Debit Card: ಡೆಬಿಟ್ ಕಾರ್ಡ್ ಪ್ಲಾಸ್ಟಿಕ್ ಕರೆನ್ಸಿ ಅಥವಾ ಪಾವತಿ ಕಾರ್ಡ್ ಆಗಿದ್ದು ಅದನ್ನು ಖರೀದಿ ಮಾಡಲು ನಗದು ಬದಲಿಗೆ ಬಳಸಬಹುದು.
ಹೌದು, ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯಲು ಮತ್ತು ಇತರ ಆನ್‌ಲೈನ್ ಪಾವತಿಗಳನ್ನು ಮಾಡಲು ಇದನ್ನು ಬಳಸಲಾಗುವುದಲ್ಲದೆ, ಬ್ಯಾಂಕ್ ಕಾರ್ಡ್‌ಗಳು ಎಂದೂ ಕರೆಯಲ್ಪಡುವ ಇವುಗಳನ್ನು ಸರಕು ಅಥವಾ ಸೇವೆಗಳ ಖರೀದಿಗೆ ಬಳಸಬಹುದು. ಎಟಿಎಂ ಯಂತ್ರದಿಂದ ಹಣವನ್ನು ಪಡೆಯಲು, ನಿಮ್ಮ ಖಾತೆಯಲ್ಲಿ ಹಣ ಇದ್ದರೆ ಮಾತ್ರವೇ ಡೆಬಿಟ್ ಕಾರ್ಡ್ ಬಳಕೆ ಮಾಡಬಹುದು.
ಇದನ್ನೂ ಓದಿ: New ration card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ; ಇ-ಶ್ರಮ ಕಾರ್ಡ್ ಇದ್ದವರಿಗೂ ರೇಷನ್ ಕಾರ್ಡ್
ಎಟಿಎಂ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?
ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ನಿಮ್ಮ ಖಾತೆಯಲ್ಲಿ ಹಣ ಇದ್ದರೆ ಮಾತ್ರ ಇದನ್ನು ಬಳಸಬಹುದು. ಎಟಿಎಂ ಕಾರ್ಡ್‌ನಂತೆ, ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ನಿಮಗೆ ನಾಲ್ಕು-ಅಂಕಿಯ ಗುರುತಿನ ಸಂಖ್ಯೆ ಬೇಕಾಗುತ್ತದೆ.
ಎಟಿಎಂ ಯಂತ್ರಗಳ ಹೊರತಾಗಿ, ಡೆಬಿಟ್ ಕಾರ್ಡ್‌ಗಳನ್ನು ಅಂಗಡಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಬಳಸಬಹುದು ಮತ್ತು ಆನ್‌ಲೈನ್ ಪಾವತಿಗಳಿಗೆ ಸಹ ಬಳಸಬಹುದಾಗಿದ್ದು, ಎಟಿಎಂ ಕಾರ್ಡ್‌ನಂತೆ ಡೆಬಿಟ್ ಕಾರ್ಡ್ ನಿಮ್ಮ ಉಳಿತಾಯ ಖಾತೆಯಿಂದ ಹಣವನ್ನು ಬಳಸಲು ಅನುಮತಿಸುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸುಲಭ ಸಾಲ ಭಾಗ್ಯ: ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ
Debit Card ಬಳಕೆದಾರರಿಗೆ ವಿಮಾ ಪ್ರಯೋಜನ ಉಚಿತವಾಗಿ ಸಿಗುತ್ತದೆ!
ಅನೇಕ ವಿಧದ ಡೆಬಿಟ್ ಕಾರ್ಡ್‌ಗಳಲ್ಲಿ ಉಚಿತ ವಿಮೆ ಲಭ್ಯವಿದೆ. ಇವುಗಳಲ್ಲಿ ಜೀವ ವಿಮಾ ಪ್ರಯೋಜನಗಳು ಸೇರಿವೆ. ಬ್ಯಾಂಕ್‌ಗಳು ಗ್ರಾಹಕರಿಗೆ ಡೆಬಿಟ್ ಕಾರ್ಡ್ ನೀಡಿದಾಗ, ಅವರು ಅವರಿಗೆ ಆಕಸ್ಮಿಕ ವಿಮೆ ಅಥವಾ ಜೀವ ವಿಮೆಯನ್ನು ಸಹ ಒದಗಿಸುತ್ತಾರೆ.
SBI ಪ್ರಕಾರ ಡೆಬಿಟ್ ಕಾರ್ಡ್ ಬಳಕೆದಾರರು ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತಾರೆ. ಡೆಬಿಟ್ ಕಾರ್ಡ್ ಆಧಾರದ ಮೇಲೆ ವಿಮಾ ಕವರೇಜ್ ಬದಲಾಗುತ್ತದೆ. ಡೆಬಿಟ್ ಕಾರ್ಡ್ ಹೊಂದಿರುವವರು ವಿಮಾ ಪ್ರಯೋಜನವನ್ನು ಪಡೆಯಲು ಅಪಘಾತದ ಮೊದಲ 90 ದಿನಗಳೊಳಗೆ ಒಮ್ಮೆಯಾದರೂ ಕಾರ್ಡ್ ಅನ್ನು ಬಳಸಬೇಕು.
ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಪಿಎಂ ಸ್ವನಿಧಿ ಯೋಜನೆ; ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ?
Debit Card ಬಳಸುವಾಗ ಎಚ್ಚರ: ಈ ಸಲಹೆ ಪಾಲಿಸಿ
ಡೆಬಿಟ್ ಕಾರ್ಡ್ ಗಳು ಜನ ಸಾಮಾನ್ಯರ ವ್ಯವಹಾರವನ್ನು ಸುಲಭವಾಗಿಸಿದ್ದು, ಹಣ ವಿತ್‌ಡ್ರಾ ಮಾಡುವುದು ಮಾತ್ರವಲ್ಲ, ಕಾರ್ಡ್ ಸ್ವೈಪ್ ಮಾಡಿ ಖರೀದಿಯನ್ನೂ ಮಾಡಬಹುದು.
ಹೀಗಾಗಿ ನಗದು ರಹಿತ ವ್ಯವಹಾರಗಳಿಗಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಡೆಬಿಟ್ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿಯುವ ಮೂಲಕ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ರಕ್ಷಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ವಿಡಿಯೋ ಕೃಪೆ – YOYO TV Kannada
Debit Card ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!
ಇನ್ನು, ಆನ್‌ಲೈನ್ ವಹಿವಾಟುಗಳನ್ನು ಮಾಡುವಾಗ ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಎಲ್ಲಿಯಾದರೂ ಸೇವ್ ಮಾಡುವ ಮೊದಲು, ವೆಬ್‌ಸೈಟ್ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸಿರಿ.
ನಿಮ್ಮ ಕಾರ್ಡ್ ಅನ್ನು ಯಾರಿಗೂ ಕೊಡಬೇಡಿ. ಪ್ರತಿ ಖರೀದಿಯ ನಂತರ ನೀವು ನಿಮ್ಮ ಕಾರ್ಡ್ ಅನ್ನು ವಾಪಸ್ ತೆಗೆದುಕೊಳ್ಳಿ. ವಹಿವಾಟಿನ ಸಮಯದಲ್ಲಿ ಯಾವುದೇ ಸಮಸ್ಯೆಯಾದರೆ ತಕ್ಷಣವೇ ಬ್ಯಾಂಕ್‌ಗೆ ವರದಿ ಮಾಡಿ. ಹೀಗೆ ಮಾಡಿದರೆ ನೀವು ಡೆಬಿಟ್ ಕಾರ್ಡ್ ವಂಚನೆಯಿಂದ ಪಾರಾಗುತ್ತೀರಿ.