BPL card : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಬಿಪಿಎಲ್ ಕಾರ್ಡ್‌ದಾರರಿಗೆ (BPL card holders) ಗುಡ್‌ನ್ಯೂಸ್ ನೀಡಿದೆ.
ಹೌದು, ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ಅರ್ಹರಿಗೆ ಉಚಿತ ರೇಷನ್ (Free ration) ನೀಡಲಾಗುತ್ತದೆ. ಈ ವಿತರಣಾ ವ್ಯವಸ್ಥೆಯ ತಂತ್ರಾಂಶವನ್ನು ಮೊದಲು NIC ಯಿಂದ ನಿರ್ವಹಿಸಲಾಗುತ್ತಿತ್ತು. ಈ ತಿಂಗಳಾಂತ್ಯದಿಂದ ʼʼಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ʼʼನಿಂದ ನಿರ್ವಹಣೆ ಮಾಡಲಾಗುತ್ತದೆ.
ಇದನ್ನೂ ಓದಿ: Anila Bhagya Yojana : ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್; ಸಿಗುವ ಸೌಲಭ್ಯಗಳು, ಪಡೆಯುವ ವಿಧಾನ ಹೇಗೆ..?
ಇದರಿಂದ ಸಾಫ್ಟ್‌ವೇರ್ ಯಾವುದೇ ಲೋಡಿಂಗ್ ಇಲ್ಲದೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ತಿಂಗಳ ಪಡಿತರವನ್ನು ತಿಂಗಳ ಅಂತ್ಯಕ್ಕೆ ವಿತರಣೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಈ ವ್ಯಾಪ್ತಿಗೆ ಬಂದರೆ ನಿಮ್ಮ BPL card ವಾಪಾಸ್ ಕೊಟ್ಟು ಬಿಡಿ
ಇನ್ನು, ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ಗಳು ಬೇಕಾಬಿಟ್ಟಿಯಾಗಿ ವಿತರಣೆಯಾಗಿರುವ ಆರೋಪಗಳು ಕೇಳಿ ಬರುತ್ತಲೇ ಇದ್ದು, ಸರ್ಕಾರದ ಮಾನದಂಡ ವಿರುದ್ಧವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಹೌದು, ಸರ್ಕಾರದಿಂದ ವೇತನ ಪಡೆಯುತ್ತಿರುವವರು ಮತ್ತು ಕಾರು ಹಾಗೂ ಟ್ಯಾಕ್ಟರ್ ಇದ್ದು, ಬಿಪಿಎಲ್ ಪಡಿತರ ಚೀಟಿ ಪಡೆದವರಿಗೆ ಭಾರೀ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ