗೆ ಈ ವಿಚಾರ ಶಾಕ್ ನೀಡಿದೆ.
ಇದನ್ನೂ ಓದಿ: ನಿಮ್ಮ ರಕ್ತದ ಗುಂಪು ಯಾವುದು ? ರಕ್ತದ ಗುಂಪು ಮತ್ತು ಹೃದಯ ಕಾಯಿಲೆ
Bigg Boss Kannada Season 11 : ಹೊರ ಬರಲು ಸಿದ್ಧರಾದ ಲಾಯರ್ ಜಗದೀಶ್!?
ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ‘ನಾನೇ ಬಿಗ್ ಬಾಸ್’ ಎನ್ನುವ ಮೂಲಕ ಅವರು ಸಿಡಿದೆದ್ದಿದ್ದಾರೆ. ‘ಎಲ್ಲರೂ ಮುಖವಾಡ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ನನ್ನ ಘನತೆ, ಗೌರವ ಹೊರಗಡೆ ಚೆನ್ನಾಗಿಯೇ ಇದೆ. ನಾನೇ ಬಿಗ್ ಬಾಸ್. ನಾನು ಹೊರಗೆ ಇರುವುದೇ ಉತ್ತಮ’ ಎಂದು ಜಗದೀಶ್ ಹೇಳಿದ್ದಾರೆ. ಈ ಮಾತಿನಿಂದ ಜಗದೀಶ್ ಮನೆಯಿಂದ ಹೊರಬರಬಹುದೇ ಎನ್ನುವ ಪ್ರಶ್ನೆ ಶುರುವಾಗಿದೆ. ಇದಕ್ಕೆ ಸುದೀಪ್ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.




