‘ಬಿಗ್ ಬಾಸ್ ಕನ್ನಡ ಸೀಸನ್ 11’ (bigg boss kannada season 11) ರಿಯಾಲಿಟಿ ಶೋಗೆ ರೋಚಕ ಚಾಲನೆ ಸಿಕ್ಕಿತು. ಈ ಬಾರಿ ವಿವಾದಿತ ವ್ಯಕ್ತಿಗಳೇ ಮುಂಚೂಣಿಯಲ್ಲಿ ಇರುವುದರಿಂದ ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ‘ಇದು ಹೊಸ ಅಧ್ಯಾಯ’ ಎಂದು ಹೇಳಿದ್ದು, ಸ್ವರ್ಗ, ನರಕಗಳ ವೇದಿಕೆ ಸೃಷ್ಟಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಎಡಪಂಥದ ಚಿಂತನೆಯ ವಕೀಲರಾದ ಜಗದೀಶ್, ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಕೆಲದಿನಗಳ ವರೆಗೆ ಬಂಧನವಾಗಿ ಬಿಡುಗಡೆಯಾಗಿರುವ ಬಲಪಂಥದ ಚಿಂತನೆಯ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಗೆ (Bigg boss kannada season 11) ಎಂಟ್ರಿಕೊಟ್ಟಿರುವುದು ಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿದೆ.

Read This: PF balance: ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಇದರಿಂದ ಹಲವು ರೋಚಕ ದೃಶ್ಯಗಳಿಗೆ ಈ ಬಾರಿ ಬಿಗ್‌ಬಾಸ್ ಸಾಕ್ಷಿಯಾಗಲಿದೆ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. ಈ ಬಾರಿ ವಾದ, ವಿವಾದಗಳು ಜೋರಾಗಿ ನಡೆಯಲಿವೆ ಎಂಬ ಸೂಚನೆ ಕೂಡ. ಈ ಹಿಂದಿನ ‘ಬಿಗ್ ಬಾಸ್ ಕನ್ನಡ ಸೀಸನ್ 10 ಕೂಡ ಇಂತಹ ವಾದ, ವಿವಾದಗಳಿಗೆ ಸಾಕ್ಷಿಯಾಗಿತ್ತು. ಪ್ರೇಕ್ಷಕ ವಲಯದಲ್ಲಿ ಕೂಡ ಚರ್ಚೆಗಳು ಜೋರಾಗಿದ್ದವು. ʼ
ಗಮನ ಸೆಳೆದ ಕಿಚ್ಚ ಸುದೀಪ್ (Bigg boss Kannada Season 11)
ಬಿಗ್‌ಬಾಸ್ ಹೆಚ್ಚು ಪ್ರಚಾರವಾಗಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯ ಕಾರಣ. ಅವರ ನಿರೂಪಣೆ ಶೈಲಿ, ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆದಿದ್ದಾರೆ. ಈ ಕಾರಣಕ್ಕೆ ಬಿಗ್‌ಬಾಸ್ ಕಾರ್ಯಕ್ರಮ ನೋಡಲು ಹೆಚ್ಚು ದಿನ ಇಷ್ಟಪಡುತ್ತಾರೆ. ಪ್ರಥಮ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸಖತ್ ಸ್ಪೈಲಿಶ್ ಆಗಿ ಕಾಣಿಸಿಕೊಂಡಿದ್ದು, ಲುಕ್ ಹಾಗೂ ಹೊಸ ಮನೆಯ ವಿನ್ಯಾಸ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ.
ಇನ್ನು ಈ ಬಾರಿ ದೊಡ್ಡಮನೆ (ಬಿಗ್‌ಬಾಸ್-bigg boss kannada season 11) ಎರಡು ಭಾಗ ಆಗಿದೆ. ಒಂದು ಭಾಗದಲ್ಲಿ ಸ್ವರ್ಗ, ಇನ್ನೊಂದು ಭಾಗದಲ್ಲಿ ನರಕ ಎಂದು ಭಾಗ ಮಾಡಲಾಗಿದೆ. ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಯಾವ ಸ್ಪರ್ಧಿ ನರಕಕ್ಕೆ ಹೋಗುತ್ತಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.



