Young woman killed mother : ಇದೊಂದು ವಿಚಿತ್ರ ಪ್ರೇಮ ಕತೆಯ ಕೊಲೆ ಪ್ರಕರಣ. ಯೂಪಿಯ ಅಲ್ಲಾಪುರ ಎಂಬಲ್ಲಿ 35 ವರ್ಷದ ಅಲ್ಕಾ ಎಂಬಾಕೆ ತನ್ನ 17 ವರ್ಷದ ಮಗಳ ಪ್ರೇಮ ಕತೆಗಳಿಂದ ಬೇಸತ್ತಿದ್ದಳು.
ಆಕೆ ತನ್ನ ವಠಾರದ ಒಬ್ಬ ಹುಡುಗನೊಂದಿಗೆ ಪರಾರಿಯಾದಾಗ ಹುಡುಕಿ ಕರೆದುಕೊಂಡು ಬಂದಳು. ಕೆಲವು ದಿನ ಮಗಳನ್ನು ತನ್ನ ಸಹೋದರನ ಮನೆಗೆ ಕಳಿಸಿದ್ದಳು. ಅಲ್ಲಿಯೂ ಅವಳು ಒಬ್ಬನ ಜೊತೆ ಫ್ಲರ್ಟ್ ಮಾಡಿದಳು. ಸಿಟ್ಟಾದ ಮಾವ, ಆಕೆಯನ್ನು ಮನೆಗೆ ಕಳುಹಿಸಿದ. ನೊಂದ ತಾಯಿ, ಮಗಳ ಕೊಲೆಗೆ ಸುಭಾಸ್ ಸಿಂಗ್ ಎಂಬಾತನಿಗೆ ಸುಪಾರಿ ಕೊಟ್ಟಳು.
ಇದನ್ನೂ ಓದಿ: Ballary GangRape: ತಡರಾತ್ರಿ ನುಗ್ಗಿ ಅತ್ತೆ, ಸೊಸೆಯ ಮೇಲೆ ಸಾಮೂಹಿಕ ಅತ್ಯಾಚಾರ!
ಟ್ವಿಸ್ಟ್ ಇರುವುದೇ ಇಲ್ಲಿ…
ಹೌದು, ಆಕೆಯಿಂದ ಸುಪಾರಿ ಪಡೆದವನೇ ಅಲ್ಕಾಳ ಮಗಳ ಜೊತೆ ಫ್ಲರ್ಟ್ ಮಾಡುತ್ತಿದ್ದ ವ್ಯಕ್ತಿಯಾಗಿದ್ದ. ಇದು ಮಗಳಿಗೆ ಗೊತ್ತಾಯಿತು. ನನ್ನ ಬದಲು ನನ್ನ ತಾಯಿಯನ್ನು ಕೊಲೆ ಮಾಡಿದರೆ ನಿನ್ನ ಮದುವೆಯಾಗ್ತೀನಿ ಎಂದು ಆತನಿಗೆ ಹೇಳಿದಳು.
ಅದರಂತೆ ಸುಭಾಸ್ ಸಿಂಗ್ ತನಗೆ ಸುಪಾರಿ ಕೊಟ್ಟ ಅಲ್ಕಾಳನ್ನೇ ಕೊಂದಿದ್ದಾನೆ. ಈಗ ಇಬ್ಬರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಾಯಿ- ಮಗಳೇ ಪರಸ್ಪರ ಕೊಲೆಗೆ ಯೋಚಿಸಿದ್ದರ ಬಗ್ಗೆ ಜನ ಮರುಕಪಡುತ್ತಿದ್ದಾರೆ, ಜೊತೆಗೆ ನಗುತ್ತಿದ್ದಾರೆ.