Actress Nayanthara : ನಟ ಧನುಷ್ ವೈಯುಕ್ತಿಕ ದ್ವೇಷದಿಂದ ತಮ್ಮ ಮದುವೆ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ನಟಿ ನಯನತಾರಾ ಆರೋಪಿಸಿದ್ದಾರೆ.
ನಟ ಧನುಷ್ ತನಗೆ ₹10 ಕೋಟಿಗಳ ಲೀಗಲ್ ನೋಟಿಸ್ ಕಳುಹಿಸಿದ್ದಕ್ಕೆ ನಟಿ ನಯನತಾರಾ ಸಿಟ್ಟಾಗಿದ್ದು, 3 ಸೆಕೆಂಡ್ ವಿಡಿಯೋಗೆ ₹10 ಕೋಟಿ ಕೊಡಬೇಕಾ?ʼ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : Anchor Anushree Property :ಕನ್ನಡ ಕಿರುತೆರೆಯ ಶ್ರೀಮಂತ ಅನುಶ್ರೀಯ ಆಸ್ತಿ ಎಷ್ಟು ಗೊತ್ತಾ?
ಹೌದು, ಈ ಕುರಿತು ಪ್ರತಿಕ್ರಿಯಿಸಿರುವ ನಟಿ ನಯನತಾರಾ, ʻನೀನು ನಿನ್ನ ತಂದೆ ಮತ್ತು ಅಣ್ಣನ ಸಹಾಯದಿಂದ ಹೀರೋ ಆದೆ. ನಾನು ಕಷ್ಟಪಟ್ಟು ಮೇಲೆ ಬಂದೆ. ನೆಟ್‌ಫ್ಲಿಕ್ಸ್ ನನ್ನ ಜೀವನದ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದೆ. ಅದರಲ್ಲಿ, ನೀವು ನಿರ್ಮಿಸಿದ ʻನಾನುಮ್ ರೌಡಿ ಡಾನ್ʼ ಕ್ಲಿಪ್ ಬಳಸಲು NOC ಕೇಳಿದರೆ, 2 ವರ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದೀರಿ. 3 ಸೆಕೆಂಡ್ ವಿಡಿಯೋಗೆ ₹10 ಕೋಟಿ ಕೊಡಬೇಕಾ?ʼ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಕೀಳುಮಟ್ಟದ ಕೃತ್ಯವು ನೀವು ಎಂತಹ ವ್ಯಕ್ತಿ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.
ಇದನ್ನೂ ಓದಿ : Newspaper distributors | ಓದುಗರ ಮನೆ ಬಾಗಿಲಿಗೆ ಪತ್ರಿಕೆ ತರುವ ಸೇನಾನಿಗಳ ಮಹತ್ವವೇನು ಗೊತ್ತಾ..?