Balipadyami : ಬಲಿಪಾಡ್ಯಮಿ ಅಥವಾ ದೀಪಾವಳಿ ಹಿಂದೂ ಹಬ್ಬವಾಗಿದ್ದು, ಇದನ್ನು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತದ ಹಿಂದೂಗಳು ಆಚರಿಸುತ್ತಾರೆ .
ವಾಮನ ರೂಪದಲ್ಲಿ ಬಲಿಯನ್ನು ಪಾತಾಳಕ್ಕೆ ತಳ್ಳಿದ ಬಳಿಕ ಬಲಿ ಚಕ್ರವರ್ತಿಗೆ ಆಶ್ವೇಜ ಮಾಸದಲ್ಲಿ ಮೂರು ದಿವಸಗಳ ಕಾಲ ಭೂಲೋಕಕ್ಕೆ ಬರುವ ವರ ನೀಡುತ್ತಾನೆ ವಿಷ್ಣು ಹಾಗೇ ಪಾತಾಳ ಲೋಕಕ್ಕೆ ಹೋದ ಬಲೀಂದ್ರನನ್ನು ವರ್ಷಕ್ಕೆ ಒಂದು ದಿನ ನೆನೆದು ಭೂಮಿಗೆ ಕರೆಯುವ ದಿನವೇ ಬಲಿಪಾಡ್ಯಮಿ. ಈ ದಿನ ಜನರು ಬಲಿಗೆ ಪೂಜೆ ಸಲಿಸುತ್ತಾರೆ.
ಇದನ್ನು ಓದಿ: Diwali Lakshmi Puja | ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ: ಲಕ್ಷ್ಮಿ ಪೂಜೆ ಮುಹೂರ್ತ ಯಾವಾಗ ಗೊತ್ತೇ?
Balipadyami : ಬಲಿಪಾಡ್ಯಮಿ ಮುಹೂರ್ತ
ದಿನ: ನ. 2ರಂದು ಶನಿವಾರ
ಪ್ರಾತಃ ಕಾಲ ಮುಹೂರ್ತ: ಶನಿವಾರ ಮುಂಜಾನೆ 06:34 ರಿಂದ 08:46 ರವರೆಗೆ ಸಾಯಂಕಾಲ ಮುಹೂರ್ತ: ಮಧ್ಯಾಹ್ನ 03:23 ರಿಂದ ಸಂಜೆ 05:35 ರವರೆಗೆ
Balipadyami ಪೂಜಾ ವಿಧಾನ
ಇಂದು ತುಳಸಿಕಟ್ಟೆಯ ಸಮೀಪ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಲಾಗುತ್ತದೆ. ಈ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಅಲ್ಲದೆ ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಗೆ ಪ್ರವೇಶಿಸದಂತೆ ಸಗಣಿಯಿ೦ದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ.
ಇದನ್ನೂ ಓದಿ: Diwali Lakshmi Puja | ಇಂದು ದೀಪಾವಳಿ, ಲಕ್ಷ್ಮಿ ಪೂಜೆ ಹೀಗೆ ಮಾಡಿ; ದೇವಿ ಕೃಪೆಗೆ ಪಾತ್ರರಾಗಿ
ಗೋಪೂಜೆ
ಈ ದಿನ ಬೆಳಗ್ಗೆಯೇ ದನದ ಕೊಟ್ಟಿಗೆಯನ್ನು ತೊಳೆದು, ಸೆಗಣಿಯಿಂದ ಗಣಪತಿಯನ್ನು ಮಾಡಿ, ಹೂವಿನಿಂದ ಸಿಂಗರಿಸಲಾಗುತ್ತದೆ. ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹಣೆದು ಕೊಟ್ಟಿಗೆಯಲ್ಲಿ ಸೆಗಣಿ ಬೆನಕನ ಪಕ್ಕದಲ್ಲಿ ಇಡಲಾಗುತ್ತದೆ. ಎಲ್ಲಾ ಹಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸಿ ಹಣ್ಣು ತುಂಬಿದ ನೈವೇದ್ಯ ನೀಡವುದು.