Vijay Raghavendra : ಸ್ಯಾಂಡಲ್ ವುಡ್ ಚಿನ್ನಾರಿ ಮುತ್ತು ನಟ ವಿಜಯ್ ರಾಘವೇಂದ್ರ ಅವರು ತಮ್ಮ ದಿವಂಗತ ಪತ್ನಿ ಸ್ಪಂದನಾ ಅವರ ಬಗ್ಗೆ ಪಾಡ್ಕಾಸ್ಟ್ ಒಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
ಹೌದು, ಬಗ್ಗೆ ಮಾತನಾಡಿರುವ ನಟ ವಿಜಯ್ ರಾಘವೇಂದ್ರ ಎರಡು ವರ್ಷಗಳ ಹಿಂದೆ ನಿಧನರಾದ ಸ್ಪಂದನಾ, ತಮ್ಮ ಕನಸಿನಲ್ಲಿ ನಗುತ್ತಲೇ ಬರುತ್ತಾಳೆ ಎಂದು ಅವರು ಹೇಳಿದ್ದಾರೆ. ಸ್ಪಂದನಾ ತನ್ನನ್ನು ಜೀವನದ ವಾಸ್ತವಕ್ಕೆ ಸಿದ್ಧಪಡಿಸಿ, ನಂತರ ಹೊರಟು ಹೋದಳು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಏನೇ ಬಂದರೂ ಅದನ್ನು ಸ್ವೀಕರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇನ್ನು, ಇದರ ನಡುವೆ ವಿಜಯ ರಾಘವೇಂದ್ರ ಮತ್ತು ಮೇಘನಾ ರಾಜ್ ಅವರ 2ನೇ ಮದುವೆ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಲೇ ಇದ್ದು, ಈ ಬಗ್ಗೆ ಇಬ್ಬರೂ ಸ್ಪಷ್ಟನೆ ಕೊಟ್ಟಿದ್ದು ಸಹ ಆಗಿದೆ.




