Mimi Chakraborty: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ-ಕೊಲೆ ಪ್ರಕರಣ (Rape-murder case) ಸಂಬಂಧ ವೈಯಕ್ತಿಕವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ನಟಿ ಹಾಗೂ ಮಾಜಿ ಸಂಸದೆ ಮಿಮಿ ಚಕ್ರವರ್ತಿಗೆ (Mimi Chakraborty) ಅತ್ಯಾಚಾರ ಬೆದರಿಕೆ & ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ವರದಿಯಾಗಿದೆ.
ಹೌದು, ಕೋಲ್ಕತ್ತಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲಾದ ಆತ್ಯಾಚಾರ ಮತ್ತು ಕೊಲೆಯನ್ನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ತಮಗೆ ಅತ್ಯಾಚಾರ ಬೆದರಿಕೆ & ಅಶ್ಲೀಲ ಸಂದೇಶಗಳು ಬಂದಿವೆ ಎಂದು ಟಿಎಂಸಿ ಮಾಜಿ ಸಂಸದೆ, ನಟಿ ಮಿಮಿ ಚಕ್ರವರ್ತಿ ಹೇಳಿದ್ದಾರೆ.
ಈ ಬಗ್ಗೆ ನಟಿ ಮಿಮಿ ಚಕ್ರವರ್ತಿ ಅವರು, ಕೋಲ್ಕತಾ ಪೊಲೀಸರ ಸೈಬರ್ ಸೆಲ್ ವಿಭಾಗಕ್ಕೆ ಮಾಹಿತಿ ಕೊಟ್ಟಿದ್ದಾರೆ. ಬೆದರಿಕೆಯ ಸ್ಕ್ರೀನ್ ಶಾಟ್‌ಗಳನ್ನ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮಿಮಿ, ಮಹಿಳೆಯರ ಪರವಾಗಿ ನಿಲ್ಲುತ್ತೇವೆಂದು ಹೇಳಿ ಮರೆಯಾಗಿ ನಿಂತು ವಿಷಕಾರುವ ಜನರು ಅತ್ಯಾಚಾರದ ಬೆದರಿಕೆಗಳನ್ನ ಹಾಕುತ್ತಾರೆ’ ಎಂದಿದ್ದಾರೆ.
https://vijayaprabha.com/da-hra-allowances-order-published/