Rabies : ರೇಬೀಸ್ ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?

Rabies : ರೇಬೀಸ್ ಎನ್ನುವುದು ಮಾರಣಾಂತಿಕ ವೈರಸ್. ಇದು ಸೋಂಕು ಬಾಧಿತ ಪ್ರಾಣಿಗಳ ಜೊಲ್ಲಿನಿಂದ ಹರಡುತ್ತದೆ. ಯಾವುದೇ ಪ್ರಾಣಿ ಕಚ್ಚಿದಾಗ ರೇಬೀಸ್ ವೈರಸ್ ಹರಡುತ್ತದೆ. ರೇಬೀಸ್ ಹರಡುತ್ತದೆ ಎ೦ದು ಭಯವಿದ್ದರೆ ರೇಬೀಸ್ ಚುಚ್ಚು ಮದ್ದನ್ನು…

Rabies disease

Rabies : ರೇಬೀಸ್ ಎನ್ನುವುದು ಮಾರಣಾಂತಿಕ ವೈರಸ್. ಇದು ಸೋಂಕು ಬಾಧಿತ ಪ್ರಾಣಿಗಳ ಜೊಲ್ಲಿನಿಂದ ಹರಡುತ್ತದೆ. ಯಾವುದೇ ಪ್ರಾಣಿ ಕಚ್ಚಿದಾಗ ರೇಬೀಸ್ ವೈರಸ್ ಹರಡುತ್ತದೆ. ರೇಬೀಸ್ ಹರಡುತ್ತದೆ ಎ೦ದು ಭಯವಿದ್ದರೆ ರೇಬೀಸ್ ಚುಚ್ಚು ಮದ್ದನ್ನು ತೆಗೆದುಕೊಂಡು ರಕ್ಷಣೆ ಪಡೆಯಬಹುದಾಗಿದೆ.

ರೇಬೀಸ್ ರೋಗ ಲಕ್ಷಣಗಳು

ಇನ್ನು, ಯಾವುದೇ ಪ್ರಾಣಿ ಕಚ್ಚಿದ ಮೇಲೆ ರೇಬೀಸ್ ವೈರಸ್ ಮನುಷ್ಯನ ದೇಹ ಹೊಕ್ಕಿದ ಮೇಲೆ ರೋಗ ಲಕ್ಷಣಗಳು ಕಂಡು ಬರಲು 3 ವಾರದಿಂದ 3 ತಿಂಗಳು ಸಮಯ ತೆಗೆದುಕೊಳ್ಳಬಹುದು. ರೇಬೀಸ್ ಪ್ರಾರಂಭದ ಲಕ್ಷಣಗಳೆಂದರೆ ಜ್ವರ, ಸ್ನಾಯುಗಳು ದುರ್ಬಲವಾಗುವುದು, ಕಚ್ಚಿರುವ ಜಾಗದಲ್ಲಿ ನೋವು ಅಥವಾ ಉರಿ ಕಂಡು ಬರುವುದು.

ಇದನ್ನೂ ಓದಿ: Mental health : ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಚಟುವಟಿಕೆಗಳು ಸಹಕಾರಿ

Vijayaprabha Mobile App free

ಈ ಪ್ರಾಣಿಗಳಿಂದ ರೇಬೀಸ್ ಹರಡುತ್ತದೆ ಬಣ

  • ನಾಯಿ
  • ಬಾವಲಿ
  • ಬೆಕ್ಕು
  • ಹಸು
  • ಆಡು
  • ಕುದುರೆ
  • ಮೊಲ
  • ನರಿ
  • ಮಂಗ

ಯಾರಿಗೆ ರೇಬೀಸ್ ಅಪಾಯ ಹೆಚ್ಚು?

  • ಪ್ರಾಣಿಗಳಿಗೆ ಲಸಿಕೆ ಅಥವಾ ಚಿಕಿತ್ಸೆ ನೀಡದಿದ್ದ ಕಡೆ ಇರುವುದು.
  • ಬಾವಲಿ ಹೆಚ್ಚಾಗಿರುವ ಇರುವ ಕಡೆ ವಾಸಿಸುತ್ತಿರುವವರಲ್ಲಿ.
  • ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕಡೆ ಪ್ರಯಾಣ ಮಾಡುವವರಲ್ಲಿ.
  • ಕಾಡಿನಲ್ಲಿ ಹೆಚ್ಚು ಕ್ಯಾಂಪ್ ಮಾಡುವವರಲ್ಲಿ.
  • 15 ವರ್ಷದ ಕೆಳಗಿನ ಮಕ್ಕಳಲ್ಲಿ.

ಇದನ್ನೂ ಓದಿ: Medicines : ಔಷಧಗಳ ಬಳಕೆ ಕುರಿತು ಎಚ್ಚರವಿರಲಿ; ಇವು ತಿಳಿದಿರಲಿ

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

ಯಾವುದೇ ಪ್ರಾಣಿಯು ನಿಮಗೆ ಕಚ್ಚಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ವೈದ್ಯರು ನಿಮಗೆ ರೇಬೀಸ್ ವಿರೋಧಿ ಚುಚ್ಚು ಮದ್ದು ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ತಿಳಿಸುತ್ತಾರೆ. ನಿಮಗೆ ಪ್ರಾಣಿ ಕಚ್ಚಿದೆಯಾ, ಇಲ್ಲವಾ ಎನ್ನುವ ಬಗ್ಗೆ ಗೊ೦ದಲವಿದ್ದರೂ ನೀವು ವೈದ್ಯರನ್ನು ಭೇಟಿ ಮಾಡಬಹುದು.

ರೇಬೀಸ್ ರೋಗವನ್ನು ಗುಣಪಡಿಸಬಹುದೇ?

ಒಮ್ಮೆ ವ್ಯಕ್ತಿಗೆ ರೇಬೀಸ್ ಬ೦ದರೆ ಗುಣಪಡಿಸುವುದು ಕಷ್ಟ. ರೇಬೀಸ್ ವೈರಸ್ ತಗುಲಿದ ತಕ್ಷಣವೇ ಸರಣಿ ಚುಚ್ಚುಮದ್ದು ತೆಗೆದುಕೊಳ್ಳಬೇಕು. ಪ್ರಾಣಿಗಳು ಕಚ್ಚಿದಾಗ ಅವುಗಳಿಗೆ ರೇಬೀಸ್ ಇದೆಯೇ ಎ೦ದು ಪರೀಕ್ಷೆ ಮಾಡಿಸುವುದು ಒಳ್ಳೆಯದು. ಒಂದು ವೇಳೆ ಕಚ್ಚಿದ ಪ್ರಾಣಿ ಸಿಗದೇ ಹೋದರೆ ನೀವು ಬೇಗನೆ ಚುಚ್ಚು ಮದ್ದು ಪಡೆಯುವುದು ಒಳ್ಳೆಯದು.

ಇದನ್ನೂ ಓದಿ: ಮಾರಣಾಂತಿಕ ಮೆದುಳಿನ ಗೆಡ್ಡೆಯ ರೋಗ ಲಕ್ಷಣಗಳೇನು? ಚಿಕಿತ್ಸೆ ಹೇಗೆ..? ಸೇವಿಸಬೇಕಾದ ಆಹಾರಗಳು..!

ರೇಬೀಸ್ ತಡೆಗಟ್ಟುವುದು ಹೇಗೆ?

  • ಬೇರೆ ದೇಶಗಳಿಗೆ ಪ್ರಯಾಣಿಸುವ ಮುನ್ನ ರೇಬೀಸ್ ತಡೆಗಟ್ಟುವ ಚುಚ್ಚುಮದ್ದು ಪಡೆಯಿರಿ.
  • ನಿಮ್ಮ ಸಾಕು ಪ್ರಾಣಿಗಳಿಗೆ ಚುಚ್ಚುಮದ್ದು ಹಾಕಿಸಿ.
  • ನಿಮ್ಮ ಸಾಕು ಪ್ರಾಣಿಗಳನ್ನು ಹೊರಡಗೆ ತಿರುಗಾಡಲು ಬಿಡಬೇಡಿ.
  • ಕಾಡು ಪ್ರಾಣಿಗಳ ಸಂಪರ್ಕದಿಂದ ದೂರವಿರಿ.
  • ನೀವಿರುವ ಕಡೆ ಬಾವಲಿಗಳು ಇರದಂತೆ ನೋಡಿಕೊಳ್ಳಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.