Google Pay : ನೀವು ಗೂಗಲ್ ಪೇ ಬಳಸುತ್ತೀರಾ? ಹಾಗಾದರೆ ನಿಮಗೆ ಉತ್ತಮ ಅವಕಾಶ. ನಿಮಗೆ ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಹಣ ಅಗತ್ಯ ಇದ್ದರೆ ನಿಮ್ಮ ಗೂಗಲ್ ಪೇ ಅಕೌಂಟ್ ಮೂಲಕ ಇನ್ನು ಮುಂದೆ ಸಾಲಗಳನ್ನು ಪಡೆದುಕೊಳ್ಳಬಹುದು. ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ಸ್, ಬಂಗಾರದ ಮೇಲಿನ ಸಾಲ ನೀಡಲು ಗೂಗಲ್ ನಿರ್ಧಾರ ತೆಗೆದುಕೊಂಡಿದೆ.
Google Pay ನಲ್ಲಿ ಚಿನ್ನದ ಸಾಲ
ಹೌದು, ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ಸ್, ಬಂಗಾರದ ಮೇಲಿನ ಸಾಲ ನೀಡಲು ಗೂಗಲ್ ನಿರ್ಧಾರ ತೆಗೆದುಕೊಂಡಿದ್ದು,ಇದಕ್ಕೆ ಆದಿತ್ಯ ಬಿರ್ಲಾ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಸಂಸ್ಥೆಗಳೊಂದಿಗೆ ಪ್ರಮುಖ ಒಪ್ಪಂದಗಳನ್ನೂ ಮಾಡಿಕೊಂಡಿದೆ.
ಇದನ್ನೂ ಓದಿ: PF pension : ಪಿಎಫ್ ಹೊಂದಿರುವ ಉದ್ಯೋಗಿಗಳಿಗೆ ಗುಡ್ ನ್ಯೂಸ್; ಪ್ರತಿ ತಿಂಗಳು ರೂ.10 ಸಾವಿರ ಪಿಂಚಣಿ..!
Google ನ ಮೊಬೈಲ್ ಪಾವತಿ ಸೇವೆ ಅಪ್ಲಿಕೇಶನ್ Google Pay ಬಳಕೆದಾರರಿಗಾಗಿ ಹೊಸ ಚಿನ್ನದ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಗೂಗಲ್ ಇಂಡಿಯಾ ಮುತ್ತೂಟ್ ಫೈನಾನ್ಸ್ ಜೊತೆ ಪಾಲುದಾರಿಕೆಯನ್ನು ಪ್ರಕಟಿಸಿದೆ. ಇದರೊಂದಿಗೆ, ಸಣ್ಣ ವ್ಯಾಪಾರಿಗಳು ಮತ್ತು ಇತರ ಗ್ರಾಹಕರು ಗೂಗಲ್ ಪೇ ಮೂಲಕ ಚಿನ್ನದ ಆಭರಣಗಳ ಮೇಲೆ ಸಾಲವನ್ನು ಪಡೆಯಬಹುದು. Google Pay ಚಿನ್ನದ ಸಾಲಗಳಿಗಾಗಿ ಮತ್ತೊಂದು NBFC ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಕೈಜೋಡಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ 3 ವರ್ಷ ಇರ್ತಾರೋ, 5 ವರ್ಷ ಇರ್ತಾರೋ ಗೊತ್ತಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಆದಿತ್ಯ ಬಿರ್ಲಾ ಫೈನಾನ್ಸ್‌ನೊಂದಿಗಿನ ಒಪ್ಪಂದದ ಮೂಲಕ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸಾಲವನ್ನು ಒದಗಿಸುವುದಾಗಿ ಅದು ಹೇಳಿದೆ. ಆರ್ಥಿಕ ಅಗತ್ಯಗಳಿಗಾಗಿ ರೂ. 10 ಸಾವಿರದಿಂದ ಸಾಲ ನೀಡಲು ಸಿದ್ಧ ತಿಳಿಸಿದೆ. ಚಿನ್ನದ ಸಾಲದ ವಿಷಯಕ್ಕೆ ಬಂದರೆ, ಸಾಲ ಮಂಜೂರು ಮಾಡಿದ ನಂತರ, ಅಡಮಾನ ಇಟ್ಟಿರುವ ಚಿನ್ನದ ಸಂರಕ್ಷಣೆ ಮತ್ತು ನಿರ್ವಹಣೆ ಮುತ್ತೂಟ್ ಕೈಯಲ್ಲಿರುತ್ತದೆ ಎಂದು ಮುತ್ತೂಟ್ ಹೇಳಿದೆ. ಇಲ್ಲಿ Google ಸಾಲಗಾರರನ್ನು ಸಾಲದಾತರೊಂದಿಗೆ ಸಂಪರ್ಕಿಸುವ ಸಂಬಂಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದೆ.




