PF balance: ಇಪಿಎಫ್ ಖಾತೆ (EPF account) ಹೊಂದಿರುವ ಚಂದಾದಾರರು ಎರಡು ವಿದಾನಗಳಲ್ಲಿ ತಮ್ಮ ಪಿಎಫ್ ಬ್ಯಾಲೆನ್ಸ್ (PF Balance) ಅನ್ನು ತಿಳಿದುಕೊಳ್ಳಬಹುದು
ಮೊದಲನೆಯದಾಗಿ ನಿಮ್ಮ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ಕಂಡುಹಿಡಿಯಲು www.epfindia.gov.in ವೆಬ್ಸೈಟ್ ನಲ್ಲಿ ನಮ್ಮ ಸೇವೆಗಳ ಸದಸ್ಯ ಪಾಸ್ ಬುಕ್ ವಿಭಾಗಕ್ಕೆ ಹೋಗಬೇಕು. ನಂತರ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡ್ ನಮೂದಿಸಲು ಅದನ್ನು ಮತ್ತೊಂದು ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ. ಅಲ್ಲಿ ವಿವರಗಳನ್ನು ನಮೂದಿಸಬಹುದು ಮತ್ತು ನಿಮ್ಮ ಖಾತೆ ವಿವರಗಳನ್ನು ಕಂಡುಹಿಡಿಯಬಹುದು.
ಎರಡನೆಯದಾಗಿ ನಿಮ್ಮ ನೋಂದಾಯಿತ ಮೊಬೈಲ್ ನಿಂದ 011-22901406 ಗೆ ಮಿಸ್ಡ್ ಕಾಲ್ ನೀಡಿದರೆ ಮಾಹಿತಿ ಪಡೆಯಬಹುದು. UAN ಸಕ್ರಿಯಗೊಂಡ ಸದಸ್ಯರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಗೆ SMS ಕಳುಹಿಸುವ ಮೂಲಕ EPFO ನೊಂದಿಗೆ ಲಭ್ಯವಿರುವ ತಮ್ಮ ಇತ್ತೀಚಿನ PF ಕೊಡುಗೆ ಮತ್ತು ಬಾಕಿಯನ್ನು ತಿಳಿದುಕೊಳ್ಳಬಹುದು. EPFOHO UAN ಗೆ 7738299899
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment