ತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ; ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ಈ ತುಂಬೆಗಿಡ

ತುಂಬೆಯ ಹೂವು ಪೂಜೆಗಳಲ್ಲಿ ಬಳಕೆಯಾಗುವ ಶ್ರೇಷ್ಠ ಹೂವು. ವಿಶೇಷ ಪ್ರಯತ್ನವಿಲ್ಲದೆ ಎಲ್ಲ ಕಡೆಗಳಲ್ಲಿ ಬೆಳೆಯುವ ಗಿಡ. ಬೀಜದಿಂದ ಗಿಡ ಬೆಳೆಸಿ 2-3 ತಿಂಗಳ ನಂತರ ಬಳಸಬಹುದು. ಸ್ವಲ್ಪ ತೇವಾಂಶ ಹಾಗೂ ಮರಳು ಮಿಶ್ರಿತ ಮಣ್ಣಿನಲ್ಲಿ…

thumbe vijayaprabha

ತುಂಬೆಯ ಹೂವು ಪೂಜೆಗಳಲ್ಲಿ ಬಳಕೆಯಾಗುವ ಶ್ರೇಷ್ಠ ಹೂವು. ವಿಶೇಷ ಪ್ರಯತ್ನವಿಲ್ಲದೆ ಎಲ್ಲ ಕಡೆಗಳಲ್ಲಿ ಬೆಳೆಯುವ ಗಿಡ. ಬೀಜದಿಂದ ಗಿಡ ಬೆಳೆಸಿ 2-3 ತಿಂಗಳ ನಂತರ ಬಳಸಬಹುದು. ಸ್ವಲ್ಪ ತೇವಾಂಶ ಹಾಗೂ ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ತುಂಬೆಗೆ ಸಂಸ್ಕೃತದಲ್ಲಿ ‘ದ್ರೋಣ ಪುಷ್ಟ ಎನ್ನುವರು. ಅಂದರೆ ದೋಣಿಯಂತಿರುವ ಹೂವು, ಕಾಂಡ, ಜ್ವರ, ಕಾಮಾಲೆ, ಚರ್ಮರೋಗ, ಶೀತ, ನೆಗಡಿ ಮುಂತಾದ ರೋಗಗಳಿಗೆ ಉಪಯುಕ್ತ.

ತುಂಬೆ ಗಿಡದ ಉಪಯೋಗಗಳು

1. ಒಣಗಿದ ಶುಭ್ರವಾದ ಎಲೆ, ಹೂವು ಮತ್ತು ಕಾಂಡವನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಬೇಕು. ಎರಡು ಚಮಚ ಪುಡಿಗೆ 2 ಲೋಟ ನೀರು ಬೆರೆಸಿ ಕುದಿಸಿ ಅರ್ಧ ಲೋಟಕ್ಕೆ ಇಂಗಿಸಬೇಕು. ನಂತರ ಶೋಧಿಸಿ ಪ್ರತಿ ಸಾರಿ ಕಾಲು ಲೋಟದಂತೆ 2-3 ಬಾರಿ ಕೊಡುವುದರಿಂದ ಜ್ವರ ಕಡಿಮೆಯಾಗುತ್ತದೆ.

Vijayaprabha Mobile App free

2, ಬಹಳ ಹಳೆಯದಾದ ಚರ್ಮ ರೋಗಗಳು ಮತ್ತು ನೋವಿನಿಂದ ಕೂಡಿದ ಊತಗಳಲ್ಲಿ ತುಂಬೆ ಎಲೆಯ ರಸವನ್ನು ಲೇಪಿಸುವುದರಿಂದ ಬಹಳ ಒಳ್ಳೆಯ ಪರಿಣಾಮ ಕಂಡು ಬರುತ್ತದೆ.

3. ಗೌತಲಮ್ಮ ಅಥವಾ ಮಂಗನ ಬಾವು, ಗದಕಟ್ಟುಗಳಲ್ಲಿ ಒಂದು ಭಾಗ ತುಂಬೆಯ ಎಲೆಗೆ ಕಾಲು ಭಾಗ ಬೆಲ್ಲ ಸೇರಿಸಿ ಅರೆದು ಮೇಲೆ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತ್ತದೆ.

4. ನೆಗಡಿ ಶೀತದಲ್ಲಿ ತುಂಬೆ ಹೂಗಳ ರಸ 10-15 ಹನಿ, ಜೇನು ತುಪ್ಪ 20-30 ಹನಿಗಳನ್ನು ಬೆರಸಿ ಅದಕ್ಕೆ ಅರ್ಧ ಚಿಟಿಕೆ ಬಿಳಿಗಾದ ಪುಡಿ ಸೇರಿಸಿ ದಿನದಲ್ಲಿ 3-4 ಬಾರಿ ಆಹಾರಕ್ಕೆ ಮುಂಚೆ ಸೇವಿಸುವುದರಿಂದ ಕಡಿಮೆಯಾಗುತ್ತದೆ.

5. ಎಲೆಗಳ ರಸವನ್ನು (6 ಚಮಚೆಯಷ್ಟು) 3 ಚಮಚ ಜೇನಿನೊಂದಿಗೆ ಸೇವಿಸಲು ಕಾಮಾಲೆ ರೋಗ ನಿವಾರಿಸಬಹುದು.

ಇದನ್ನು ಓದಿ: ಮುಟ್ಟಿದರೆ ಮುನಿ ಗಿಡದ ಔಷಧಿಯ ಗುಣಗಳು ಮತ್ತು ಅದರ ಮಹತ್ವ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.