ಮಕರಜ್ಯೋತಿ ಯಾತ್ರೆ ಆರಂಭ: ಡಿ.30ರ ಸಂಜೆ ಬಾಗಿಲು ಓಪನ್

ಕೇರಳ: ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು. ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್…

ಕೇರಳ: ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು.

ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಲಿದ್ದಾರೆ.

ಮಾಳಿಗಪ್ಪುರಂ ದೇವಾಲಯ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿ ಹಸ್ತಾಂತರ ಮಾಡಲಾಗುವುದು.

Vijayaprabha Mobile App free

18 ಮೆಟ್ಟಿಲ ಬಳಿಯ ಕುಂಡಕ್ಕೆ ಅಗ್ನಿ ಸ್ಪರ್ಶ ಮಾಡಿದ ನಂತರ ಭಕ್ತರಿಗೆ 18 ಮೆಟ್ಟಿಲು ಏರಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುಮತಿ ನೀಡಲಾಗುವುದು. ಡಿಸೆಂಬರ್ 30ರಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಡಿಸೆಂಬರ್ 31 ರಂದು ಮುಂಜಾನೆ 3 ಗಂಟೆಯಿಂದ ಮಕರ ಜ್ಯೋತಿ ಪೂಜೆ ಆರಂಭವಾಗುತ್ತದೆ.

2025ರ ಜನವರಿ 12ರಂದು ಪಂದಳ ಅರಮನೆಯಿಂದ ತಿರುವಾಭರಣ ಘೋಷಯಾತ್ರೆ ಹೊರಡಲಿದೆ. ಡಿಸೆಂಬರ್ ಜ. 13ರಂದು ಪಂಪಾದಲ್ಲಿ ದೀಪೋತ್ಸವ, ಜನವರಿ 14ರಂದು ಸಂಜೆ 5 ಗಂಟೆಗೆ ತಿರುವಾಭರಣ ಘೋಷ ಯಾತ್ರೆ, ಶರಂಗುತ್ತಿಗೆ ಆಗಮನ, ಮಕರ ಸಂಕ್ರಮಣ ಪೂಜೆ, ಸಂಜೆ 6.30ಕ್ಕೆ, ಅಯ್ಯಪ್ಪಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ, ಮಕರ ನಕ್ಷತ್ರ ಗೋಚರಿಸಿದ ನಂತರ, ಮಕರ ಜ್ಯೋತಿ ದರ್ಶನ ನಂತರ ಜನವರಿ 19ರಂದು ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.