Strawberry fruit : ವಿಟಮಿನ್ ಸಿ ಸೇರಿದಂತೆ ಸ್ಟ್ರಾಬೆರಿಗಳಲ್ಲಿನ (Strawberry) ಉತ್ಕರ್ಷಣ ನಿರೋಧಕಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವುದಲ್ಲದೆ, ನೀವು ಸೂಕ್ಷ್ಮಜೀವಿಗಳಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಸ್ಟ್ರಾಬೆರಿಗಳು ಉರಿಯೂತವನ್ನು ನಿಗ್ರಹಿಸಲು, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಮತ್ತು ಅಧಿಕ ಕೊಲೆಸ್ಟ್ರಾಲ್, ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ.
ಸ್ಟ್ರಾಬೆರಿ ಹಣ್ಣಿನಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳು – Strawberry fruit Benefits
- ಹೃದಯಕ್ಕೆ ಒಳ್ಳೆಯದು
- ಸಕ್ಕರೆ ಮಟ್ಟ ನಿಯಂತ್ರಣ
- ರೋಗ ನಿರೋಧಕ ಶಕ್ತಿ
- ಕಡಿಮೆ ರಕ್ತದೊತ್ತಡ
- ಉತ್ತಮ ಸ್ಮರಣ ಶಕ್ತಿ
ಇದನ್ನೂ ಓದಿ: ಈ ಸಮಸ್ಯೆಗಳಿದ್ದಲ್ಲಿ ರಾತ್ರಿ ಭಯಾನಕ ಕನಸು ಬೀಳುತ್ತವೆ
1. ಹೃದಯಕ್ಕೆ ಒಳ್ಳೆಯದು – Good for the heart
ಸ್ಟ್ರಾಬೆರಿ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು & ಪಾಲಿಫಿನಾಲ್‌ಗಳು ಸಮೃದ್ಧವಾಗಿದ್ದು, ಇವು ಹೃದಯದ ಆರೋಗ್ಯಕ್ಕೆ ಅವಶ್ಯಕವಾಗಿವೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ಹೃದ್ರೋಗ ಎದುರಾಗುವ ಅಪಾಯದ ಸಾಧ್ಯತೆಯನ್ನು ತಗ್ಗಿಸಿ ಆರೋಗ್ಯವನ್ನು ಕಾಪಾಡುತ್ತದೆ.
2. ಸಕ್ಕರೆ ಮಟ್ಟ ನಿಯಂತ್ರಣ – Sugar level control
ಸ್ಟ್ರಾಬೆರಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹ ಇರುವ ವ್ಯಕ್ತಿಗಳಿಗೆ ಕಡಿಮೆ ಗ್ಲಾಯ್ ಸೆಮಿಕ್ ಸೂಚ್ಯಂಕ ಹೊಂದಿರುವ & ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ಸ್ಟ್ರಾಬೆರಿ ಹಣ್ಣುಗಳು ಅತಿ ಸೂಕ್ತವಾಗಿವೆ.
ಇದನ್ನೂ ಓದಿ: Alzheimer disease : ಆಲ್‌ಝಮರ್ ಕಾಯಿಲೆ ಹಂತಹಂತವಾಗಿ ವ್ಯಕ್ತಿಯನ್ನು ಹೇಗೆಲ್ಲಾ ಕಾಡುತ್ತೆ ಗೊತ್ತಾ..?
3. ರೋಗ ನಿರೋಧಕ ಶಕ್ತಿ – Immunity
ರೋಗ ನಿರೋಧಕ ಶಕ್ತಿ ಬಲವಾಗಿರಲು ವಿಟಮಿನ್ ಸಿ ಅಗತ್ಯವಾಗಿದ್ದು, ಸ್ಟ್ರಾಬೆರಿ ಹಣ್ಣುಗಳಲ್ಲಿ ವಿಟಮಿನ್ ಸಿ ಉತ್ತಮವಾಗಿದ್ದು, ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಬಲವಾಗಿ, ಹಲವಾರು ಸೋ೦ಕು & ಬ್ಯಾಕ್ಟಿರಿಯಾಗಳ ದಾಳಿಯಿ೦ದ ರಕ್ಷಿಸುತ್ತದೆ.
4. ಕಡಿಮೆ ರಕ್ತದೊತ್ತಡ – low blood pressure
ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು & ಇತರ ಸಂಯುಕ್ತಗಳು ನಮ್ಮ ದೇಹವನ್ನು ನಿರಾಳಗೊಳಿಸಲು ನೆರವಾಗುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ರಕ್ತನಾಳಗಳು ಸಡಿಲಗೊಳಿಸಿ, ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.
ಇದನ್ನೂ ಓದಿ: ದಿನಕ್ಕೊಂದು ಖರ್ಜೂರ ಸೇವಿಸುವುದರಿಂದ ಆಗುವ ಪ್ರಯೋಜನಗಳು..!
5. ಸ್ಮರಣ ಶಕ್ತಿ ಉತ್ತಮ – Good memory
ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ ಸ್ಮರಣ ಶಕ್ತಿಯನ್ನು ಉತ್ತಮಗೊಳಿಸುತ್ತವೆ. ಅಲ್ಲದೇ ಕ್ಯಾನ್ಸರ್ ಕಾರಕ ಫ್ರೀ ರಾಡಿಕಲ್ ಎ೦ಬ ಕಣಗಳಿಂದ ಎದುರಾಗುವ ಘಾಸಿಯಿಂದ ದೇಹವನ್ನು ರಕ್ಷಿಸುತ್ತದೆ.




