Actor Darshan Pavithra Gowda bail : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ & ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಹೌದು, ಪ್ರಕರಣದ 8 ಆರೋಪಿಗಳಿಂದ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ದರ್ಶನ್, ಪವಿತ್ರ ಗೌಡ, ನಾಗರಾಜ್, ಜಗದೀಶ್, ವಿನಯ್, ಅನು ಕುಮಾರ್, ಲಕ್ಷ್ಮಣ್, ಪ್ರದೋಷ ಬೇಲ್ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಲಿದೆ.
ಇದನ್ನೂ ಓದಿ: Darshan Bail: ದರ್ಶನ್ ಬೇಲ್‌ಗೆ ಮುಗಿಯದ ಸಂಕಷ್ಟ: ವಿಚಾರಣೆ ಡಿ.3ಕ್ಕೆ ಮುಂದೂಡಿಕೆ
ಈಗಾಗಲೇ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದ್ದು,ಉಳಿದ ಆರೋಪಿಗಳ ಪರವಾಗಿ ಅವರ ವಕೀಲರು ಇಂದು ವಾದ ಮಂಡಿಸಲಿದ್ದಾರೆ. ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಸರ್ಜರಿಗೆ ಓಕೆ ಎಂದಿದ್ದಾರೆ ಎನ್ನಲಾಗಿದ್ದು, ಇಂದು ರೆಗ್ಯುಲರ್ ಬೇಲ್ ಸಿಕ್ಕರೆ ಮಾತ್ರ ದರ್ಶನ್ ಸೇಫ್, ಇಲ್ಲದಿದ್ದರೆ ಮತ್ತೆ ಜೈಲು ಪಾಲಾಗಬಹುದು.