“ದಿ ಕಾಶ್ಮೀರಿ ಫೈಲ್ಸ್” ಸಿನಿಮಾ ವೀಕ್ಷಿಸಲು ರಾಜ್ಯ ಸರ್ಕಾರಿ ನೌಕರರು ಅರ್ಧ ದಿನದ ರಜೆ ಪಡೆಯಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.
ಹೌದು, “ನಮ್ಮ ಸರ್ಕಾರಿ ನೌಕರರು #TheKashmirFiles ವೀಕ್ಷಿಸಲು ಅರ್ಧ ದಿನದ ವಿಶೇಷ ರಜೆಗೆ ಅರ್ಹರಾಗಿರುತ್ತಾರೆ ಎಂದು ಘೋಷಿಸಲು ಸಂತೋಷ ಪಡುತ್ತೇನೆ. ಸಿನಿಮಾಗೆ ಹೋಗುವಾಗ ನೌಕರರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕು ಮತ್ತು ಮರುದಿನ ಟಿಕೆಟ್ ಸಲ್ಲಿಸಬೇಕು” ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇದಕ್ಕೂ ಮೊದಲು, ಸಿಎಂ ಹಿಮಂತ ಬಿಸ್ವಾ ಶರ್ಮಾ ತಮ್ಮ ಇಡೀ ಸಚಿವ ಸಂಪುಟದೊಂದಿಗೆ ಗುವಾಹಟಿಯ ಚಿತ್ರ ಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದು, ಕಾಶ್ಮೀರಿ ಪಂಡಿತರ ನರಮೇಧವು ಮಾನವೀಯತೆಯ ಮೇಲಿನ ಕಳಂಕವಾಗಿದೆ ಎಂದು ಹೇಳಿದ್ದಾರೆ.




