ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿ ಶುಕ್ರವಾರ ಆದೇಶ ಹೊರಡಿಸಿದರು.
ವಿಚಾರಣೆ ಸಂದರ್ಭದಲ್ಲಿ ಈಗಾಗಲೇ ನಟ ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಅವರು ಗುರುವಾರ ಸುದೀರ್ಘವಾದ ವಾದ ಮಂಡನೆ ಮಾಡಿದ್ದರು.
ನ್ಯಾಯಾಧೀಶ ನ್ಯಾ.ವಿಶ್ವಜಿತ್ ಶೆಟ್ಟಿ ಅವರು ಗುರುವಾರ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದರು. ಇಂದು ವಿಚಾರಣೆ ನಡೆಸಿದ ಅವರು ಡಿಸೆಂಬರ್ 3ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಆದೇಶಿಸಿದರು.
ಆರೋಪಿ ನಾಗರಾಜು ಪರ ವಕೀಲರ ವಾದ ಮಂಡನೆ ಅಂತ್ಯವಾಯಿತು. ಹಾಗಾಗಿ ವಿಚಾರಣೆ ಡಿಸೆಂಬರ್ 3ಕ್ಕೆ ಹೈಕೋರ್ಟ್ ಮುಂದೂಡಿತು. ಪವಿತ್ರಾಗೌಡ ಸೇರಿದಂತೆ ಉಳಿದವರ ಪರ ವಾದ ಮಂಡನೆ ಬಾಕಿ ಇದ್ದು, ಡಿಸೆಂಬರ್ 3ರಂದು ಸರ್ಕಾರದ ಪರವಾಗಿ ಎಸ್.ಪಿ.ಪಿ ವಾದ ಮಂಡಿಸುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment