Uttarakanda movie : ಉತ್ತರಕಾಂಡ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಟ್ರೆಂಡ್ ಅನ್ನು ಹುಟ್ಟುಹಾಕುವ ಸಾಧ್ಯತೆಯಿದೆ ಎಂದು ಈ ಸಿನಿಮಾದಲ್ಲಿ ನಟಿಸುತ್ತಿರುವ ಸ್ಟಾರ್‌ಗಳ ಲುಕ್ ಭರವಸೆಯನ್ನು ನೀಡಿತ್ತು. ಆದರೆ ಅಷ್ಟರಲ್ಲೇ ಈ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿ ಹರಿದಾಡಿತ್ತು.
Uttarakanda movie ಶೂಟಿಂಗ್ ಸ್ಥಗಿತ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಕಾರ್ತಿಕ್ ಗೌಡ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಉತ್ತರಕಾಂಡ ಸಿನಿಮಾದ ಶೂಟಿಂಗ್ ಅನ್ನು ಮಾತ್ರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಸಿನಿಮಾ ಸ್ಥಗಿತಗೊಂಡಿಲ್ಲ ಎ೦ದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Actress Nayanthara | ನಟ ಧನುಷ್ ವಿರುದ್ಧ ನಯನತಾರಾ ಗಂಭೀರ ಆರೋಪ
Uttarakanda movie ಶೂಟಿಂಗ್ ಮತ್ತೆ ಆರಂಭ
ನಾನು ಈಗಾಗಲೇ ಹೇಳಿದಂತೆ ಈ ಸಿನಿಮಾದ ಶೂಟಿಂಗ್ ಹಲವು ಶೆಡ್ಯೂಲ್ ಗಳಲ್ಲಿ ನಡೆಯಬೇಕಿದ್ದು, ಒಮ್ಮೆ ಶಿವಣ್ಣ ಬಂದ ಕೂಡಲೇ ನಾವು ಮತ್ತೆ ಶೂಟಿಂಗ್ ಆರಂಭಿಸುತ್ತೇವೆ. ನಾವು ಈಗಾಗಲೇ ಶೇ.30 ರಷ್ಟು ಶೂಟಿಂಗ್ ಮುಗಿಸಿದ್ದೇವೆ ಎ೦ದು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಕಾರ್ತಿಕ್ ಗೌಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಶಿವಣ್ಣ ಆನಾರೋಗ್ಯ
ಶಿವಣ್ಣ ದಿಢೀರನೇ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಸಿನಿಮಾದ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಹಾಗೇ ಸಾಕಷ್ಟು ಕಲಾವಿದರು ಒಟ್ಟಿಗೆ ನಟಿಸಬೇಕಿದ್ದರಿಂದ ಅವರ ಡೇಟ್ಸ್ ಅನ್ನು ಮ್ಯಾಚ್ ಮಾಡಬೇಕಿದೆ. ಈ ಕಾರಣಕ್ಕೆ ಶೂಟಿಂಗ್ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Anchor Anushree Property :ಕನ್ನಡ ಕಿರುತೆರೆಯ ಶ್ರೀಮಂತ ಅನುಶ್ರೀಯ ಆಸ್ತಿ ಎಷ್ಟು ಗೊತ್ತಾ?
ಫಸ್ಟ್‌ಲುಕ್‌ಗೆ ಮೆಚ್ಚುಗೆ
ಶಿವಣ್ಣನ ಹುಟ್ಟುಹಬ್ಬಕ್ಕೆ ಉತ್ತರಕಾಂಡ ಸಿನಿಮಾದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿದ್ದು, ರಕ್ತ ಚರಿತ್ರೆ ಬರೆಯಲು ಹೊರಟಿದ್ದ ಶಿವಣ್ಣ ಮತ್ತೆ ಮಾಸ್ ಅವತಾರ ತಾಳಿದ್ದರು. ಶಿವಣ್ಣನ ಈ ಹೊಸ ಲುಕ್ ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು, ಎಲ್ಲರೂ ಕಾತುರದಿಂದ ಕಾಯುತ್ತಿದ್ದರು.