Brass items | ಹಿತ್ತಾಳೆ ವಸ್ತುಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

Brass items : ಹಿತ್ತಾಳೆಯು ಬಹುಮುಖ ವಸ್ತುವಾಗಿದ್ದು ಇದು ಕಾಫಿ ಟೇಬಲ್‌ಗಳು, ಲ್ಯಾಂಪ್‌ಗಳು ಮತ್ತು ಹೂದಾನಿಗಳು, ಡೋರ್ಕ್‌ನೋಬ್‌ಗಳು ಮತ್ತು ಇತರ ಹಾರ್ಡ್‌ವೇರ್‌ಗಳ ಬೇಸ್ ಸೇರಿದಂತೆ ಹಲವಾರು ಪರಿಕರಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಹಿತ್ತಾಳೆಯನ್ನು ಹೇಗೆ ಸ್ವಚ್ಛಗೊಳಿಸುವುದು…

Brass items

Brass items : ಹಿತ್ತಾಳೆಯು ಬಹುಮುಖ ವಸ್ತುವಾಗಿದ್ದು ಇದು ಕಾಫಿ ಟೇಬಲ್‌ಗಳು, ಲ್ಯಾಂಪ್‌ಗಳು ಮತ್ತು ಹೂದಾನಿಗಳು, ಡೋರ್ಕ್‌ನೋಬ್‌ಗಳು ಮತ್ತು ಇತರ ಹಾರ್ಡ್‌ವೇರ್‌ಗಳ ಬೇಸ್ ಸೇರಿದಂತೆ ಹಲವಾರು ಪರಿಕರಗಳ ಮೇಲೆ ಕಾಣಿಸಿಕೊಳ್ಳುತ್ತದೆ.

ಹಿತ್ತಾಳೆಯನ್ನು ಹೇಗೆ ಸ್ವಚ್ಛಗೊಳಿಸುವುದು ಎಂದು ತಿಳಿಯುವುದು ಬಹಳ ಮುಖ್ಯ. ಹಿತ್ತಾಳೆಯ ಹೊಳಪನ್ನು ಮರಳಿ ತರಲು ಮತ್ತು ಅದನ್ನು ಹೊಳೆಯುವಂತೆ ಮಾಡುವ ಕೆಲವು ವಿಧಾನಗಳು ಇಲ್ಲಿವೆ.

Cleaning brass items : ನಿಂಬೆ, ಉಪ್ಪು

ಹಿತ್ತಾಳೆ ವಸ್ತುಗಳು ಫಳ-ಫಳ ಎಂದು ಹೊಳೆಯಲು ನಿಂಬೆ ರಸ ಹಾಗೂ ಉಪ್ಪನ್ನು ಗಟ್ಟಿಯಾಗಿ ಪೇಸ್ಟ್ ಮಾಡಿಕೊಳ್ಳಿ. ನಂತರ ಹಿತ್ತಾಳೆ ಪಾತ್ರೆಗಳಿಗೆ ಈ ಪೇಸ್ಟ್ ಹಚ್ಚಿ ಉಜ್ಜಿ. ಹತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

Vijayaprabha Mobile App free

ಇದನ್ನೂ ಓದಿ: Atal Pension Yojana | ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳೇನು?

Cleaning brass items  : ಬೇಕಿಂಗ್ ಸೋಡಾ, ವಿನೆಗ‌ರ್

ಹಿತ್ತಾಳೆ ಪಾತ್ರೆ ತೊಳೆಯಲು ಸೋಡಾ & ವಿನೆಗರ್ ಪೇಸ್ಟ್ ಮಾಡಿಟ್ಟುಕೊಳ್ಳಿ.

ಇದರಿಂದ ಹಿತ್ತಾಳೆ ಪಾತ್ರೆಗಳನ್ನು ಉಜ್ಜಿ 15 ನಿಮಿಷಗಳ ಕಾಲ ಬಿಡಿ. ಬಳಿಕ ಹತ್ತಿ ಬಟ್ಟೆಯಿಂದ ಸ್ಮಬ್ ಮಾಡುತ್ತಲೇ ಇದ್ದರೆ ಹಿತ್ತಾಳೆ ವಸ್ತುಗಳು ಸ್ವಚ್ಛವಾಗುತ್ತದೆ.

Cleaning brass items ಟೊಮೆಟೊ ಕೆಚಪ್

ಹಿತ್ತಾಳೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಹತ್ತಿ ಬಟ್ಟೆಯ ಮೇಲೆ ಟೊಮೆಟೊ ಕೆಚಪ್ ಹಚ್ಚಿಕೊಂಡು ಹಿತ್ತಾಳೆ ವಸ್ತುಗಳನ್ನು 15 ನಿಮಿಷಗಳ ಕಾಲ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.

ಅರಿಶಿನ

ಇನ್ನು, ಸಾಸಿವೆ ಎಣ್ಣೆಯನ್ನು ಅರಿಶಿನ ಪುಡಿಯೊಂದಿಗೆ ಬೆರೆಸಿ, ಕಂಚು ಮತ್ತು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಹೀಗೆ ಸುಲಭವಾಗಿ ತೊಳೆಯುವುದರಿಂದ ಎಲ್ಲಾ ಪಾತ್ರೆಗಳು ಹೊಸದರಂತೆ ಹೊಳೆಯುತ್ತದೆ.

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆಯಡಿ ಪ್ರತಿ ತಿಂಗಳು ರೂ.5 ಸಾವಿರ; ಖಾತೆ ತೆರೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಿನೆಗ‌ರ್, ಮೈದಾ

ಹಿತ್ತಾಳೆ ವಸ್ತುಗಳನ್ನು ಸ್ವಚ್ಛಗೊಳಿಸಲು ಮೈದಾ ಹಿಟ್ಟು & ವಿನೆಗ‌ರ್ ಮಿಶ್ರಣ ಪೇಸ್ಟ್ ನ್ನು ಹಿತ್ತಾಳೆ ಪಾತ್ರೆಗಳಿಗೆ ಹಚ್ಚಿ. ಎರಡು ಗಂಟೆಗಳ ಕಾಲ ಬಿಡಿ. ಅದಾದ ನಂತರ ಉತ್ತಮ ಬಟ್ಟೆಯನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ.

ನಿಂಬೆ ರಸ & ಅಡಿಗೆ ಸೋಡಾ

ನಿಂಬೆ ರಸ & ಅಡಿಗೆ ಸೋಡಾವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಬೇಕು ಹಿತ್ತಾಳೆ ವಸ್ತುಗಳನ್ನು ಈ ಪೇಸ್ಟ್‌ನಲ್ಲಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಬ್ರಷ್ ಸಹಾಯದಿಂದ ಸ್ವಚ್ಛಗೊಳಿಸಿ.

ಹುಣಸೆ

ಹುಣಸೆಹಣ್ಣನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಮಿಶ್ರಣ ಮಾಡಿ, ಮಿಶ್ರಣದಲ್ಲಿ ಹುಣಸೆ ಹಣ್ಣಿನ ಗಟ್ಟಿಯಾದ ನಾರುಗಳನ್ನು ಬಳಸಿಕೊಂಡು ಹಿತ್ತಾಳೆ ಅಥವಾ ತಾಮ್ರದ ಸಾಮಾಗ್ರಿಗಳು ಹಾಗೂ ಹಿತ್ತಾಳೆಯ ವಿಗ್ರಹಗಳನ್ನು ತುಂಬಾ ಸುಲಭವಾಗಿ ಸ್ವಚ್ಛಗೊಳಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.