ಪ್ರಾಪರ್ಟೀಸ್ ಅಂಡ್ ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಿಂದ ಸಾರ್ವಜನಿಕರಿಗೆ ವಂಚನೆ: ದೂರು ದಾಖಲು

ದಾವಣಗೆರೆ ಮಾ.30: ಸಾರ್ವಜನಿಕರು ಪರಿಣಿತ ಪ್ರಾಪರ್ಟೀಸ್ & ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಲ್ಲಿ ನಿವೇಶನ ಅಥವಾ ಹೆಚ್ಚಿನ ಬಡ್ಡಿ ಹಣ ಕೊಡುತ್ತೇವೆಂದು ಹೇಳಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು…

ದಾವಣಗೆರೆ ಮಾ.30: ಸಾರ್ವಜನಿಕರು ಪರಿಣಿತ ಪ್ರಾಪರ್ಟೀಸ್ & ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಲ್ಲಿ ನಿವೇಶನ ಅಥವಾ ಹೆಚ್ಚಿನ ಬಡ್ಡಿ ಹಣ ಕೊಡುತ್ತೇವೆಂದು ಹೇಳಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ನಿರೀಕ್ಷಕ ಬಿ.ವಿ.ಗಿರೀಶ್ ತಿಳಿಸಿದ್ದಾರೆ.

ಪರಿಣಿತ ಪ್ರಾಪರ್ಟೀಸ್ & ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯವರು ನಿವೇಶನ ಅಥವಾ ಹೆಚ್ಚಿನ ಬಡ್ಡಿ ಹಣ ಕೊಡುತ್ತೇವೆಂದು ಹೇಳಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಾಪಾಸ್ ನೀಡದೇ ಮೋಸ ಮಾಡಿರುತ್ತಾರೆಂದು 2020 ರ ಜೂನ್ 06 ರಂದು ಕೆ.ಎಂ ಮುರುಗೇಂದ್ರಯ್ಯ ಠಾಣೆಗೆ ದೂರು ಕೊಟ್ಟಿರುತ್ತಾರೆ. ಈ ಕಂಪನಿಯ ಮಾಲೀಕರ ವಿರುದ್ದ ದಾವಣಗೆರೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಆದೇಶದನ್ವಯ ಈ ಪ್ರಕರಣವು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಯು ಸಾರ್ವಜನಿಕರಿಂದ ಹಣವನ್ನು ಪಡೆದು ಪರಿಣಿತ ಪ್ರಾಪರ್ಟೀಸ್ & ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಲ್ಲಿ ಹೂಡಿಕೆ ಮಾಡಿ, ನಂತರ ನಿವೇಶನವಾಗಲೀ ಅಥವಾ ಹಣವಾಗಲೀ ವಾಪಾಸ್ ನೀಡದೇ ಮೋಸ ಮಾಡಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವವರು ಯಾರಾದರೂ ಇದ್ದರೆ ಅಂತಹ ಹೂಡಿಕೆದಾರರು ಕೂಡಲೇ ಸೂಕ್ತ ದಾಖಲೆಗಳೊಂದಿಗೆ ದಾವಣಗೆರೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯವರನ್ನು ಸಂಪರ್ಕಿಸಿ ದೂರು ಸಲ್ಲಿಸುವಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ.ವಿ.ಗಿರೀಶ್ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.