ಅಲ್ಲಿ ನಡೆಯುವುದೆಲ್ಲಾ ಅದೇ!; ಚಿತ್ರರಂಗದ ಬಗ್ಗೆ ನಟಿ ಇಲಿಯಾನಾ ಸಂಚಲನ ಹೇಳಿಕೆ

ಅಲ್ಲಿ ನಡೆಯುವುದೆಲ್ಲಾ ಅದೇ ಎಂದು ಚಿತ್ರರಂಗದ ಬಗ್ಗೆ ನಟಿ ಇಲಿಯಾನಾ ಸಂಚಲನ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಗ್ರ ಶ್ರೇಯಾಂಕಿತ ನಾಯಕಿಯಾಗಿ ಗುರುತಿಸಿಕೊಂಡಿದ್ದ ಖ್ಯಾತ…

ಅಲ್ಲಿ ನಡೆಯುವುದೆಲ್ಲಾ ಅದೇ ಎಂದು ಚಿತ್ರರಂಗದ ಬಗ್ಗೆ ನಟಿ ಇಲಿಯಾನಾ ಸಂಚಲನ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಗ್ರ ಶ್ರೇಯಾಂಕಿತ ನಾಯಕಿಯಾಗಿ ಗುರುತಿಸಿಕೊಂಡಿದ್ದ ಖ್ಯಾತ ನಟಿ ಇಲಿಯಾನಾ ಬಾಲಿವುಡ್ ಕಡೆ ಮುಖ ಮಾಡಿದರು.

iliana-vijayaprabha

Vijayaprabha Mobile App free

ಆದರೆ ಅಲ್ಲಿ ಹೇಳಿಕೊಳ್ಳುವಂತ ಸಕ್ಸಸ್ ನಟಿ ಇಲಿಯಾನಾಗೆ ಸಿಗಲಿಲ್ಲ. ಅನಂತರ ಮತ್ತೆ ದಕ್ಷಿಣದ ಕಡೆ ಮುಖ ಮಾಡಿದ ಇಲಿಯಾನ ತೆಲುಗಿನ ರವಿತೇಜ ಜೊತೆ ಎರಡು ಸಿನಿಮಾ ಮಾಡಿದರು ಹೇಳಿಕೊಳ್ಳುವಂತ ಸಕ್ಸಸ್ ಸಿಗಲಿಲ್ಲ. ಇನ್ನು ಪ್ರಿಯಕರನೊಂದಿಗೆ ಬ್ರೇಕಪ್ ಮತ್ತು ಸಿನಿಮಾದಿಂದ ಸ್ವಲ್ಪ ದೂರ ಸರಿದಿದ್ದು ಕೂಡ ಇಲಿಯಾನಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದವು.

ಆದರೆ, ಇತ್ತೀಚೆಗೆ ಚಲನಚಿತ್ರೋದ್ಯಮದ ಬಗ್ಗೆ ಸಂಚಲನ ಕಾಮೆಂಟ್ಗಳನ್ನು ಮಾಡಿ ಇಲಿಯಾನ ಮತ್ತೆ ಸುದ್ದಿಯಲ್ಲಿದ್ದಾರೆ. ಉದ್ಯಮವು ತುಂಬಾ ಕೆಟ್ಟದಾಗಿದೆ .. ಇಲ್ಲಿ ಎಷ್ಟೇ ಪ್ರತಿಭೆ ಇದ್ದರು ಕೆಲಸಕ್ಕೆ ಬರುವುದಿಲ್ಲ . ಜನರು ನಮ್ಮನ್ನು ನೋಡುವವರೆಗೂ, ಅವಕಾಶಗಳು ಬರುತ್ತಿರುತ್ತವೆ. ಅವರು ನಮ್ಮ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿದರೆ ನಮ್ಮ ಕೆಲಸ ಮುಗಿದ ಹಾಗೆ ಎಂದು ಹೇಳಿದ್ದು, ನಮ್ಮ ಜೀವನದಲ್ಲಿ ಎಲ್ಲವೂ ನಾವು ಬಯಸಿದಂತೆ ನಡೆಯುವುದಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವುದು ಕಷ್ಟದ ಕೆಲಸ. ಆದರೆ, ನನ್ನ ವಿಷಯಕ್ಕೆ ಬಂದಾಗ, ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ಜೀವನಕ್ಕೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ ಎಂದು ಇಲಿಯಾನಾ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.